ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ: ಗಾಲಿ ರೆಡ್ಡಿ ವಾಗ್ದಾಳಿ

Posted By:
Subscribe to Oneindia Kannada

ಮುದ್ದೇಬಿಹಾಳ, ನವೆಂಬರ್ 29: "ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ. ನನ್ನ ಹಣ ಕಳೆದುಕೊಳ್ಳುವುದಕ್ಕೆ, ವರ್ಷಗಳ ಕಾಲ ಜೈಲಿನಲ್ಲಿ ಕಳೆಯುವುದಕ್ಕೆ ಅವರೇ ಕಾರಣ" ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ. ಬಹಳ ಕಾಲದ ಮೇಲೆ ಖಾರವಾದ ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ.

ಜನಾರ್ದನ ರೆಡ್ಡಿ ಜಾಮೀನು ರದ್ದುಗೊಳಿಸಲು ಎಸ್‌ಐಟಿ ಅರ್ಜಿ

ಇಲ್ಲಿ ಪತ್ರಕರ್ತರ ಜತೆಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದಿಢೀರನೆ ಉತ್ತರ ಕರ್ನಾಟಕದ ಬಗ್ಗೆ ಪ್ರೀತಿ ಬಂದುಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದು, ಏಕಕಾಲಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮುಂಚೂಣಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

Janardhana Reddy

ಅಕ್ರಮ ಗಣಿ ಹಗರಣದಲ್ಲಿ ತಿಂಗಳಗಳ ಕಾಲ ಜೈಲಿನಲ್ಲಿದ್ದರು. ಆ ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಅವರು, ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುವ ಮೂಲಕ ಮತ್ತೆ ಸುದ್ದಿಗೆ ಬಂದರು. ಈ ಮಧ್ಯೆ ಸಿಬಿಐ ದಾಖಲಿಸಿದ್ದ ಹಲವು ಪ್ರಕರಣಗಳನ್ನು ಕೈ ಬಿಟ್ಟಿತ್ತು. ಇದೀಗ ನಿಧಾನವಾಗಿ ರಾಜಕಾರಣದಲ್ಲಿ ಜನಾರ್ದನ ರೆಡ್ಡಿ ಸಕ್ರಿಯರಾಗುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Siddaramaiah unfit to be a CM, said by former minister Janardana Reddy in Muddebihala, Vijayapura on Wednesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ