• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ಹಬ್ಬಿಸಿದ ಚೀನಾ ದೊಡ್ಡ ಬೆಲೆ ತೆರಲಿದೆ; ಟ್ರಂಪ್

|

ವಾಷಿಂಗ್ಟನ್, ಅಕ್ಟೋಬರ್ 08: ವಿಶ್ವ ಎದುರಿಸುತ್ತಿರುವ ಕೋವಿಡ್ ಪರಿಸ್ಥಿತಿಗೆ ಚೀನಾ ಹೊಣೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಆರೋಪಿಸಿದ್ದಾರೆ. "ಇದಕ್ಕಾಗಿ ಚೀನಾ ದೊಡ್ಡ ಬೆಲೆ ತೆರಬೇಕಾಗುತ್ತದೆ" ಎಂದು ಟ್ರಂಪ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಬುಧವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ವಿಡಿಯೋ ಸಂದೇಶದಲ್ಲಿ ಅವರು ಕೋವಿಡ್ ಪರಿಸ್ಥಿತಿಗೆ ಚೀನಾ ಹೊಣೆ ಎಂದು ದೂರಿದರು. "ತಮಗೆ ಕೋವಿಡ್ ಬಂದಿದ್ದು ದೇವರ ಆಶೀರ್ವಾದದಿಂದ. ಸೋಂಕಿನಿಂದಾಗಿ ಔಷಧಿಗಳ ಸಾಮರ್ಥ್ಯದ ಬಗ್ಗೆ ತಮಗೆ ಅರಿವಾಯಿತು" ಎಂದು ಟ್ರಂಪ್ ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಆರೋಗ್ಯದ ಬಗ್ಗೆ ವೈಟ್‌ಹೌಸ್ ವೈದ್ಯರು ಹೇಳಿದ್ದೇನು?

ಕೋವಿಡ್ ಸೋಂಕು ತಗುಲಿದ್ದ ಡೊನಾಲ್ಡ್ ಟ್ರಂಪ್ ವಾಲ್ಟರ್ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಅವರು ಡಿಸ್ಚಾರ್ಜ್ ಆಗಿ ಹೆಲಿಕಾಪ್ಟರ್ ಮೂಲಕ ಅವರು ಶ್ವೇತ ಭವನಕ್ಕೆ ವಾಪಸ್ ಆದರು.

ಡೊನಾಲ್ಡ್ ಟ್ರಂಪ್ ಡಿಸ್ಚಾರ್ಜ್; ಮಾಸ್ಕ್ ಇಲ್ಲದೆ ಸಂಚಾರ!

ಶ್ವೇತ ಭವನಕ್ಕೆ ಬಂದ ಬಳಿಕ ಮೊದಲ ಬಾರಿಗೆ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದರು. "ನಿಮಗೆ ಏನೂ ಆಗಿದೆಯೋ ಅದಕ್ಕೆ ನೀವು ಹೊಣೆಯಲ್ಲ. ಇದಕ್ಕೆ ಚೀನಾದ ತಪ್ಪು ಕಾರಣ" ಎಂದು ಟ್ರಂಪ್ ಕೋವಿಡ್ ಪರಿಸ್ಥಿತಿ ಕುರಿತು ಹೇಳಿದರು.

ಅಭಿಮಾನಿಗಳಿಗೆ ಧನ್ಯವಾದ ಹೇಳದೆ ಒರಟ ಎನಿಸಿಕೊಳ್ಳಬೇಕಿತ್ತೆ?: ಟ್ರಂಪ್

"ಸಾಂಕ್ರಾಮಿಕ ರೋಗದಿಂದ ನಿಮ್ಮನ್ನು ನಾನು ಮುಕ್ತಿಗೊಳಿಸಲು ಹೊರಟಿದ್ದೇನೆ. ಅದಕ್ಕಾಗಿ ನೀವು ಬೆಲೆ ತೆರಬೇಕಿಲ್ಲ. ಈಗ ಏನು ಸಂಭವಿಸಿದೆಯೋ ಅದರಲ್ಲಿ ನಿಮ್ಮ ತಪ್ಪಿಲ್ಲ. ವಿಶ್ವಕ್ಕೆ ಬಗೆದ ಈ ಕೃತ್ಯಕ್ಕಾಗಿ ಚೀನಾ ದೊಡ್ಡ ಬೆಲೆ ನೀಡಬೇಕಾಗುತ್ತದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

"ಚೀನಾ ತಾನು ಮಾಡಿದ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ದೇಶ ಮತ್ತು ಪ್ರಪಂಚಕ್ಕೆ ಅದು ಮಾಡಿದ್ದಕ್ಕೆ ಬೆಲೆ ಕಟ್ಟಲೇಬೇಕು" ಎಂದು ಡೊನಾಲ್ಡ್ ಟ್ರಂಪ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ತಾವು ಪಡೆದ ಕೋವಿಡ್ ಚಿಕಿತ್ಸೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಟ್ರಂಪ್, ಅಮೆರಿಕದ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಸಿಗುವ ಭರವಸೆಯನ್ನು ನೀಡಿದರು. ತಮ್ಮ ವಿಡಿಯೋ ಸಂದೇಶದ ಭಾಷಣವನ್ನು ಬಳಿಕ ಟ್ರಂಪ್ ಟ್ವೀಟ್ ಸಹ ಮಾಡಿದ್ದಾರೆ.

ಡೊನಾಲ್ಡ್ ಟಂಪ್ ಚೀನಾ ಬಗ್ಗೆ ಆರೋಪ ಮಾಡುತ್ತರುವುದು ಇದೇ ಮೊದಲಲ್ಲ. ಕೋವಿಡ್ ವಿಶ್ವಕ್ಕೆ ಚೀನಾ ಕೊಟ್ಟ ಕೊಡುಗೆ ಎಂದು ಹಿಂದೆಯೂ ಹಲವು ಬಾರಿ ಹೇಳಿದ್ದರು. ಕೋವಿಡ್ ವಿಚಾರ ಬಂದಾಗಲೆಲ್ಲಾ ಚೀನಾ ಕಡೆ ಕೈ ತೋರಿಸುತ್ತಿದ್ದಾರೆ.

English summary
In a video address to the nation America president Donald Trump said that China will pay big price for pandemic, what they have done to the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X