Basangouda Patil Yatnal: ಹೊಸ ಪಕ್ಷ ಕಟ್ಟಲು ಮುಹೂರ್ತ ಫಿಕ್ಸ್ ಮಾಡಿದ ಯತ್ನಾಳ್
ವಿಜಯಪುರ ಮಾರ್ಚ್ 30: ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ರಾಜ್ಯದಲ್ಲಿ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಹೀಗಾಗಿ ನಾನು ಹೊಸ ಪಕ್ಷ ಕಟ್ಟುತ್ತೇನೆ ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಹೌದು ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್ ಹೊಸ ವರ್ಷ ಯುಗಾದಿಗೆ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಂತೆ ಕಾಣಿಸುತ್ತಿದೆ. 'ರಾಜ್ಯದಲ್ಲಿ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಹೀಗಾಗಿ ನಾನು ಹೊಸ ಪಕ್ಷ ಕಟ್ಟುತ್ತೇನೆ. ವಿಜಯದಶಮಿಯಂದು ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆ' ಎಂದು ಹೇಳಿದ್ದಾರೆ.

'ರಾಜ್ಯದಲ್ಲಿ ಹಿಂದೂ ಪಕ್ಷವನ್ನು ಕಟ್ಟುವ ಅನಿವಾರ್ಯತೆ ಇದೆ. ಇದರಿಂದ ರಾಜ್ಯಾದ್ಯಂತ ನಮ್ಮ ಹೋರಾಟ ಆರಂಭವಾಗಿದೆ. ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಟ ರಾಜಕಾರಣ ತಡೆಯಬೇಕು ಎಂದು ಅವರು ಮತ್ತೆ ಯುಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ಜಯದಶಮಿ
'ಅಕಸ್ಮಾತ್ ಯಡಿಯೂರಪ್ಪ ವಿಜಯೇಂದ್ರನೆ ಪಕ್ಷಕಕ್ಕೆ ಅನಿವಾರ್ಯವಾದರೆ, ವಿಜಯೇಂದ್ರನನ್ನು ಅಧ್ಯಕ್ಷರಾಗಿ ಮುಂದುವರಿಸದರೆ ಅದು ಪಕ್ಷದ ಕರ್ಮ. ನಾವು ಹಿಂದೂ ಪರವಾಗಿ ಪಕ್ಷ ಕಟ್ಟಬೇಕಾದ ಅನಿವಾರ್ಯತೆ ಬರಲಿದೆ. ಮುಂದಿನ ವಿಜಯದಶಮಿಗೆ ರಾಜ್ಯದಲ್ಲಿ ಹೊಸ ಪಕ್ಷ ರಚನೆ ಮಾಡಲಾಗುತ್ತೆ' ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಬಿಜೆಪಿಯವರು ನನ್ನನ್ನು ಗೌರವದಿಂದ ಮತ್ತೆ ವಾಪಸ್ ಕರೆಯಲಿದ್ದಾರೆ ಎಂದು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶನಿವಾರ ಹೇಳಿದ್ದರು. ಬಿಎಸ್ ಯಡಿಯೂರಪ್ಪ ಅವರ ಕುಟುಂಬ ರಾಜಕೀಯ ವಿನಾಶದ ಮುನ್ಸೂಚನೆ ನೀಡಿದ್ದಾರೆ. ನನ್ನನ್ನು ವಾಪಸ್ ಕರೆಯುವ ಸಮಯ ಬರುತ್ತದೆ. ಈ ಹಿಂದೆ ಅಮಿತ್ ಶಾ ಅವರು ನನ್ನನ್ನು ವಾಪಸ್ ಕರೆದಿದ್ದರು. ಪ್ರಧಾನಿ ಮೋದಿ ಅವರೇ ನನ್ನನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುತ್ತಾರೆ ಎಂದು ಯತ್ನಾಳ್ ಸುದ್ದಿಗಾರರಿಗೆ ತಿಳಿಸಿದ್ದರು.
ಆದರೆ ಇಂದು ಹೊಸ ಪಕ್ಷಕ್ಕೆ ಮುಹೂರ್ತ ಫಿಕ್ಸ್ ಮಾಡಿರುವುದನ್ನು ನೋಡಿದರೆ ಯತ್ನಾಳ್ ಮತ್ತೆ ಪಕ್ಷಕ್ಕೆ ವಾಪಸ್ ಹೋಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಪಕ್ಷ ವಿರೋಧಿ ಹೇಳಿಕೆಯಿಂದಾಗಿ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದರ ನಂತರ ಯತ್ನಾಳ್ ಅವರು ತಮ್ಮನ್ನು ಮತ್ತೆ ಪಕ್ಷಕ್ಕೆ ವಾಪಸ್ ಕರೆದುಕೊಳ್ಳುತ್ತಾರೆಂದು ಭರವಸೆ ಹಾಗೂ ನಂಬಿಕೆಯನ್ನಿಟ್ಟುಕೊಂಡಿದ್ದರು. ಆದರೆ ಇಂದು ಯತ್ನಾಳ್ ಅವರು ನೀಡಿದ ಹೇಳಿಕೆ ಗಮನಿಸಿದರೆ ಯತ್ನಾಳ್ ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ. ಹಾಗಾದರೆ ನಿಜವಾಗಲೂ ಯತ್ನಾಳ್ ಅವರು ವಿಜಯದಶಮಿ ದಿವಸ ಹೊಸ ಪಕ್ಷವನ್ನು ಕಟ್ಟುತ್ತಾರಾ? ಅಥವಾ ಸುಮ್ಮನೆ ಈ ಹೇಳಿಕೆಯನ್ನು ನೀಡಿದ್ರಾ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications