Get Updates
Get notified of breaking news, exclusive insights, and must-see stories!

ರವಿ ಬೆಳಗೆರೆ ಪ್ರಕರಣ: ಮತ್ತೊಬ್ಬ ಆರೋಪಿಯ ಹುಡುಕಾಟ ತೀವ್ರಗೊಳಿಸಿದ ಸಿಸಿಬಿ

ವಿಜಯಪುರ, ಡಿಸೆಂಬರ್ 11 : ಪತ್ರಕರ್ತ ರವಿ ಬೆಳಗೆರೆ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಮತ್ತೊಬ್ಬ ಆರೋಪಿ ವಿಜು ಬಡಿಗೇರ ತಲೆ ಮರೆಸಿಕೊಂಡಿದ್ದ ಆತನ ಶೋಧಕ್ಕಾಗಿ ಸಿಸಿಬಿ ತಂಡ ವಿಜಯಪುರದಲ್ಲಿ ಬೀಡು ಬಿಟ್ಟಿದೆ.

ರವಿ ಬೆಳಗೆರೆ ಇಂದ ಸುನಿಲ್ ಹತ್ಯೆಗೆ ಸುಪಾರಿ ಪಡೆದಿದ್ದ ಎನ್ನಲಾದ ಶಾರ್ಪ್ ಶೂಟರ್ ಶಶಿಧರ್ ಮುಂಡೆವಾಡಿಯ ಅಳಿಯ ಈ ವಿಜು ಬಡಿಗೇರ. ಈತ ಶಶಿಧರ್ ಮುಂಡೆವಾಡಿಯ ಜೊತೆಗೆ ಸುನಿಲ್ ಕೊಲೆ ಮಾಡಲು ಅವರ ಅಪಾರ್ಟ್‌ಮೆಂಟ್ ಗೆ ತೆರಳಿದ್ದ ಎನ್ನಲಾಗಿದೆ. ಇದಲ್ಲದೆ ಯಲಹಂಕದ ಉದ್ಯಮಿ ಮಗನ ಅಪಹರಣ ಪ್ರಯತ್ನದಲ್ಲಿಯೂ ಸಹಾಯ ಮಾಡಿದ್ದ ಎಂದು ಶಶಿಧರ ಮುಂಡೆವಾಡಿ ಸಿಸಿಬಿಗೆ ಹೇಳಿಕೆ ನೀಡಿದ್ದಾನೆ.

Ravi Belagere case: CCB searching for another accused Viju Badigera

ವಿಜು ಬಡಿಗೇರ ಸುನಿಲ್ ಹತ್ಯೆ ಪ್ರಯತ್ನ ಪ್ರಕರಣದಲ್ಲಿ 3ನೇ ಪ್ರಮುಖ ಆರೋಪಿಯಾಗಿದ್ದು ಅವನ ಬಂಧನ ರವಿ ಬೆಳಗೆರೆ ಪ್ರಕರಣಕ್ಕೆ ಹೆಚ್ಚಿನ ತೂಕ ಒದಗಿಸಲಿದೆ.

ವಿಜಯಪುರದ ಸಿಂಧಗಿ ಪಟ್ಟಣದ ಕಂಟೆಪ್ಪನ ಪ್ಲಾಟ್ ನಲ್ಲಿ ವಿಜು ಬಡಿಗೇರ ಮನೆ ಇದ್ದು, ಆತನ ಮನೆಯ ಮೇಲೆ ಸಿಸಿಬಿ ದಾಳಿ ನಡೆಸಿ ಹುಡುಕಾಟ ನಡೆಸಿತ್ತು. ಆತ ಸಿಂಧಗಿಯಲ್ಲೇ ಅಡಗಿಕೊಂಡಿರಬಹುದು ಎಂದು ಅಂದಾಜಿಸಿರುವ ಸಿಸಿಬಿ ತಂಡ ಇಬ್ಬರು ಸ್ಥಳೀಯ ಮಾಹಿತಿದಾರರ ಸಹಾಯದೊಂದಿಗೆ ವಿಜಯಪುರ ಜಿಲ್ಲೆಯಾದ್ಯಂತ ಹುಡುಕಾಟ ನಡೆಸುತ್ತಿದೆ.

ಸಿಂಧಗಿ ಮತ್ತಿತರೆ ಕಡೆ ವಿಜು ಬಡಿಗೇರಯ ಸ್ನೇಹಿತರು, ಸಂಬಂಧಿಗಳ ಮನೆಗಳ ಮೇಲೆಲ್ಲಾ ದಾಳಿ ನಡೆಸಿ ಸಿಸಿಬಿ ತಂಡ ಹುಡುಕಾಟ ನಡೆಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+