ವಿಜಯಪುರ: ಅತ್ಯಾಚಾರ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

Posted By: ವಿಜಯಪುರ ಪ್ರತಿನಿಧಿ
Subscribe to Oneindia Kannada

ವಿಜಯಪುರ, ಡಿಸೆಂಬರ್ 30: ವಿಜಯಪುರದಲ್ಲಿ ದಲಿತ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಆರೋಪ ಪ್ರಕರಣ ಆರೋಪಿಗಳನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.

ವಿಜಯಪುರ ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ 4 ಜನರ ಬಂಧನ

ಇಷ್ಟು ದಿನ ಸಿಐಡಿ ಪೊಲೀಸ್ ವಶದಲ್ಲಿದ್ದ ನಾಲ್ಕು ಜನ ಆರೋಪಿಗಳ ವಿಚಾರಣೆ ಇಂದು ಮುಕ್ತಾಯವಾಗಿದ್ದು, ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಯಿತು.

Vijayapura GangRape accused get judicial custody

ಜನವರಿ 13ರ ವರೆಗೆ ನ್ಯಾಯಾಂಗ ಬಂಧನದಲ್ಲಿರುವಂತೆ ನ್ಯಾಯಾಧೀಶರು ಆದೇಶಿಸಿದ ಕಾರಣ ಸಿಐಡಿ ಪೊಲೀಸರು ನಾಲ್ಕು ಜ‌ನ ಆರೋಪಿಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ.

ವಿಜಯಪುರ: ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಜಿಲ್ಲಾ ಬಂದ್

ಬಂಧಿತ ನಾಲ್ಕು ಜನರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು ಅವರಿಬ್ಬರನ್ನು ಬಾಲ ನ್ಯಾಯ ಮಂಡಳಿಗೆ ಹಾಗೂ ಇನ್ನಿಬ್ಬರನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ವಿಶೇಷ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The accused have been charged with judicial custody today in connection with the rape and murder of a Dalit minor girl in Vijayapur.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ