• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನಕ್ಕೆ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ ಅಮೆರಿಕ

|

ವಾಷಿಂಗ್ಟನ್, ಮಾರ್ಚ್ 16: "ಭಯೋತ್ಪಾದನೆಗೆ ನೆಲೆ ನೀಡುವುದನ್ನು ಮೊದಲು ನಿಲ್ಲಿಸಿ" ಎಂದು ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದೆ.

"ನಾವು 9/11 ರ ದಾಳಿಯಿಂದ ಕಲಿತ ಪಾಠವನ್ನು ಮರೆತಿಲ್ಲ. ಇಂದು ಭಾರತಕ್ಕೆ ಏನಾಯಿತು(ಪುಲ್ವಾಮಾ ದಾಳಿ) ಎಂಬುದನ್ನು ನಾವು ನೋಡಿದ್ದೇವೆ. ಇದಕ್ಕೆಲ್ಲ ಕಾರಣ ಪಾಕಿಸ್ತಾನ ಭಯೋತ್ಪಾದಕರಿಗೆ ನೆಲೆ ನೀಡಿದ್ದು" ಎಂದು ನೇರವಾಗಿಯೇ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೊ ಪಾಕಿಸ್ತಾನ ಅಪರಾಧಿ ಎಂದು ಆರೋಪಿಸಿದರು.

ಮಸೂದ್ ಬೆಂಬಲಕ್ಕೆ ನಿಂತ ಚೀನಾಕ್ಕೆ ಮಹಾಮಂಗಳಾರತಿ

ಭಯೋತ್ಪಾದನೆಯನ್ನು ಹತ್ತಿಕ್ಕಲು ಮತ್ತು ಭಯೋತ್ಪಾದಕರನ್ನು ಮುಗಿಸಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನ ಯಾವುದಕ್ಕೂ ಸಾಲದು, ಆ ನಿಟ್ಟಿನಲ್ಲಿ ಅದು ಮತ್ತಷ್ಟು ಪ್ರಯತ್ನಿಸಬೇಕಿದೆ ಎಂದು ಪೊಂಪಿಯೋ ಹೇಳಿದರು.

ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತದ ಬೆಂಬಲಕ್ಕೆ ನಿಂತಿದ್ದ ಅಮೆರಿಕ, ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲೂ, ಉಗ್ರ ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಪ್ರಸ್ತಾವ ಮುಂದಿಟ್ಟಿತ್ತು. ಇದಕ್ಕೆ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳೂ ಸಹಕರಿಸಿದ್ದವು. ಆದರೆ ಚೀನಾ ಅಡ್ಡಗಾಲು ಹಾಕಿದ ಪರಿಣಾಮ ಅದಾಗಲಿಲ್ಲ.

ಭಯೋತ್ಪಾದಕರಿಗೆ ನೆಲೆ ನೀಡುವುದನ್ನು ಬಿಡಿ ಎಂದು ಈ ಮೊದಲೂ ಅಮೆರಿಕ, ಪಾಕಿಸ್ತಾನಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ?

ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೈನಿಕರಿದ್ದ ವಾಯನದಮೇಲೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ, 44 ಯೋಧರು ಹುತಾತ್ಮರಾಗುವಂತೆ ಮಾಡಿತ್ತು. ಈ ಘಟನೆಗೆ ಪ್ರತೀಕಾರ ಎಂಬಂತೆ ಫೆ.26 ರಂದು ಭಾರತ ಪಾಕಿಸ್ತಾನದಲ್ಲಿರುವ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 250-300 ಉಗ್ರರು ಸತ್ತಿರಬಹುದು ಎನ್ನಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
US Secretary of State Mike Pompeo has again warned Pakistan to stop harbouring terrorists on its soil and do more to tackle the menace of terrorism,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more