• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಸಂಸತ್ ಮೇಲೆ ದಾಳಿ, ಬ್ರಿಟನ್ ಜೊತೆಗೂ ಯುದ್ಧ ನಡೆದಿತ್ತು..!

|

ದೊಡ್ಡಣ್ಣ ಅಂತಾ ಬೀಗುತ್ತಿದ್ದ ಅಮೆರಿಕ, ಟ್ರಂಪ್ ಬೆಂಬಲಿಗರ ಅಟ್ಟಹಾಸದ ಎದುರು ಮಾನ ಕಳೆದುಕೊಂಡಿದೆ. ಜಗತ್ತಿನ ಮುಂದೆ ಜಗತ್ತಿನ ಅತಿ ಪುರಾತನ ಪ್ರಜಾಪ್ರಭುತ್ವ ರಾಷ್ಟ್ರವೊಂದು ಕೈಕಟ್ಟಿ ನಿಂತಿದೆ. ಇಷ್ಟಕ್ಕೆಲ್ಲಾ ಕಾರಣ ಟ್ರಂಪ್ ಹಚ್ಚಿದ ಬೆಂಕಿ ಹಾಗೂ ಟ್ರಂಪ್ ಬೆಂಬಲಿಗರ ಸೈಕೋ ವರ್ತನೆ. ಅಷ್ಟಕ್ಕೂ 'ಕ್ಯಾಪಿಟಲ್ ಹಿಲ್' ಅಂದ್ರೆ ಏನು ಎಂಬ ಪ್ರಶ್ನೆ ಹಲವರನ್ನ ಕಾಡದೇ ಇರದು.

ಅಂದಹಾಗೆ ಅಮೆರಿಕದ ಕ್ಯಾಪಿಟಲ್ ಹಿಲ್ ಎಂದರೆ ನಮ್ಮ ದೇಶದಲ್ಲಿರುವ ಸಂಸತ್ ಭವನದಂತೆ. ಈ ಕ್ಯಾಪಿಟಲ್ ಹಿಲ್‌ನಲ್ಲಿ ಅಮೆರಿಕದ ಸಂಸತ್ ಸಭೆ ನಡೆಸಲಾಗುತ್ತೆ. 1793ರಲ್ಲಿ ಸ್ಥಾಪನೆಯಾದ 'ಕ್ಯಾಪಿಟಲ್ ಹಿಲ್' ಸುಮಾರು 2 ಶತಮಾನಗಳವರೆಗೆ ಅಮೆರಿಕದ ಸಂಸತ್ ಸಭೆ ಹಾಗೂ ಮತ್ತಿತರ ಉನ್ನತ ಚಟುವಟಿಕೆಗಳಿಗೆ ಸೂರು ನೀಡಿದೆ.

ಹೀಗೆ ಕ್ಯಾಪಿಟಲ್ ಹಿಲ್ ಅಮೆರಿಕದ ಘನತೆ ಸಂಕೇತ. ಆದರೆ ಇಂತಹ ಕಟ್ಟಡದ ಮೇಲೆ ಭೀಕರ ದಾಳಿ ನಡೆಸಲಾಗಿದೆ. ಟ್ರಂಪ್ ಬೆಂಬಲಿಗರ ಅಟ್ಟಹಾಸಕ್ಕೆ ಅಮೆರಿಕದ ಸಂಸತ್ ಭವನ ಬೆಚ್ಚಿಬಿದ್ದಿದೆ. ಕ್ಯಾಪಿಟಲ್ ಹಿಲ್ ಬಗ್ಗೆ ತಿಳಿದಾಯ್ತು, ಹಾಗಾದರೆ ವೈಟ್‌ಹೌಸ್ ಬಗ್ಗೆ ಡೌಟ್ ಬಾರದೆ ಇರದು. ಕ್ಯಾಪಿಟಲ್ ಹಿಲ್ ಹಾಗೂ ವೈಟ್‌ ಹೌಸ್‌ನ ವ್ಯಾತ್ಯಾಸ ಮುಂದೆ ತಿಳಿಯೋಣ.

ಅದು ಸಂಸತ್, ಇದು ಹೌಸ್..!

ಅದು ಸಂಸತ್, ಇದು ಹೌಸ್..!

ಟ್ರಂಪ್ ಬೆಂಬಲಿಗರು ದಾಳಿ ನಡೆಸಿರುವುದು ಅಮೆರಿಕ ಸಂಸತ್ ಮೇಲೆ. ಅಂದರೆ ಕ್ಯಾಪಿಟಲ್ ಹಿಲ್ ಮೇಲೆ. ಆದರೆ ವೈಟ್‌ಹೌಸ್ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ವೈಟ್‌ಹೌಸ್ ಕಾಮಗಾರಿಯನ್ನ 1792ರಲ್ಲಿ ಶುರು ಮಾಡಲಾಯಿತು. ಇದಾದ ಒಂದು ವರ್ಷಗಳ ನಂತರ, ಅಂದರೆ 1793ರಲ್ಲಿ ಕ್ಯಾಪಿಟಲ್ ಹಿಲ್ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಹೀಗೆ ಕ್ಯಾಪಿಟಲ್ ಹಿಲ್ ಹಾಗೂ ವೈಟ್‌ಹೌಸ್ ಎರಡೂ ಅಮೆರಿಕದ ಘನತೆಯ ಸಂಕೇತ. ಈ ಎರಡೂ ಕಟ್ಟಡಗಳ ಮಧ್ಯೆ ಕೇವಲ 3 ಕಿಲೋ ಮೀಟರ್ ಅಂತರವಿದೆ.

‘ಕ್ಯಾಪಿಟಲ್ ಹಿಲ್’ ಒಳಗೆ ಏನೇನಿದೆ..?

‘ಕ್ಯಾಪಿಟಲ್ ಹಿಲ್’ ಒಳಗೆ ಏನೇನಿದೆ..?

ವಾಷಿಂಗ್ಟನ್ ಡಿಸಿ ಅಮೆರಿಕದ ರಾಜಧಾನಿ. ಡಿಸಿಯಲ್ಲಿ ನಿರ್ಮಾಣವಾಗಿರುವ ‘ಕ್ಯಾಪಿಟಲ್ ಹಿಲ್' ಸಂಸತ್‌ಗೆ ಮಾತ್ರ ಜಾಗ ನೀಡಿಲ್ಲ. ಸುಪ್ರೀಂಕೋರ್ಟ್ ಕಟ್ಟಡ, ಲೈಬ್ರರಿ ಆಫ್ ಕಾಂಗ್ರೆಸ್, ಮೆರೈನ್ ಬ್ಯಾರಕ್ಸ್ ಸೇರಿದಂತೆ ವಾಷಿಂಗ್ಟನ್ ನೇವಿ ಯಾರ್ಡ್ ಕೂಡ ಇದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಕ್ಕೆ ಸೇರಿರುವ ಹಲವು ಕಟ್ಟಡಗಳು ‘ಕ್ಯಾಪಿಟಲ್ ಹಿಲ್'ನಲ್ಲಿ ಇವೆ. ಇನ್ನು ‘ಕ್ಯಾಪಿಟಲ್ ಹಿಲ್'ನಲ್ಲಿರುವ ವಸತಿ ಪ್ರದೇಶ ವಾಷಿಂಗ್ಟನ್‌ನ ಅತ್ಯಂತ ಹಳೆಯ ವಸತಿ ಪ್ರದೇಶಗಳಲ್ಲಿ ಒಂದಾಗಿದೆ. ಅಮೆರಿಕದ ಗಣ್ಯರು ಮೃತಪಟ್ಟರೆ ಇಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಅಮೆರಿಕದ ಇತಿಹಾಸ ಏನು ಹೇಳುತ್ತೆ..?

ಅಮೆರಿಕದ ಇತಿಹಾಸ ಏನು ಹೇಳುತ್ತೆ..?

ಅಮೆರಿಕ 1776ರ ಜುಲೈ 4ರಂದು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆಯಿತು. ಬಳಿಕ 1789ರಲ್ಲಿ ಅಮೆರಿಕದಲ್ಲಿ ಮೊದಲ ಸರ್ಕಾರ ಅಸ್ತಿತ್ವಕ್ಕೆ ಬಂತು. ಹೀಗೆ ಸ್ವತಂತ್ರ ಅಮೆರಿಕದ ಮೊಟ್ಟಮೊದಲ ದೊರೆಯೇ ಜಾರ್ಜ್ ವಾಷಿಂಗ್ಟನ್. ಅಂದಿನ ಸಂದರ್ಭದಲ್ಲಿ ಜಾರ್ಜ್ ವಾಷಿಂಗ್ಟನ್ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆಯಲು ಹೋರಾಡಿದ್ದ ಅಮೆರಿಕನ್ನರು ಅವರನ್ನೇ ಮೊದಲ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. 1789 ಅಧ್ಯಕ್ಷ ಪಟ್ಟಕ್ಕೆ ಆಯ್ಕೆಯಾದ ವಾಷಿಂಗ್ಟನ್ ಅವರಿಗೂ ಉನ್ನತವಾದ ಸಂಸತ್ ಭವನ ನಿರ್ಮಾಣದ ಕನಸು ಇತ್ತು. ಈ ಕನಸು 1793ರಲ್ಲಿ ಈಡೇರಿತ್ತು. ಒಂದು ಕಡೆ ಅಮೆರಿಕ ಅಧ್ಯಕ್ಷರಿಗೆ ಭವ್ಯವಾದ ಮನೆ ಹಾಗೂ ಸಂಸತ್‌ ಭವ್ಯ ಕಟ್ಟಡ ನಿರ್ಮಾಣವಾಗಿತ್ತು. ಹೀಗೆ ಸುಮಾರು 200ಕ್ಕೂ ಹೆಚ್ಚು ವರ್ಷಗಳಿಂದ ಈ ಕಟ್ಟಡಗಳು ಅಸ್ತಿತ್ವದಲ್ಲಿ ಇವೆ.

ಬ್ರಿಟನ್ ವಿರುದ್ಧ ಅಮೆರಿಕ ಯುದ್ಧ..!

ಬ್ರಿಟನ್ ವಿರುದ್ಧ ಅಮೆರಿಕ ಯುದ್ಧ..!

ಅಮೆರಿಕದ ಸಂಸತ್ ಮೇಲೆ ಈ ರೀತಿ ದಾಳಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಅಮೆರಿಕ ಸಂಸತ್ ಮೇಲೆ ನಡೆದ ದಾಳಿಯ ಇತಿಹಾಸ ತಿಳಿಯಲು 200 ವರ್ಷಗಳಷ್ಟು ಹಿಂದೆ ಹೋಗಬೇಕು. ಕ್ಯಾಪಿಟಲ್ ಹಿಲ್ ಮೇಲೆ ಹಲವು ಬಾರಿ ಅಟ್ಯಾಕ್ ಆಗಿದೆ. ಆದರೆ 1814ರಲ್ಲಿ ನಡೆದಿದ್ದ ದಾಳಿ ಅತ್ಯಂತ ಭೀಕರ. ಬ್ರಿಟನ್‌ ಜತೆಗೆ ವಾಣಿಜ್ಯ ಸಮರ ಉಂಟಾದ ಸಂದರ್ಭದಲ್ಲಿ ಫ್ರಾನ್ಸ್ ಜತೆ ಅಮೆರಿಕ ವಾಣಿಜ್ಯ ಸಂಬಂಧ ಮುಂದುವರಿಸಲು ಬ್ರಿಟನ್ ಅಡ್ಡಿ ಮಾಡಿತು. ಆಗ ಅಮೆರಿಕ ಬ್ರಿಟನ್ ವಿರುದ್ಧ 1812ರಲ್ಲಿ ಯುದ್ಧ ಘೋಷಿಸಿತ್ತು. 2 ವರ್ಷ ಕಾಲ ನಡೆದ ಯುದ್ಧದಲ್ಲಿ, ಬ್ರಿಟನ್ ಸೇನೆ ವಾಷಿಗ್ಟಂನ್ ಡಿ.ಸಿ.ಯಲ್ಲಿದ್ದ ಕ್ಯಾಪಿಟಲ್ ಹಿಲ್‌ ಮೇಲೆ ದಾಳಿ ನಡೆಸಿತ್ತು. 1814ರ ಆಗಸ್ಟ್‌ 7ರಂದು ಕ್ಯಾಪಿಟಲ್ ಕಟ್ಟಡಕ್ಕೆ ಬೆಂಕಿಯನ್ನೂ ಹಚ್ಚಲಾಗಿತ್ತು.

ಹಲವು ಬಾರಿ ದಾಳಿ ನಡೆದಿದೆ

ಹಲವು ಬಾರಿ ದಾಳಿ ನಡೆದಿದೆ

1814ರ ನಂತರ 1835ರಲ್ಲಿಯೂ ಕ್ಯಾಪಿಟಲ್ ಹಿಲ್ ಮೇಲೆ ಅಟ್ಯಾಕ್ ಆಗಿತ್ತು. ಅಂದಿನ ಅಧ್ಯಕ್ಷ ಆ್ಯಂಡ್ರೊ ಜಾಕ್ಸನ್ ಹತ್ಯೆ ಮಾಡಲು ಸಂಚು ಹೂಡಿದ್ದ ಸಂದರ್ಭದಲ್ಲಿ ಕಟ್ಟಡದ ಮೇಲೆ ದಾಳಿ ನಡೆದಿತ್ತು. ನಂತರ 1856, 1915, 1954, 1971, 1983 ಮತ್ತು 1998ರಲ್ಲಿ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆದಿದೆ. ಆದರೆ ಇದೀಗ ಟ್ರಂಪ್ ಬೆಂಬಲಿಗರು ನಡೆಸಿರುವ ದಾಳಿ ಅಮೆರಿಕದ ಮಾನ ಹರಾಜು ಹಾಕಿದೆ. ಹಾಗೇ ಈ ದಾಳಿ ಅಮೆರಿಕ ಇತಿಹಾಸದ ಪುಟ ಸೇರಿದೆ.

English summary
History reveal the attacks on American parliament building the ‘Capitol Hill’. Capitol Hill was attacked several times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X