• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೂಟೌಟಿಗೆ ಕಪ್ಪು ವರ್ಣೀಯ ಬಲಿ, ಪೊಲೀಸ್ ಮುಖ್ಯಸ್ಥೆ ರಾಜೀನಾಮೆ

|

ಅಟ್ಲಾಂಟಾ, ಜೂನ್ 14: ಜಾರ್ಜ್ ಫ್ಲಾಯ್ಡ್ ದುರಂತ ಸಾವಿನ ವಿರುದ್ಧ ನಡೆದಿರುವ ಆಕ್ರೋಶಭರಿತ ಪ್ರತಿಭಟನೆ ಹತ್ತಿಕ್ಕಲು ಹೆಣಗುತ್ತಿರುವಾಗಲೇ ಮತ್ತೊಂದು ಪ್ರಮಾದವನ್ನು ಪೊಲೀಸರು ಎಸಗಿದ್ದಾರೆ. ಕಪ್ಪು ವರ್ಣೀಯನೊಬ್ಬ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಘಟನೆ ನಡೆದ 24ಗಂಟೆಯೊಳಗೆ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥೆ ಎರಿಕಾ ಶೀಲ್ಡ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

27 ವರ್ಷ ವಯಸ್ಸಿನ ರೇಶಾರ್ಡ್ ಬ್ರೂಕ್ಸ್ ಎಂಬ ವ್ಯಕ್ತಿ ವೆಂಡಿ ಎಂಬಲ್ಲಿ ಡ್ರೈ ವ್ ಥ್ರೂ ಬಳಿ ಕಾರಿನಲ್ಲಿ ನಿದ್ರಿಸುತ್ತಿದ್ದರು. ರಸ್ತೆ ಸಂಚಾರಕ್ಕೆ ಇದರಿಂದ ಅಡ್ಡಿಯಾಗಿದೆ. ಈ ಬಗ್ಗೆಇಬ್ಬರು ಪೊಲೀಸರು ಪ್ರಶ್ನೆಗಳು ಶುರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ತಿಕ್ಕಾಟದಲ್ಲಿ ಪೊಲೀಸರ ಬಳಿ ಇದ್ದ ಇ ಶಾಕ್ ನೀಡುವ ಸಾಧನ ಟೇಸರ್(Taser) ಕಿತ್ತುಕೊಂಡು ಓಡಿದ್ದಾನೆ. ಇದರಿಂದ ಕೋಪಗೊಂಡು ಪೊಲೀಸರು ಆತನ ಮೇಲೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.

ಜಾರ್ಜ್ ಫ್ಲಾಯ್ಡ್ ಹತ್ಯೆ: ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಬ್ರೂಕ್ಸ್ ಸಾವಿಗೆ ನ್ಯಾಯ ಕೋರಿ ಅನೇಕ ಮಂದಿ ಪ್ರತಿಭಟನಾಕಾರರು ಅಂತಾರಾಜ್ಯ 85 ಹೆದ್ದಾರಿಯನ್ನು ತಡೆದಿದ್ದಾರೆ. ವೆಂಡಿಯಲ್ಲಿ ಗಾಜುಗಳನ್ನು ಒಡೆದು, ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಟಿಯರ್ ಗ್ಯಾಸ್, ಸ್ಮೋಕ್ ಬಾಂಬ್ ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಜಾರ್ಜಿಯಾ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಹೇಳಿದೆ.

ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು. ಇದಾದ ಬಳಿಕ ಇಡೀ ಅಮೆರಿಕದಲ್ಲಿ ಕಪ್ಪು ವರ್ಣೀಯರ ರಕ್ಷಣೆಗಾಗಿ ಪ್ರತಿಭಟನೆ ಜೋರಾಗಿ ನಡೆದಿದೆ. ಜಾರ್ಜ್ ಫ್ಲಾಯ್ಡ್ ನಿಧನಕ್ಕೆ ಶೋಕ ವ್ಯಕ್ತಪಡಿಸಿ, ಕಪ್ಪುವರ್ಣೀಯರಿಗೆ ವಿಶ್ವದೆಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ.

English summary
Atlanta's police chief resigned Saturday hours after a black man was fatally shot by an officer in a struggle following a field sobriety test reports AP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X