ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಕೀಟಲೆ ಬಿಟ್ಟು ಭಯೋತ್ಪಾದನೆ ನಿಗ್ರಹಿಸಿ: ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 8: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬೆನ್ನಲ್ಲೇ ಪಾಕಿಸ್ತಾನವು ಗಡಿ ಪ್ರದೇಶದಲ್ಲಿ ಯುದ್ಧೋನ್ಮಾದ ತೋರುತ್ತಿದೆ.

ಜೊತೆಗೆ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಹೆಚ್ಚಳಕ್ಕೆ ಸಂಚು ರೂಪಿಸುತ್ತಿದೆ ಎನ್ನುವ ಆರೋಪಗಳು ಪಾಕಿಸ್ತಾನದ ಮೇಲೆ ಕೇಳಿಬರುತ್ತಿದೆ.

ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಮೇಲಿನ ದಿ ಹೌಸ್ ಹಾಗೂ ಸೆನೆಟ್ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.ಸೇನಾ ನಿಯೋಜನೆ ಅಥವಾ ಗಡಿಯಲ್ಲಿ ಆಕ್ರಮಣಶೀಲತೆ ತೋರಿಸುವ ಬದಲು ಪಾಕ್ ನೆಲದಲ್ಲಿ ಭಯೋತ್ಪಾದನೆಗೆ ಸಿಗುತ್ತಿರುವ ಬೆಂಬಲ ತರಬೇತಗೆ ಕಡಿವಾಣ ಹಾಕಬೇಕು.

America Wants Pakistan Acts Against Terrorists

ಈ ಮೂಲಕ ಉಗ್ರವಾದ ನಿಯಂತ್ರಣಕ್ಕೆ ಕಠಿಣ ಹೆಜ್ಜೆ ಇಡಬೇಕು ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ವಿಶೇಷ ಸ್ಥಾನಮಾನ ರದ್ದುಪಡಿಸಿರುವುದಕ್ಕೆ ಪ್ರತಿಯಾಗಿ ಗಡಿಯಲ್ಲಿ ಸೇನೆ ಯಾವುದೇ ಪ್ರತಿಕಾರದ ಕ್ರಮಕ್ಕೆ ಮುಂದಾಗಬಾರದು.

ಹಾಗೆಯೇ ಗಡಿ ಮೂಲಕ ಭಾರತಕ್ಕೆ ಯಾವುದೇ ಉಗ್ರರನ್ನು ನುಸುಳಲು ನೆರವು ನೀಡುವುದು ಕೂಡ ಸೂಕ್ತವಲ್ಲ. ಇದಕ್ಕೆ ಕಡಿವಾಣ ಹಾಕಲೇಬೇಕು. ಅದರ ಬದಲು ಪಾಕಿಸ್ತಾನದ ಭಯೋತ್ಪಾದನಾ ಮೂಲಸೌಕರ್ಯಗಳ ಮೇಲೆ ನಿಗಾ ಇಟ್ಟು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏಲಿಯೆಟ್ ಏಂಜಲ್ ಹಾಗೂ ಬಾಬಲ್ ಮೆನೆನ್ಸ್ ನೀಡಿರುವ ಹೇಳಿಕೆಯಲ್ಲಿ ಈ ಅಂಶಗಳು ದಾಖಲಾಗಿವೆ. ಇದಲ್ಲದೆ ಭಾರತಕ್ಕೂ ಈ ಸಮಿತಿ ಸಲಹೆಗಳನ್ನು ನೀಡಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು ಜಮ್ಮು ಕಾಶ್ಮೀರದ ಜನರಿಗೆ ಅವರ ಪ್ರಜಾಸತ್ತಾತ್ಮಕ ಹಕ್ಕುಗಳು, ಸ್ವಾತಂತ್ರ್ಯ, ಮಾಹಿತಿ ಹಕ್ಕು ಹಾಗೂ ಭದ್ರತೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಗಳು ಸಿಗುವಂತೆ ನೋಡಿಕೊಳ್ಳಬೇಕು.

ಈ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ಬೆಳೆಸಿಕೊಳ್ಳಬೇಕು ಎಂದು ಸಮಿತಿ ಹೇಳಿದೆ.

English summary
American Foreign Affairs committee warns Pakistan About Terrorism Infrastructure in its soil
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X