ವಿಜಯಪುರ : ಶೌಚಾಲಯಕ್ಕಾಗಿ ಪ್ರತಿಭಟನೆ ಮಾಡಿದ ಮಹಿಳೆಯರು

Posted By:
Subscribe to Oneindia Kannada

ವಿಜಯಪುರ, ಡಿಸೆಂಬರ್ 05: ಆ ಹಿಂದಿ ಚಿತ್ರದ ಕೊನೆಯಲ್ಲಿ ಮಹಿಳೆಯರೆಲ್ಲಾ ಸೇರಿ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಾರೆ ಚಿತ್ರದ ಹೆಸರು "ಟಾಯ್ಲೆಟ್ ಏಕ್ ಪ್ರೇಮ ಕಥಾ'. ಇದೇ ರೀತಿಯ ಘಟನೆ ರಾಜ್ಯದ ವಿಜಯಪುರ ಜಿಲ್ಲೆ ಸಿಂದಗಿಯಲ್ಲೂ ನಡೆದಿದೆ. ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಮಹಿಳೆಯರು ಪುರಸಭೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.

ಕಲಬುರಗಿ : ಉಪವಾಸ ಮಾಡಿ ಶೌಚಾಲಯ ಕಟ್ಟಿಕೊಂಡ ವಿದ್ಯಾರ್ಥಿನಿ

ಸಿಂಧಗಿ ಪುರಸಭೆ ವ್ಯಾಪ್ತಿಯ ಮಹಿಳೆಯರಿಗೆ ಬಯಲು ಶೌಚಾಲಯದಿಂದ ಆರೋಗ್ಯ ಹಾನಿ, ಪರಿಸರ ಹಾನಿ ಕುರಿತು ಜಾಗೃತಿ ಮೂಡಿದೆ. ಆದರೆ ಸ್ವಚ್ಚತೆ ಕಾಪಾಡಬೇಕಾದ ಪುರಸಭೆ ಅಧಿಕಾರಿಗಳಿಗೆ ಈ ಕುರಿತು ಆಲಸ್ಯ ಇದ್ದಂತಿದೆ ಹಾಗಾಗಿ ಈಗ ಮಹಿಳೆಯರೇ ಪುರಸಭೆಯ ಕಿವಿಹಿಂಡುವ ಕೆಲಸ ಮಾಡಿದ್ದಾರೆ.

ಬಯಲು ಶೌಚದಿಂದ ರೋಸಿ ಹೋಗಿರುವ ಮಹಿಳೆಯರು ಒಟ್ಟಾಗಿ ಬಂದು ಸಿಂಧಗಿ ಪುರಸಭೆಗೆ ಬೀಗ ಜಡಿದು, ಶೌಚಾಲಯ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ.

women locks Municipality in order to protest for building toilet

ಈ ಮುಂಚೆಯೇ ಸಾಕಷ್ಟು ಬಾರಿ ಇವರು ಶೌಚಾಲಯ ನಿರ್ಮಾಣಕ್ಕೆಂದು ಅರ್ಜಿ ಸಲ್ಲಿಸಿದ್ದರು, ಆದರೆ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿರಲಿಲ್ಲ ಹಾಗಾಗಿ ಮಹಿಳೆಯರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಇಂದು (ಡಿಸೆಂಬರ್ 05) ಬೆಳಿಗ್ಗೆ ಪುರಸಭೆಗೆ ಮುತ್ತಿಗೆ ಹಾಕಿದ ಮಹಿಳೆಯರ ಗುಂಪು ಮೊದಲು ಸಿಬ್ಬಂದಿಯನ್ನು ಕಾರ್ಯಲಯದಿಂದ ಹೊರ ಹಾಕಿ ಪುರಸಭೆಗೆ ಬೀಗ ಹಾಕಿದರು.

ದೇಶದ ಗಮನ ಸೆಳೆದ ಕೊಪ್ಪಳದ ಕಡಿಮೆ ವೆಚ್ಚದ ಮೂತ್ರಾಲಯ ಮಾದರಿ

ಮಹಿಳೆಯರ ಉಗ್ರ ರೂಪ ಕಂಡು ಬೆಚ್ಚಿದ ಪುರಸಭೆ ಅಧಿಕಾರಿಗಳು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡರು ಆದರೆ ಅವರ ಮಾತಿಗು ಜಗ್ಗದ ಮಹಿಳೆಯರು ಸುತಾರಾಂ ಕಾರ್ಯಾಲಯದ ಬೀಗ ತೆರೆಯಲು ಒಪ್ಪಲಿಲ್ಲ.
ಕೊನೆಗೆ ಅಧಿಕಾರಿಗಳು ತಿಂಗಳೊಳಗಾಗಿ ಶೌಚಾಲಯ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ಮೇಲಷ್ಟೆ ಕಾರ್ಯಾಲಯದ ಬೀಗ ತೆರೆದಿದ್ದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Women in Sindhagi locked Municipality Office in order to protest and demand to build toilets. they complaint that they gave applications for toilets but municipality officers neglecting about it.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ