ವಿಜಯಪುರದಲ್ಲಿ ಬೊಲೆರೋ-ಲಾರಿ ಡಿಕ್ಕಿ: ಸ್ಥಳದಲ್ಲೇ ಐವರ ದುರ್ಮರಣ

ವಿಜಯಪುರ, ನವೆಂಬರ್ 20: ಬೊಲೆರೋ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಜಯಪುರ ಹೊನಗನಹಳ್ಳಿ ಬಳಿ ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಈ ರಸ್ತೆ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಲಾರಿಯಲ್ಲಿದ್ದವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

vijayapura five labours killed on spot bolero lorry road accident

ಮೃತರೆಲ್ಲರೂ ರಸ್ತೆ ಕಾಮಗಾರಿಗೆ ಬಂದಿದ್ದ ಕೂಲಿ ಕಾರ್ಮಿಕರಾಗಿದ್ದಾರೆ. ಅವರೆಲ್ಲರೂ ಕೆಲಸ ಮುಗಿಸಿ ವಿಜಯಪುರಕ್ಕೆ ಮರಳುತ್ತಿದ್ದರು.

ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕರಿದ್ದ ಬೊಲೆರೋ ವಾಹನ ಮತ್ತು ಲಾರಿ ಎರಡೂ ವೇಗವಾಗಿ ಸಾಗುತ್ತಿದ್ದವು. ರಾತ್ರಿ ವೇಳೆ ರಸ್ತೆ ಸರಿಯಾಗಿ ಕಾಣದೆ ಮುಖಾಮುಖಿ ಡಿಕ್ಕಿ ಸಂಭವಿಸಿರಬಹುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+