• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಚೀನಾ ನೀಡಿದ ಕೆಟ್ಟ ಉಡುಗೊರೆ ಕೊರೊನಾ': ಡೊನಾಲ್ಡ್ ಟ್ರಂಪ್ ವಾಗ್ದಾಳಿ

|
Google Oneindia Kannada News

ವಾಷಿಂಗ್ಟನ್, ಜೂನ್ 5: ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ದೇಶವನ್ನು ವಿಶ್ವದ ಅನೇಕ ರಾಷ್ಟ್ರಗಳು ದ್ವೇಷಿಸುತ್ತಿದೆ. ಅದರಲ್ಲೂ ವಿಶ್ವದ ದೊಡ್ಡಣ್ಣ ಅಮೆರಿಕ ಅಂತೂ ಚೀನಾ ಕಂಡರೆ ಉರಿದುಬೀಳುತ್ತಿದೆ.

ಸತತವಾಗಿ ಚೀನಾ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಡೊನಾಲ್ಡ್ ಟ್ರಂಪ್, ಇಂದು ಮತ್ತೆ ಚೀನಾವನ್ನು ಟೀಕಿಸಿದ್ದಾರೆ. ವೈಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದ ಟ್ರಂಪ್ ''ಕೊರೊನಾ ಚೀನಾ ನೀಡಿದ ಕೆಟ್ಟ ಉಡುಗೊರೆ'' ಎಂದು ಕಿಡಿಕಾರಿದ್ದಾರೆ.

'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!

''ಕೊರೊನಾ ವೈರಸ್ ಚೀನಾ ನೀಡಿದ ಉಡುಗೊರೆ. ಆದರೆ, ಅದು ಒಳ್ಳೆಯದಲ್ಲ. ಅದನ್ನು ಆರಂಭದಲ್ಲಿಯೇ ತಡೆಯಬೇಕಿತ್ತು. ವೈರಸ್ ಸೃಷ್ಟಿಯಾದ ವುಹಾನ್ ಬಹಳ ಅಪಾಯಕ್ಕೆ ಸಿಲುಕಿತ್ತು. ಆದರೆ, ಚೀನಾದ ಇತರೆ ಜಾಗದಲ್ಲಿ ಅದು ಹರಡಿಲಿಲ್ಲ'' ಎಂದು ಟ್ರಂಪ್ ಟೀಕಿಸಿದ್ದಾರೆ.

''ಯುನೈಟೆಡ್ ಸ್ಟೇಟ್‌ನಿಂದ ಚೀನಾ ಅಪಾರ ಲಾಭವನ್ನು ಪಡೆದುಕೊಂಡಿದೆ. ನಾವು ಚೀನಾವನ್ನು ಪುನರ್ನಿರ್ಮಿಸಲು ಸಹಾಯ ಮಾಡಿದ್ದೇವೆ. ನಾವು ಅವರಿಗೆ ವರ್ಷಕ್ಕೆ 500 ಬಿಲಿಯನ್ ಡಾಲರ್‌ಗಳನ್ನು ನೀಡಿದ್ದೇವೆ'' ಎಂದು ಅಸಮಾಧಾನ ಹೊರಹಾಕಿದ್ದಾರೆ.

''ನಾವು ಪ್ರಪಂಚದೊಂದಿಗೆ ಕೆಲಸ ಮಾಡುತ್ತಿದ್ದೇವೆ, ಚೀನಾದೊಂದಿಗೂ ನಾವು ಕೆಲಸ ಮಾಡುತ್ತೇವೆ. ಎಲ್ಲರೊಂದಿಗೂ ಕೆಲಸ ಮಾಡುತ್ತೇವೆ. ಆದರೆ, ಒಮ್ಮೆ ಸಂಭವಿಸಿದ್ದು ಮತ್ತೊಮ್ಮೆ ಆಗಬಾರದು'' ಎಂದು ಡೊನಾಲ್ಡ್ ಟ್ರಂಪ್ ಸಂದೇಶ ರವಾನಿಸಿದ್ದಾರೆ.

English summary
'COVID 19 is a gift from China. but, Not good' american president Donald trump slams china agian and agian.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X