• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಎಸ್ಎ ಶ್ವೇತಭವನ ಸಿಬ್ಬಂದಿ ಮುಖ್ಯಸ್ಥರಿಗೆ ಕೊರೊನಾವೈರಸ್

|

ವಾಶಿಂಗ್ಟನ್, ನವೆಂಬರ್.07: ಕೊರೊನಾವೈರಸ್ ಅಟ್ಟಹಾಸ ತೋರುತ್ತಿರುವ ಅಮೆರಿಕಾದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಪದೇ ಪದೆ ಸುದ್ದಿ ಆಗುತ್ತಿದೆ. ಕೊವಿಡ್-19 ಭೀತಿ ನಡುವೆ ಸಾರ್ವಜನಿಕ ಪ್ರದೇಶಗಳಲ್ಲಿ ಶಿಷ್ಟಾಚಾರ ಪಾಲಿಸದ ಶ್ವೇತಭವನದ ಸಿಬ್ಬಂದಿಯ ಮುಖ್ಯಸ್ಥ ಮಾರ್ಕ್ ಮೀಡೋಸ್ ರಿಗೆ ಕೊರೊನಾವೈರಸ್ ಸೋಂಕು ತಗುಲಿದೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಾರ್ಕ್ ಮೀಡೋಸ್ ಮುಖಕ್ಕೆ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ತೋರಿದ್ದರು. ಇದರ ಬೆನ್ನಲ್ಲೇ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಅವರಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.

US Election Results 2020 Live updates: ಅಮೆರಿಕ ಚುನಾವಣೆ: ಎಲೆಕ್ಟೊರಲ್ ಮತಗಳಲ್ಲಿ ಗೆಲುವಿನ ಸಮೀಪ ಬೈಡೆನ್

ಕಳೆದ ಮಂಗಳವಾರ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಮಾರ್ಕ್ ಮೀಡೋಸ್ ಜೊತೆಯಾಗಿ ಪ್ರಚಾರ ನಡೆಸಿದ್ದರು ಎಂದು ತಿಳಿದು ಬಂದಿದೆ.

ಟ್ರಂಪ್ ಬೆಂಬಲಿಗರ ಜೊತೆಗೆ ಪಾರ್ಟಿ:

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಪಾಠಿಗಳ ಜೊತೆಗೆ ಮಾರ್ಕ್ ಮೀಡೋಸ್ ಇತ್ತೀಚಿಗಷ್ಟೇ ಔತಣಕೂಟವೊಂದರಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆ ಟ್ರಂಪ್ ಸುತ್ತಮುತ್ತಲಿನ ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವು ಅಪಾಯ ಹೆಚ್ಚಾಗಿದೆ. ಈಗಾಗಲೇ ಡೊನಾಲ್ಡ್ ಟ್ರಂಪ್ ಜೊತೆಗೆ ಅವರ ಪತ್ನಿ ಮೆಲಾನಿಯಾ ಮತ್ತು ಪುತ್ರ ಬ್ಯಾರೋನ್ ರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 1,00,58,586ಕ್ಕೆ ಏರಿಕೆಯಾಗಿದೆ. ಈ ಪೈಕಿ 63,91,208 ಸೋಂಕಿತರು ಗುಣಮುಖರಾಗಿದ್ದರೆ, 34,25,148 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಈವರೆಗೂ ಮಹಾಮಾರಿಗೆ 2,42,230ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ.

English summary
Coronavirus Infection To White House Chief Of Staff Mark Meadows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X