ಚೀನಾದ ಮೇಲೆ ಟ್ರಂಪ್ ಆರೋಪ: ಅಮೆರಿಕ ವಿಜ್ಞಾನಿಗಳಿಂದಲೇ ತಿರಸ್ಕಾರ

ವಾಷಿಂಗ್ಟನ್, ಮೇ 6: ಕೊರೊನಾ ವೈರಸ್ ಕುರಿತು ಚೀನಾದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಿಸಿದ್ದ ಆರೋಪವನ್ನು ಸ್ವತಃ ಅಮೆರಿಕ ವಿಜ್ಞಾನಿಗಳೇ ತಿರಸ್ಕರಿಸಿದ್ದಾರೆ.

ಕೊರೊನಾ ವೈರಸ್ ಮಾನವ ನಿರ್ಮಿತ, ದುರುದ್ದೇಶದಿಂದ ಚೀನಾ ತನ್ನ ಲ್ಯಾಬ್‌ಗಳಲ್ಲಿ ಈ ವೈರಸ್‌ ಸೃಷ್ಟಿಸಿದೆ ಎಂದು ಟ್ರಂಪ್ ಮಾಡಿದ್ದ ಆರೋಪವನ್ನು ಅಮೆರಿಕ ವಿಜ್ಞಾನಿ ಡಾ. ಆಂಟೊನಿ ಫಾಸೋ ಅಲ್ಲಗಳೆದಿದ್ದಾರೆ.

ಕೊರೊನಾ ವೈರಸ್ ಬಾವುಲಿಗಳ ವಿಕಾಸ ಸಂದರ್ಭದಲ್ಲಿ ಆಗಿದೆ. ಇದನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವೇ ಇಲ್ಲ ಎಂದು ಫಾಸಿ ಹೇಳಿದ್ದಾರೆ.ಈ ವೈರಸ್ ನೈಸರ್ಗಿಕವಾಗಿ ಸೃಷ್ಟಿಯಾಗಿ ಬಳಿಕ ಪ್ರಾಣಿಗಳನ್ನು ಸೇರಿತ್ತು.

American Scientist Dismisses Trumps Coronavirus Wuhan Lab Claims

ಆದರೆ ಡೊನಾಲ್ಡ್ ಟ್ರಂಪ್ ಈ ವೈರಸ್ವ ಚೀನಾದ ಲ್ಯಾಬ್‌ಗಳಲ್ಲಿಯೇ ಸೃಷ್ಟಿಸಲಾಗಿದೆ,ವುಹಾನ್ ನಗರದ ಸೂಕ್ಷ್ಮಾಣು ಸಂಸ್ಥೆಯಲ್ಲಿ ಹುಟ್ಟಿಕೊಂಡಿದೆ ಇದರ ಬಗ್ಗೆ ನನಗೆ ಅನುಮಾನವಿದೆ ಎಂದಿದ್ದರು.

ವುಹಾನ್ ನಗರದಲ್ಲಿ ಸಾಕಷ್ಟು ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆ ಪ್ರದೇಶದಿಂದ ಕೊರೊನಾ ಹುಟ್ಟಿಕೊಂಡಿದೆ. ಪ್ರಾಣಿಗಳಿಂದ ಮನುಷ್ಯನಿಗೆ ಅಂಟಿದೆ. ಯಾವುದೇ ಕಾರಣಕ್ಕೂ ಆತುರದಲ್ಲಿ ಆರ್ಥಿಕತೆಯನ್ನು ಪುನರಾರಂಭಿಸುವುದು ಬೇಡ ಇದರಿಂದ ಮತ್ತಷ್ಟು ಜೀವಗಳು ಬಲಿಯಾಗಲಿವೆ ಎಂದಿದ್ದಾರೆ.

ಈಗಾಗಲೇ ಅಮೆರಿಕದಲ್ಲಿ ಕೊರೊನಾ ವೈರಸ್‌ಗೆ 70 ಸಾವಿರ ಮಂದಿ ಬಲಿಯಾಗಿದ್ದಾರೆ. ನವೆಂಬರ್‌ನಲ್ಲಿ ಅಮರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+