ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಹದ ಕೊಬ್ಬು ಕರಗಿಸುವ ಈ ಮಾತ್ರೆ ಕೊರೊನಾ ಸೋಂಕಿಗೂ ರಾಮಬಾಣ

|
Google Oneindia Kannada News

ನ್ಯೂಯಾರ್ಕ್, ಜುಲೈ 20: ಕೊರೊನಾ ಸೋಂಕನ್ನು ಹೋಗಲಾಡಿಲು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ನೂರಾರು ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಆದರೆ ಅದರಲ್ಲಿ ಕೆಲವೇ ಕೆಲವಕ್ಕೆ ಒಪ್ಪಿಗೆ ದೊರೆತಿದ್ದು, ಅದೂ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ನೀಡವಂಥದ್ದಾಗಿದೆ.

Recommended Video

Corona ಸೋಂಕಿತನಿಗೆ ಕಚ್ಚಿದ ಸೊಳ್ಳೆ ಅಪಾಯಕಾರಿನಾ ? | Oneindia Kannada

ಆದರೆ ದೇಹದ ಕೊಬ್ಬು ಕರಗಿಸಲು ನೀಡುವ 'ಫೆನಾಬಿಟ್ರೇಟ್' ಮಾತ್ರೆಯಿಂದ ಕೊರೊನಾವನ್ನು ಕೂಡ ದೂರ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ದೇಹದಲ್ಲಿರುವ ಕೊಬ್ಬಿನಾಂಶ ಕರಗಲು ನೀಡುವ ಮಾತ್ರೆಯಿಂದ ಕೊವಿಡ್ 19 ರೋಗವನ್ನು ಗುಣವಾಗಿಸಬಹುದು.

ಭಾರತದಲ್ಲಿ 24 ಗಂಟೆಯಲ್ಲಿ 40,425 ಹೊಸ ಕೋವಿಡ್ ಪ್ರಕರಣಗಳು!ಭಾರತದಲ್ಲಿ 24 ಗಂಟೆಯಲ್ಲಿ 40,425 ಹೊಸ ಕೋವಿಡ್ ಪ್ರಕರಣಗಳು!

ಕೊಬ್ಬಿನಾಂಶ ಕಡಿಮೆಗೊಳಿಸುವ ಫೆನೋಫೈಬ್ರೇಟ್ ಮಾತ್ರೆಯಿಂದ ಉತ್ತಮ ಫಲಿತಾಂಶ ಲಭ್ಯವಾಗಿದೆ. ಇದು ಜೀವಕೋಶಗಳಲ್ಲಿನ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಹಾಗೆಯೇ ವೈರಸ್ ದೇಹದ ಮತ್ತಿತರೆ ಭಾಗಗಳಿಗೆ ಹರಡುವುದನ್ನು ನಿಯಂತ್ರಿಸುತ್ತದೆ. ಅವರ ಸಂಶೋಧನೆ ಪ್ರಕಾರ ಐದು ದಿನದ ಚಿಕಿತ್ಸೆಯಲ್ಲಿ ಕೊರೊನಾ ಸೋಂಕು ಕಣ್ಮರೆಯಾಗಿದೆ. ಇದನ್ನು ಸಾಬೀತುಪಡಿಸಲು ಅನೇಕ ಅಧ್ಯಯನ, ಪ್ರಯೋಗಗಳು ನಡೆಯಬೇಕಿದೆ.

ಮೌಂಟ್ ಸಿನಾಯ್ ಮೆಡಿಕಲ್ ಸೆಂಟರ್ ಹೇಳುವುದೇನು?

ಮೌಂಟ್ ಸಿನಾಯ್ ಮೆಡಿಕಲ್ ಸೆಂಟರ್ ಹೇಳುವುದೇನು?

ಕೊವಿಡ್ 19 ರೋಗಿಗಳ ಶ್ವಾಸಕೋಶದ ಮೇಲೆ ಕೊರೊನಾ ಸೋಂಕು ಹೆಚ್ಚು ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಕಾರ್ಬೊಹೈಡ್ರೇಟ್‌ಗಳು ಶ್ವಾಸಕೋಶದ ಮೇಲೆ ಬೀರುವ ದುಷ್ಪರಿಣಾಮವನ್ನು ಈ ಮಾತ್ರ ಕಡಿಮೆ ಮಾಡಲಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಕೊರೊನಾ ಸೋಂಕು ಶ್ವಾಸಕೋಶದೊಳಗೆ ಕೊಬ್ಬನ್ನು ಹೆಚ್ಚಿಸಲಿದೆ

ಕೊರೊನಾ ಸೋಂಕು ಶ್ವಾಸಕೋಶದೊಳಗೆ ಕೊಬ್ಬನ್ನು ಹೆಚ್ಚಿಸಲಿದೆ

ಕೊರೊನಾ ಸೋಂಕು ಶ್ವಾಸಕೋಶದೊಳಗೆ ಕೊಬ್ಬನ್ನು ಹೆಚ್ಚಿಸಲು ಕಾರಣವಾಗುತ್ತದೆ. ಸಂಶೋಧನೆ ಪ್ರಕಾರ ಇದು ಕೊವಿಡ್ 19 ಅಪಾಯದ ಹಂತವನ್ನು ವಿವರಿಸುತ್ತದೆ. ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಅಂಶ, ಅಧಿಕ ಕೊಬ್ಬಿನಾಂಶವಿರುವವರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ.

ವೈರಸ್ ಕಾರ್ಯ ಹೇಗಿರುತ್ತೆ?

ವೈರಸ್ ಕಾರ್ಯ ಹೇಗಿರುತ್ತೆ?

ವೈರಸ್ ದೇಹದೊಳಗೆ ಹೇಗೆ ಕೆಲಸ ಮಾಡುತ್ತದೆ, ಅದು ಹೇಗೆ ಒಬ್ಬಂರಿಂದೊಬ್ಬರಿಗೆ ಹರಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಧ್ಯಯನದ ಉದ್ದೇಶವಾಗಿತ್ತು,ಇದು ತಿಳಿದ ಬಳಿಕ ಸಂಶೋಧಕರು ಮುಂದಿನ ವಿಧಾನಗಳ ಬಗ್ಗೆ ಗಮನ ಹರಿಸಬಹುದು. ಇದೀಗ ಇಡೀ ಜಗತ್ತಿನಲ್ಲಿ ಕೊರೊನಾಗೆ ಸರಿಯಾದ ಲಸಿಕೆ ತಯಾರಾಗಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆಯಾದರೂ ಈ ಔಷಧವು ಕೂಡ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಫೆನೋಫೈಬ್ರೇಟ್ ಮಾತ್ರೆಯಿಂದ ಉತ್ತಮ ಫಲಿತಾಂಶ

ಫೆನೋಫೈಬ್ರೇಟ್ ಮಾತ್ರೆಯಿಂದ ಉತ್ತಮ ಫಲಿತಾಂಶ

ಕೊಬ್ಬಿನಾಂಶ ಕಡಿಮೆಗೊಳಿಸುವ ಫೆನೋಫೈಬ್ರೇಟ್ ಮಾತ್ರೆಯಿಂದ ಉತ್ತಮ ಫಲಿತಾಂಶ ಲಭ್ಯವಾಗಿದೆ. ಇದು ಜೀವಕೋಶಗಳಲ್ಲಿನ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ವೈರಸ್ ದೇಹದ ಮತ್ತಿತರೆ ಭಾಗಗಳಿಗೆ ಹರಡುವುದನ್ನು ನಿಯಂತ್ರಿಸುತ್ತದೆ. ಅವರ ಸಂಶೋಧನೆ ಪ್ರಕಾರ ಐದು ದಿನದ ಚಿಕಿತ್ಸೆಯಲ್ಲಿ ಕೊರೊನಾ ಸೋಂಕು ಕಣ್ಮರೆಯಾಗಿದೆ. ಇದನ್ನು ಸಾಬೀತುಪಡಿಸಲು ಅನೇಕ ಅಧ್ಯಯನ, ಪ್ರಯೋಗಗಳು ನಡೆಯಬೇಕಿದೆ. ಆದರೆ ಇದರಿಂದ ಭರವಸೆ ಮತ್ತಷ್ಟು ಹೆಚ್ಚಿದೆ.

English summary
A simple cholesterol-lowering drug Fenofibrate may reduce the threat of COVID-19 to that of the common cold, suggests new research.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X