ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸಿಟಿವ್ ಸುದ್ದಿ: ಮಕ್ಕಳಿಗೆ ಕೋವಿಡ್‌ನಿಂದ ರಕ್ಷಣೆ ನೀಡಲಿದೆ ಫ್ಲೂ ಲಸಿಕೆ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 10: ಜಗತ್ತಿನಾದ್ಯಂತ ಕೋವಿಡ್ ಲಸಿಕೆಯ ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಕೊವಿಡ್ ಲಸಿಕೆ ಬಳಕೆ ಆರಂಭವಾಗುವ ವೇಳೆಗೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಜಗತ್ತಿನ ಅನೇಕ ಕಡೆ ವಿವಿಧ ಲಸಿಕೆಗಳ ಬಳಕೆಯಾಗುತ್ತಿದೆ. ಆದರೆ ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಇನ್ನೂ ಕೋವಿಡ್ ನಿಯಂತ್ರಣಕ್ಕೆ ಬಂದಿಲ್ಲ.

ಮಕ್ಕಳಲ್ಲಿ ಕೋವಿಡ್-19 ಹರಡುವುದು ಈಗಲೂ ವಿಜ್ಞಾನಿಗಳು ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಆತಂಕ ಉಳಿಸಿಕೊಂಡಿದೆ. ಮಕ್ಕಳಲ್ಲಿ ಈ ವೈರಸ್ ಪ್ರಭಾವ ಬೀರುವುದು ಕಡಿಮೆ ಎಂದು ಅಧ್ಯಯನಗಳು ಹೇಳಿದರೂ ಅವರು ಕೋವಿಡ್‌ನಿಂದ ಸಂಪೂರ್ಣ ಸುರಕ್ಷಿತರೇ ಎನ್ನುವುದು ದೃಢಪಟ್ಟಿಲ್ಲ. ಈ ಮಧ್ಯೆ ಸಕಾರಾತ್ಮಕ ಸುದ್ದಿಯೊಂದು ಬಂದಿದೆ. ಪ್ರತಿ ವರ್ಷದ ಫ್ಲೂ ಚುಚ್ಚುಮದ್ದು ಹಾಕಿಸಿಕೊಳ್ಳುವ ಮಕ್ಕಳು ಕೋವಿಡ್ 19 ಲಕ್ಷಣಗಳಿಂದ ರಕ್ಷಣೆ ಪಡೆದಿರುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೊರೊನಾ ಕೊಟ್ಟ ಸುದ್ದಿ: 19 ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಒಂದೇ ಒಂದು ಸಾವಿಲ್ಲ! ಕೊರೊನಾ ಕೊಟ್ಟ ಸುದ್ದಿ: 19 ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಒಂದೇ ಒಂದು ಸಾವಿಲ್ಲ!

ಅಮೆರಿಕದ ಮಿಸ್ಸೋರಿ-ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಅರ್ಕನ್ಸಾಸ್ ಚಿಲ್ಡ್ರನ್ ಹಾಸ್ಪಿಟಲ್‌ ಸಿಸ್ಟಮ್‌ಗೆ ದಾಖಲಾಗಿದ್ದ 905 ಕೋವಿಡ್ ಪಾಸಿಟಿವ್ ಮಕ್ಕಳಿಗೆ ಅವಧಿಗೆ ಅನುಗುಣವಾಗಿ ಫ್ಲೂ ಲಸಿಕೆ ನೀಡಲಾಗಿತ್ತು. ಈ ಲಸಿಕೆ ಬಳಿಕ ಶೇ 29ರಷ್ಟು ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬರುವುದು ಕಡಿಮೆಯಾಗಿದೆ. ಮುಂದೆ ಓದಿ.

ಉಸಿರಾಟದ ಸಮಸ್ಯೆ ಕಡಿಮೆ

ಉಸಿರಾಟದ ಸಮಸ್ಯೆ ಕಡಿಮೆ

ಇನ್‌ಫ್ಲೂಯೆಂಜಾ ಲಸಿಕೆ ಪಡೆದ ಶೇ 32ರಷ್ಟು ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳು ಬರುವ ಸಂಭವ ಕಡಿಮೆಯಾಗಿದೆ. ಹೀಗಾಗಿ ಫ್ಲೂ ಲಸಿಕೆಗಳು ಮಕ್ಕಳಲ್ಲಿ ಸಾರ್ಸ್-ಕೋವ್-2 ವಿರುದ್ಧ ಪ್ರತಿರಕ್ಷಣಾ ಸಾಮರ್ಥ್ಯ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯ ಲಕ್ಷಣಗಳು

ಸಾಮಾನ್ಯ ಲಕ್ಷಣಗಳು

ಮಕ್ಕಳಲ್ಲಿ ಕಂಡುಬರುವ ಕೋವಿಡ್-19ರ ಮುಖ್ಯ ಲಕ್ಷಣಗಳು ವಯಸ್ಕರಲ್ಲಿ ಕಾಣಿಸುವ ಲಕ್ಷಣಗಳಂತೆಯೇ ಇವೆ. ಹೊಸ ಅಥವಾ ನಿರಂತರ ಕೆಮ್ಮು, ವಾಸನೆ ಮತ್ತು ರುಚಿ ಗ್ರಹಿಸುವ ಸಾಮರ್ಥ್ಯದ ನಷ್ಟ ಸಾಮಾನ್ಯವಾಗಿವೆ. ಇವುಗಳಲ್ಲದೆ ಶೀತ, ಗಂಟಲು ನೋವು, ಚಳಿ ಮುಂತಾದ ಲಕ್ಷಣಗಳೂ ಉಂಟಾಗುತ್ತವೆ.

ಕೇರಳ: ಒಂದೇ ಟ್ಯೂಷನ್ ಕೇಂದ್ರದ 90 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕುಕೇರಳ: ಒಂದೇ ಟ್ಯೂಷನ್ ಕೇಂದ್ರದ 90 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಅಂಗಗಳಲ್ಲಿ ಉರಿಯೂತ

ಅಂಗಗಳಲ್ಲಿ ಉರಿಯೂತ

ಆದರೆ ಮಕ್ಕಳಲ್ಲಿ ಕಂಡುಬಂದಿರುವ ಅತಿ ಮುಖ್ಯ ಲಕ್ಷಣವೆಂದರೆ ಮಲ್ಟಿಸಿಸ್ಟಂ ಇನ್‌ಫ್ಲಾಮೇಟರಿ ಸಿಂಡ್ರೋಮ್ (ಎಂಐಎಸ್-ಸಿ). ದೇಹದ ಅನೇಕ ಅಂಗಗಳಲ್ಲಿ ತೀವ್ರತರದ ಉರಿಬಾಧೆಗೆ ಇದು ಕಾರಣವಾಗುತ್ತದೆ. ಇದು ಹೃದಯ, ಶ್ವಾಸಕೋಶ, ರಕ್ತನಾಳಗಳು, ಮೂತ್ರಪಿಂಡಗಳು, ಜೀರ್ಣ ವ್ಯವಸ್ಥೆ, ಚರ್ಮ ಅಥವಾ ಕಣ್ಣುಗಳನ್ನು ಒಳಗೊಂಡಿರುತ್ತದೆ.

ಮಕ್ಕಳ ಸುರಕ್ಷತೆ ನೋಡಿಕೊಳ್ಳಿ

ಮಕ್ಕಳ ಸುರಕ್ಷತೆ ನೋಡಿಕೊಳ್ಳಿ

ಮಕ್ಕಳು ಕೋವಿಡ್-19ಕ್ಕೆ ಒಳಗಾಗುವ ಅಪಾಯ ಕಡಿಮೆಯೇ ಅಥವಾ ಅಲ್ಲವೇ ಎಂಬುದಕ್ಕಿಂತ ಅವರನ್ನು ಎಲ್ಲ ಸಮಯವೂ ರಕ್ಷಿಸುವುದು ಮುಖ್ಯ. ಅವರು ಮಾಸ್ಕ್ ಧರಿಸುವುದು, ಗುಂಪುಗಳಿಂದ ದೂರ ಇರುವುದು, ಸ್ವಚ್ಛವಿಲ್ಲದ ಸ್ಥಳಗಳಿಂದ ದೂರ ಇರುವುದನ್ನು ನೋಡಿಕೊಳ್ಳಬೇಕು. ಹಾಗೆಯೇ ಅವರು ಕೈಗಳನ್ನು ತೊಳೆದುಕೊಳ್ಳುವುದು, ಸ್ವಚ್ಛತೆ ಕಾಪಾಡುವುದಕ್ಕೆ ಆದ್ಯತೆ ನೀಡಬೇಕು. ಆದರೆ ಹ್ಯಾಂಡ್ ಸ್ಯಾನಿಟೈಸರ್‌ಗಳು ಮಕ್ಕಳ ಕಣ್ಣುಗಳಿಗೆ ಹಾನಿ ಮಾಡುವ ಅಪಾಯವಿದೆ. ಹೀಗಾಗಿ ಎಚ್ಚರ ಅವಶ್ಯಕ.

English summary
A study in America finds Flu shots reduces the risk of Covid-19 symptoms in children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X