• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯಾಲಿಫೋರ್ನಿಯ ಕರಾವಳಿಯಲ್ಲಿ ಹೊಂಜು, ಕಾಣೆಯಾದ ಸೂರ್ಯ

|

ಕಾಡ್ಗಿಚ್ಚಿನ ಅಬ್ಬರಕ್ಕೆ ಸಿಲುಕಿ ಪಶ್ಚಿಮ ಅಮೆರಿಕ ತತ್ತರಿಸಿ ಹೋಗಿದೆ. ಕ್ಯಾಲಿಫೋರ್ನಿಯ ರಾಜ್ಯದ ಸ್ಥಿತಿಯಂತೂ ಭೀಕರವಾಗಿದ್ದು ಸುಮಾರು 23 ಲಕ್ಷ ಎಕರೆ ಕಾಡು ಈವರೆಗೆ ಭಸ್ಮವಾಗಿದೆ. ಪರಿಣಾಮ ಕ್ಯಾಲಿಫೋರ್ನಿಯದಲ್ಲಿ ಬೆಳಗಾದರೂ ಸೂರ್ಯ ಕಾಣುತ್ತಿಲ್ಲ. ಕ್ಯಾಲಿಫೋರ್ನಿಯದ ಸ್ಯಾನ್ ಫ್ರಾನ್ಸಿಸ್ಕೊ ಸೇರಿದಂತೆ ಕರಾವಳಿ ನಗರಗಳ ಸ್ಥಿತಿ ದಯನೀಯವಾಗಿದೆ. ಪ್ರತಿದಿನ 25 ಮೈಲಿಗಳಷ್ಟು ಕಾಡು ಭಸ್ಮವಾಗುತ್ತಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹತ್ತಾರು ಮಂದಿ ಅಸುನೀಗಿದ್ದಾರೆ.

ಗುರುವಾರ ಬೆಳಗ್ಗೆ ಕಣ್ಣು ಬಿಟ್ಟ ಸ್ಯಾನ್ ಫ್ರಾನ್ಸಿಸ್ಕೊ ನಗರದ ನಿವಾಸಿಗಳಿಗೆ ಆಶ್ಚರ್ಯ ಕಾದಿತ್ತು. ಅದೆಷ್ಟು ಹೊತ್ತು ಕಾದರೂ ಸೂರ್ಯ ಆಗಸದಲ್ಲಿ ಕಾಣಲೇ ಇಲ್ಲ. ಬದಲಾಗಿ ದಟ್ಟವಾದ ಹೊಗೆ ಆಕಾಶವನ್ನು ಆವರಿಸಿತ್ತು. ಹೊಗೆ ಮತ್ತು ಮಂಜು ಮಿಶ್ರಿತ 'ಹೊಂಜು' ಎಲ್ಲೆಡೆ ಆವರಿಸಿತ್ತು. ಇದರಿಂದ ಸ್ಯಾನ್ ಫ್ರಾನ್ಸಿಸ್ಕೊ ಸೇರಿದಂತೆ ಕ್ಯಾಲಿಫೋರ್ನಿಯದ ಕರಾವಳಿ ಭಾಗದ ಆಕಾಶ ಕಿತ್ತಳೆ ಬಣ್ಣಕ್ಕೆ ತಿರುಗಿತ್ತು. ರಸ್ತೆ ಕಾಣಿಸಲು ಸಾಧ್ಯವಾಗದಷ್ಟು 'ಹೊಂಜು' ಆವರಿಸಿದ್ದರಿಂದ ಸವಾರರು ಬೆಳಗ್ಗೆಯೇ ಹೆಡ್ ಲೈಟ್ ಹಾಕಿಕೊಂಡು ವಾಹನ ಚಲಾಯಿಸಿದರು.

ಪಾರ್ಟಿ ಮಾಡಲು ಹೋಗಿ ಕಾಡಿಗೆ ಬೆಂಕಿ ಇಟ್ಟರು..!

ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಿದೆ ಪರಿಸ್ಥಿತಿ

ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಿದೆ ಪರಿಸ್ಥಿತಿ

ಅಮೆರಿಕದಲ್ಲಿ ಈಗ ಬೇಸಿಗೆ ಸಮಯ. ಅದರಲ್ಲೂ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಮಾನವ ನಿರ್ಮಿತ ಕಾಡು ಹೆಚ್ಚಾಗಿದೆ. ಮರುಭೂಮಿಯಾಗಿದ್ದ ಈ ರಾಜ್ಯವನ್ನು ದಟ್ಟ ಅರಣ್ಯವಾಗಿ ಬದಲಾಯಿಸಿದ್ದು ಅಮೆರಿಕ. ಹೀಗಾಗಿ ಅಲ್ಲಿ ಬೇಸಿಗೆ ಬಂತು ಎಂದರೆ ಸಾಕು ಕಾಡ್ಗಿಚ್ಚಿನ ಅಬ್ಬರ ಹೆಚ್ಚುತ್ತದೆ. ಅದರಲ್ಲೂ ಕರಾವಳಿ ಪ್ರದೇಶ ಬೇಸಿಗೆಯ ಅವಧಿಯಲ್ಲಿ ಕಾದ ಕಬ್ಬಿಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಣ್ಣ ಬೆಂಕಿ ಕಿಡಿ ಬಿದ್ದರು ಸಾಕು ಅರಣ್ಯ ಪ್ರದೇಶ ಧಗಧಗನೆ ಹೊತ್ತಿ ಉರಿಯುತ್ತದೆ. ಈಗಲೂ ಅದೇ ಆಗುತ್ತಿದ್ದು, ಕಾಡ್ಗಿಚ್ಚು ನಿಯಂತ್ರಣಕ್ಕೆ ಸಿಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕ್ಯಾಲಿಫೋರ್ನಿಯ ಪರಿಸ್ಥಿತಿ ಬಿಗಡಾಯಿಸುತ್ತಿದೆ.

ಪಾರ್ಟಿ ಮಾಡಲು ಹೋಗಿ ಬೆಂಕಿ ಇಟ್ಟಿದ್ದರು

ಪಾರ್ಟಿ ಮಾಡಲು ಹೋಗಿ ಬೆಂಕಿ ಇಟ್ಟಿದ್ದರು

ಇದು ಕೆಲ ದಿನಗಳ ಹಿಂದಿನ ಘಟನೆ. ಕ್ಯಾಲಿಫೋರ್ನಿಯದ ಕುಟುಂಬವೊಂದು ‘ಜೆಂಡರ್ ರಿವೀಲ್ ಪಾರ್ಟಿ' ಮಾಡಲು ಹೋಗಿ ಒಣ ಹುಲ್ಲು ಇರುವ ಅರಣ್ಯದಲ್ಲಿ ಪಟಾಕಿ ಸಿಡಿಸಿತ್ತು. ಇದರಿಂದ ಸುಮಾರು 7000 ಸಾವಿರ ಎಕರೆ ಕಾಡು ಭಸ್ಮವಾಗಿದೆ. ಪಾರ್ಟಿಯಿಂದ ಹೊತ್ತಿದ್ದ ಬೆಂಕಿ ಇನ್ನೂ ಹಿಡಿತಕ್ಕೆ ಸಿಕ್ಕಿಲ್ಲ. ಪಾರ್ಟಿ ಆಯೋಜಿಸಿದ್ದ ವ್ಯಕ್ತಿಯನ್ನ ಬಂಧಿಸಿದ್ದ ಕ್ಯಾಲಿಫೋರ್ನಿಯ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಆತನಿಗೆ ಕೋರ್ಟ್ 8 ಮಿಲಿಯನ್ ಡಾಲರ್ ದಂಡ ವಿಧಿಸಿದೆ. ಅಲ್ಲದೆ ಜೈಲುಶಿಕ್ಷೆ ಕೂಡ ನೀಡಿದೆ. ಈತನ ಎಡವಟ್ಟಿನಿಂದ ನೂರಾರು ಮಿಲಿಯನ್ ಡಾಲರ್ ನಷ್ಟ ಸಂಭವಿಸಿದೆ.

ಅಮೆಜಾನ್ ಕಾಡಿಗೆ ಬೆಂಕಿ ಇಟ್ಟವರು ಯಾರು..?

4 ಸಾವಿರ ಕಟ್ಟಡಗಳು ಭಸ್ಮ

4 ಸಾವಿರ ಕಟ್ಟಡಗಳು ಭಸ್ಮ

ಕ್ಯಾಲಿಪೋರ್ನಿಯದ 28ಕ್ಕೂ ಹೆಚ್ಚು ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಡ್ಗಿಚ್ಚು ಹಬ್ಬಿದೆ. ಬೆಂಕಿ ಆರಿಸಲು 15 ಸಾವಿರಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಜೀವ ಒತ್ತೆಯಿಟ್ಟು ಹೋರಾಡುತ್ತಿದ್ದಾರೆ. ಕ್ಯಾಲಿಫೋರ್ನಿಯ ಒಂದರಲ್ಲೇ 4 ಸಾವಿರ ಕಟ್ಟಡಗಳು ಬೆಂಕಿಗೆ ಆಹುತಿಯಾಗಿ 800 ಮಿಲಿಯನ್ ಡಾಲರ್‌ಗೂ ಹೆಚ್ಚು ನಷ್ಟ ಸಂಭವಿಸಿದೆ. ಕ್ಷಣದಿಂದ ಕ್ಷಣಕ್ಕೆ ಬೆಂಕಿಯ ಕೆನ್ನಾಲಿಗೆ ಅಮೆರಿಕದ ಪಶ್ಚಿಮ ತೀರವನ್ನು ಆವರಿಸುತ್ತಿದ್ದು, ಭಾರಿ ಆತಂಕ ಸೃಷ್ಟಿಸಿದೆ. ಚುನಾವಣೆ ಹೊತ್ತಲ್ಲೇ ಟ್ರಂಪ್ ಆಡಳಿತಕ್ಕೆ ಹೊಸ ಸವಾಲು ಎದುರಾಗಿದೆ.

ಬೇಸಿಗೆ ಕಾಲ ಬಂತೆಂದರೆ ಸಾಕು ಕ್ಯಾಲಿಫೋರ್ನಿಯ ಧಗಧಗಿಸುತ್ತದೆ

ಬೇಸಿಗೆ ಕಾಲ ಬಂತೆಂದರೆ ಸಾಕು ಕ್ಯಾಲಿಫೋರ್ನಿಯ ಧಗಧಗಿಸುತ್ತದೆ

ಬೇಸಿಗೆ ಕಾಲ ಬಂತೆಂದರೆ ಸಾಕು ಕ್ಯಾಲಿಫೋರ್ನಿಯ ಧಗಧಗಿಸುತ್ತದೆ. ಈಗಲೂ ಅಷ್ಟೇ ಕಾಡ್ಗಿಚ್ಚಿನ ಅಬ್ಬರಕ್ಕೆ ಸಿಲುಕಿರುವ ಕ್ಯಾಲಿಫೋರ್ನಿಯ ಹೊತ್ತಿ ಉರಿಯುತ್ತಿದೆ. ಕ್ಯಾಲಿಪೋರ್ನಿಯಾದ ಬೆಂಕಿ ತಣ್ಣಗಾಗಿಸಲು ಸಾವಿರಾರು ಅಗ್ನಿಶಾಮಕ ಸಿಬ್ಬಂದಿ ತಮ್ಮ ಜೀವ ಒತ್ತೆಯಿಟ್ಟು ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಹತ್ತಾರು ಮಂದಿ ಅವಘಡದಲ್ಲಿ ಜೀವ ಕಳೆದುಕೊಂಡಿದ್ದಾರೆ. ಲಕ್ಷಾಂತರ ಎಕರೆ ಕಾಡು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದೆ. ಟ್ರಂಪ್ ಆಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಕೂಗು ಅರಣ್ಯ ರೋದನವಾಗಿದೆ.

English summary
California Wildfire Burned More Than 2 Million Acres Of Forest Area. In The Bay Area Of California, Sun Was Not Visible Because Of Fog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X