ವಿಜಯಪುರ : ಆರೋಗ್ಯ ಕವಚ ವಾಹನದಲ್ಲೇ ಹೆರಿಗೆ

Posted By: Gururaj
Subscribe to Oneindia Kannada

ವಿಜಯಪುರ, ಅಕ್ಟೋಬರ್ 22 : ಆರೋಗ್ಯ ಕವಚ ವಾಹನದಲ್ಲೇ ಹೆರಿಗೆಯಾದ ಘಟನೆ ವಿಜಯಪುರದಲ್ಲಿ ನಡೆದಿದೆ. ತಾಯಿ ಮತ್ತು ಹೆಣ್ಣುಮಗು ಆರೋಗ್ಯವಾಗಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೋಲ್ಹಾರ ಪಟ್ಟಣದ ಬಳಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕೋಲ್ಹಾರ ಪಟ್ಟಣದ ನಿವಾಸಿ ದಾಕ್ಷಾಯಿಣಿ ರಮೇಶ ಜಕ್ಕೋಜಿ ಅವರಿಗೆ ಅಂಬ್ಯುಲೆನ್ಸ್‌ನಲ್ಲೇ ಹೆರಿಗೆ ಆಗಿದೆ.

Woman delivers baby in ambulance Vijayapura

ಇಂದು ಮಧ್ಯಾಹ್ನ ದಾಕ್ಷಾಯಿಣಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು 108 ವಾಹನದಲ್ಲಿ ತಾಲೂಕಿನ ಬಳೂತಿ ಗ್ರಾಮದಿಂದ ಕೋಲ್ಹಾರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುತ್ತಿದ್ದಾಗ ವಾಹನದಲ್ಲಿಯೇ ಹೆರಿಗೆಯಾಗಿದೆ.

ದಾಕ್ಷಾಯಿಣಿ ಅವರಿಗೆ ಹೆಣ್ಣುಮಗು ಜನಿಸಿದ್ದು, ಹೆರಿಗೆ ಬಳಿಕ ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಹೆರಿಗೆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಹನದಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ EMT ಗೌಸಪಾಕ ಹಾಗೂ ಚಾಲಕ ರಾಮನಗೌಡ ಅವರಿಗೆ ದಾಕ್ಷಾಯಿಣಿ ಪೋಷಕರು ಧನ್ಯವಾದ ಅರ್ಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A woman delivered her baby inside an ambulance in Vijayapura, Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ