ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಗೆಲುವಿನ ಬೆನ್ನಲ್ಲೇ ಶ್ವೇತಭವನಕ್ಕೆ ಮುದ್ದಾದ ಶ್ವಾನ!

|
Google Oneindia Kannada News

ವಾಶಿಂಗ್ಟನ್, ನವೆಂಬರ್.08: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಭರ್ಜರಿ ದಿಗ್ವಿಜಯ ಸಾಧಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಎದುರು 290 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಗೆಲುವಿನ ಬೆನ್ನಲ್ಲೇ ಶ್ವೇತಭವನಕ್ಕೆ ಮುದ್ದಾದ ಶ್ವಾನಗಳು ಪ್ರವೇಶಿಸಿವೆ. ಬೈಡನ್ ಅವರು ಪ್ರೀತಿಯಿಂದ ಸಾಕಿರುವ ಜರ್ಮನ್ ಶೆಫರ್ಡ್ ತಳಿಯ ಮೇಜರ್ ಮತ್ತು ಚಾಂಪ್ ಶ್ವಾನದ ಜೊತೆಗೆ ವಾಶಿಂಗ್ಟನ್ ನಲ್ಲಿರುವ ಶ್ವೇತಭವನವನ್ನು ಪ್ರವೇಶಿಸಲಿದ್ದಾರೆ. ಅಮೆರಿಕಾದ ಪ್ರಥಮ ಶ್ವಾನಗಳು ಎನಿಸಲಿವೆ.

ಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರುಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರು

ಶ್ವೇತಭವನವನ್ನು ನೆಚ್ಚಿನ ಶ್ವಾನದ ಜೊತೆಗೆ ಪ್ರವೇಶಿಸಿದ ಮೊದಲ ಅಮೆರಿಕಾ ಅಧ್ಯಕ್ಷರು ಎಂದು ಜೋ ಬೈಡನ್ ಎನಿಸಲಿದ್ದಾರೆ. ನಾಲ್ಕು ವರ್ಷಗಳಿಂದ ಶ್ವೇತಭವನದಲ್ಲಿ ಶ್ವಾನಗಳ ಪ್ರವೇಶಕ್ಕೆ ಅವಕಾಶವೇ ಇರಲಿಲ್ಲ. ಏಕೆಂದರೆ ಈ ಹಿಂದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವುದೇ ಶ್ವಾನಗಳನ್ನು ಸಾಕಿರಲಿಲ್ಲ.

America First Dogs Enters White House Soon

ಶ್ವಾನದ ನಡಿಗೆ ಎಂದು ಟ್ರಂಪ್ ಲೇವಡಿ:

ಕಳೆದ ವಾರವಷ್ಟೇ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರು ಜೋ ಬೈಡನ್ ಬಗ್ಗೆ ಲೇವಡಿ ಮಾಡಿದ್ದರು. ಜೋ ಬೈಡನ್ ಅವರು ನಡೆಯುವುದನ್ನು ನೋಡುತ್ತಿದ್ದರೆ ಶ್ವಾನವು ನಡೆದಂತೆ ಭಾಸವಾಗುತ್ತದೆ. ಅಮೆರಿಕಾ ಶ್ವೇತಭವನದ ಹಸಿರು ಹುಲ್ಲುಹಾಸಿನ ಮೇಲೆ ಶ್ವಾನ ನಡೆಯುವುದನ್ನು ನೋಡಿಕೊಂಡು ಹೇಗೆ ಸಹಿಸಲು ಆಗುತ್ತದೆ ಎಂದು ಅಪಹಾಸ್ಯ ಮಾಡಿದ್ದರು. ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಬೈಡನ್, ಅಮೆರಿಕಾದ "ಶ್ವೇತಭವನದಲ್ಲಿ ಶ್ವಾನವನ್ನು ಮರಳಿ ಕರೆ ತರುತ್ತೇವೆ" ಎಂದು ಕಾಮೆಂಟ್ ಮಾಡಿದ್ದರು. ಜೋ ಬೈಡನ್ ಪ್ರಚಾರದ ಸಂದರ್ಭದಲ್ಲಿ ತಮ್ಮ ನೆಚ್ಚಿನ ಶ್ವಾನವನ್ನು ಕೂಡಾ ಜೊತೆಗೆ ಕರೆದೊಯ್ಯುತ್ತಿದ್ದರು.

ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, 46ರ ಪೈಕಿ 30 ಮಂದಿ ಅಮೆರಿಕಾ ಅಧ್ಯಕ್ಷರು ಶ್ವಾನವನ್ನು ಸಾಕಿದ್ದರು ಎಂದು ತಿಳಿದು ಬಂದಿದೆ. ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವ ಕಮಲಾ ಹ್ಯಾರಿಸ್ ಕೂಡಾ ಯಾವುದೇ ಶ್ವಾನಗಳನ್ನು ಸಾಕಿಲ್ಲ ಎನ್ನಲಾಗಿದೆ.

Recommended Video

Muniratna vs Kusuma : RR Nagar ಕಣದಲ್ಲಿ ಗೆಲ್ಲೋದು ಯಾರು, ಎರಡೂ ಪಕ್ಷಗಳ ಜಿದ್ದಾಜಿದ್ದಿ | Oneindia Kannada

ಕಳೆದ ಶನಿವಾರವಷ್ಟೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಅಧಿಕೃತವಾಗಿ ಆಯ್ಕೆಯಾದರು. ಭಾರತೀಯ ಮೂಲದ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

English summary
America First Dogs Enters White House Soon: Here Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X