Breaking; ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ
ವಿಜಯಪುರ, ಏಪ್ರಿಲ್ 29 ; ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಯುತ್ತಿದೆ. ಈ ವೇಳೆ ಶಿಕ್ಷಕರಿಗೆ ಉತ್ತರ ಪತ್ರಿಕೆಯೊಂದು ಸಿಕ್ಕಿದ್ದು, ವಿದ್ಯಾರ್ಥಿ ಸಾಷ್ಟಾಂಗ ನಮಸ್ಕಾರ ಹಾಕಿದ್ದಾನೆ.
ವಿಜಯಪುರದ ಸ್ನೇಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೌಲ್ಯ ಮಾಪನದ ವೇಳೆ ಈ ಪತ್ರಿಕೆ ಪತ್ತೆಯಾಗಿದೆ. ಬಿಲ್ ಕಲೆಕ್ಟರ್ ಆಗಿ ಮುಂಬಡ್ತಿ ಪಡೆಯಲು ಒಂದು ಅಂಕ ನೀಡಿ ಎಂದು ಮನವಿ ಮಾಡಿರುವ ಈ ಪತ್ರಿಕೆ ಫೋಟೋ ವೈರಲ್ ಆಗಿದೆ.
ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿರುವ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾನೆ. ಪರೀಕ್ಷೆಯಲ್ಲಿ ಪಾಸ್ ಆದರೆ ಬಿಲ್ ಕಲೆಕ್ಟರ್ ಆಗಿ ಬಡ್ತಿ ದೊರೆಯಲಿದೆ. ಅದಕ್ಕಾಗಿ ಶಿಕ್ಷಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ವಿದ್ಯಾರ್ಥಿ ಮನವಿ ಮಾಡಿದ್ದಾನೆ.

ನನ್ನ ಪಾಸು ಮಾಡಿದರೆ ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ. ನಿಮ್ಮಿಂದ ನನಗೆ ಅನ್ನ ಸಿಕ್ಕಿದಂತಾಗುತ್ತದೆ. ಉತ್ತೀರ್ಣ ಮಾಡಿಕೊಡಿ. ನನಗೆ ಇದೊಂದೆ ಪೇಪರ್ ಪಾಸು ಆಗಬೇಕಿರುವುದು ಎಂದು ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದಿದ್ದಾನೆ.
ಈ ಪತ್ರಿಕೆ ಮೌಲ್ಯ ಮಾಪನ ಕೈಗೊಂಡ ಶಿಕ್ಷಕರು ಉತ್ತರ ಪತ್ರಿಕೆ ಫೋಟೋ ತೆಗೆದು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಇದರಿಂದಾಗಿ ವಿದ್ಯಾರ್ಥಿ ಬರೆದ ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications