• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲ್ಯಾಟಿನ್ ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿ ಮಹಿಳೆಯರು

|

ವಾಷಿಂಗ್ಟನ್, ಮೇ 20: ಲ್ಯಾಟಿನ್ ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳುವ ಆತಂಕ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿದೆ.

ಕೊರೊನಾ ವೈರಸ್ ಭೀತಿಯಿಂದಾಗಿ ಮಹಿಳೆಯರು ಕೆಲಸಕ್ಕೆ ಹಾಜರಾಗುತ್ತಿಲ್ಲ ಹೀಗಾಗಿ ಅವರೆಲ್ಲರೂ ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ 31 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ 5 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ.

ಮತ್ತೆ ಉದ್ಯೋಗ ಕಡಿತದ ಘೋಷಣೆ ಮಾಡಿದ ಊಬರ್ ಮತ್ತೆ ಉದ್ಯೋಗ ಕಡಿತದ ಘೋಷಣೆ ಮಾಡಿದ ಊಬರ್

ಹೋಟೆಲ್ , ರೆಸ್ಟೋರೆಂಟ್ ರಿಟೇಲ್ ಸೆಕ್ಟರ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತೆ ಕೆಲಸಕ್ಕೆ ಹೋಗುವ ಯೋಚನೆ ಮಾಡುತ್ತಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕೂಡ ದೊಡ್ಡ ಸವಾಲಾಗಿದೆ.

ಕೊರೊನಾ ವೈರಸ್‌ನಿಂದಾಗಿ ಅಮೆರಿಕದಲ್ಲಿ ಶೇ.60 ರಷ್ಟ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ. ಸ್ಪೇನ್‌ನಲ್ಲಿ ಶೇ.57 ರಷ್ಟು ಮಹಿಲೆಯರು ನಿರುದ್ಯೋಗಿಗಳಾಗಿದ್ದಾರೆ. ಹಾಗೆಯೇ ಮನೆಗೆಲಸಕ್ಕೆಂದು ತೆರಳುವ ಮಹಿಳೆಯರಿಗೆ ಕೂಡ ಸಂಬಳವನ್ನು ನೀಡಿಲ್ಲ.

ಲಾಕ್‌ಡೌನ್‌ನಿಂದಾಗಿ ಕಡಿಮೆ ಸಂಬಳ ಪಡೆಯುತ್ತಿದ್ದ ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗಿದೆ. ಒಂದೊಮ್ಮೆ ಕೊರೊನಾ ವೈರಸ್ ಸಂಪೂರ್ಣವಾಗಿ ನಾಶವಾದರೂ ಲಿಂಗತಾರತಮ್ಯ ಹೆಚ್ಚುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
Women in Latin America are more at risk than men of losing their jobs and not returning to work due to the coronavirus crisis, experts said on Tuesday, calling on governments to adopt measures to assist women in low-paid jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X