ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಾಕ್ರಮ ದಿವಸ : ಸರ್ಜಿಕಲ್ ಸ್ಟ್ರೈಕ್ ನೆನೆದ ವಿಜಯಪುರದ ಉಪನ್ಯಾಸಕ

By ಅಮಿತ ಕುಮಾರ ಬಿರಾದಾರ
|
Google Oneindia Kannada News

ಎರಡು ವರ್ಷಗಳ ಹಿಂದೆ 2016ರ ಸೆಪ್ಟೆಂಬರ್ 29ರಂದು 'ಸರ್ಜಿಕಲ್ ಸ್ಟ್ರೈಕ್' ಎಂದೇ ಕರೆಯಲ್ಪಡುವ ಭಾರತದ ಮಿಲಿಟರಿ ಕಾರ್ಯಾಚಾರಣೆ ಇಡಿ ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡಿತ್ತು.

ಸರ್ಜಿಕಲ್ ಸ್ಟ್ರೈಕ್ ನ ಆ ರೋಚಕ ದಿನಕ್ಕೆ ಇಂದಿಗೆ ಎರಡು ವರುಷ... ಸರ್ಜಿಕಲ್ ಸ್ಟ್ರೈಕ್ ನ ಆ ರೋಚಕ ದಿನಕ್ಕೆ ಇಂದಿಗೆ ಎರಡು ವರುಷ...

ನಮ್ಮ ಸೈನಿಕರ ಮೇಲಿನ ನಿರಂತರ ದಾಳಿ ಮತ್ತು ಸೈನಿಕರ ಹತ್ಯೆಗಳು ನಿಜಕ್ಕೂ ಭಾರತದ ಶಾಂತಿಯನ್ನೆ ಪದೆ ಪದೆ ಕದಡಿಸುತ್ತಿತ್ತು. ಪಾಕಿಸ್ತಾನ ಇವತ್ತು ಸುಧಾರಿಸಬಹುದು ನಾಳೆ ಸುಧಾರಿಸಬಹುದೆಂಬ ಭಾರತದ ಲೆಕ್ಕಾಚಾರ ಮತ್ತೆ ಮತ್ತೆ ತಲೆ ಕೆಳಗಾಗುತ್ತಿತ್ತು. ಪಾಕಿಸ್ತಾನದ ದ್ವಿನೀತಿ ಮತ್ತು ದ್ವಂದ್ವ ನಿಲುವುಗಳ ಆ ದೇಶದ ಮೇಲಿನ ನಂಬಿಕೆಯನ್ನೇ ಹುಸಿ ಮಾಡಿದ್ದವು.

ಗಡಿಯಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್?: ರಾಜನಾಥ್ ಸಿಂಗ್ ಹೇಳಿದ್ದೇನು? ಗಡಿಯಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್?: ರಾಜನಾಥ್ ಸಿಂಗ್ ಹೇಳಿದ್ದೇನು?

ಹಾಗಾಗಿ ಪಾಕಿಸ್ತಾನ ನಮ್ಮ ನೇರೆ ರಾಷ್ಟ್ರವಾಗಿದ್ದರೂ ಶತ್ರು ರಾಷ್ಟ್ರವಾಗಿಯೇ ಉಳಿದು ಬಿಟ್ಟಿದೆ. ಸೈನಿಕರ ಮೇಲಿನ ದಾಳಿಗಳು ಮತ್ತು ಕ್ರೂರತ್ವ ತುಂಬಿದ ಹತ್ಯೆಗಳು, ತಲೆ ಕಡೆದು ಬಿಸಾಡುವುದು, ಅಂಗಾಂಗಳನ್ನ ಕತ್ತರಿಸುವುದು, ಚಿತ್ರಹಿಂಸೆಯಿಂದ ಕೊಲ್ಲುವುದು ನಿಜಕ್ಕೂ ಭಾರತೀಯರನ್ನ ಬಡಿದೆಬ್ಬಿಸುತ್ತಿದ್ದವು. ಮತ್ತೆ ಎಂತಹ ಸರಕಾರ ಬಂದರೂ ಜನರು ಅವುಗಳನ್ನ ದೂಷಿಸುತ್ತಾ ಇದ್ದರು. ಯಾವಾಗ ಅವರ ಕ್ರೌರ್ಯ ಮತ್ತು ಸೈನಿಕರ ಮೇಲಿನ ದಾಳಿ ಭಾರತೀಯ ಸೈನಿಕರ ಮತ್ತು ಸರಕಾರದ ನಿದ್ದೆಕೆಡಿಸಿದ್ದವೋ ಸೈನಿಕರು ಪ್ರತಿಕಾರ ತಗೆದುಕೊಳ್ಳಲೇಬೇಕಾಯಿತು.

Lecturer from Vijayapura remembers Surgical Strike

ಮೊದಲಿನ ದಿನಮಾನಗಳಲ್ಲಿ ಎಷ್ಟೆ ಹತ್ಯೆಯಾದರೂ ಸೈನಿಕರಿಗೆ ಪೂರ್ಣ ಅಧಿಕಾರ ಇಲ್ಲದಿರುವುದರಿಂದ ಸುಮ್ಮನಾಗುತ್ತಿದ್ದರು. ಆದರೆ ಈ ಬಾರಿ ಹಾಗಾಗಲಿಲ್ಲ. ಸರಕಾರದಿಂದ ಅವರ ವಿರುದ್ದ ಪ್ರತಿಕಾರ ಮತ್ತು ಬುದ್ದಿಕಲಿಸುವ ಸೂಚನೆ ಸೈನ್ಯಕ್ಕೆ ಸಿಕ್ಕ ಕೂಡಲೆಯೇ ಕಾರ್ಯೋನ್ಮುಖರಾದ ಸೈನಿಕರ ಮತ್ತು ಅಧಿಕಾರಿಗಳು ಜೊತೆಗೂಡಿ ಒಂದು ಕಾರ್ಯತಂತ್ರವನ್ನು ಅತ್ಯಂತ ರಹಸ್ಯವಾಗಿ ರೂಪಿಸಿಯೇ ಬಿಟ್ಟರು.

ಉಗ್ರರ ನಡುಗಿಸಿದ್ದ ಸರ್ಜಿಕಲ್ ಸ್ಟ್ರೈಕ್ ವಿರೋಧಿಸಿದ್ದು ಯಾರ್ಯಾರು? ಉಗ್ರರ ನಡುಗಿಸಿದ್ದ ಸರ್ಜಿಕಲ್ ಸ್ಟ್ರೈಕ್ ವಿರೋಧಿಸಿದ್ದು ಯಾರ್ಯಾರು?

ಶತ್ರುಗಳು ಎಲ್ಲಿ ಅಡಗಿರುತ್ತಾರೆ, ಯಾವ ಸಮಯಕ್ಕೆ ನಿದ್ದೆ ಮಾಡುತ್ತಾರೆ, ಎಷ್ಟು ಜನ ಇರುತ್ತಾರೆ, ಯಾವ ಯಾವ ವೇಷದಲ್ಲಿ ಇರುತ್ತಾರೆ, ಅವರ ಬಳಿ ಇರುವ ಶಸ್ತ್ರಾಸ್ತ್ರಗಳು ಯಾವವು ಎಂಬ ಎಲ್ಲಾ ವಿಷಯದ ಬಗ್ಗೆ ಅಧ್ಯಯನ ಮಾಡಿ ಕೊನೆಗೆ ತಗೆದುಕೊಂಡ ತಿರ್ಮಾನವೇ "ಸರ್ಜಿಕಲ್ ಸ್ಟ್ರೈಕ್". ಇದರ ಉದ್ದೇಶ, ಆ ಶತ್ರು ರಾಷ್ಟ್ರದ ದೇಶದೊಳಗೆ ನುಗ್ಗಿ, ಅವರು ಎಲ್ಲಿ ಅಡಗಿರುತ್ತಾರೆಯೋ ಅಲ್ಲೇ ಅವರಿಗೆ ತಿಳಿಯದ ಹಾಗೆ ಅವರನ್ನ ನಾಶ ಮಾಡುವುದು.

ಅದೇ ರೀತಿ ಇಡೀ ಭಾರತ ಮತ್ತು ಪಾಕಿಸ್ತಾನ ಸಿಹಿ ನಿದ್ದೆಯ ಸಮಯದಲ್ಲಿದ್ದಾಗ ಭಾರತೀಯ ಸೈನೀಕರು ಸಿಂಹದಂತೆ ಪಾಕಿಸ್ತಾನದೋಳಗೆ ನುಗ್ಗಿ ಅವರ ಟ್ಯಾಂಕರ್ಗಳನ್ನ ನಾಶಮಾಡಿ, ಅಡಗಿ ಕುಳಿತ ಎಲ್ಲರನ್ನೂ ಹತ್ಯೆ ಮಾಡಿದರು. ಆವಾಗಲೇ ನಮ್ಮ ಧೀರ ಸೈನಿಕರಿಗೆ ಪ್ರತಿಕಾರ ತೀರಿಸಿಕೊಂಡ ಸಂತೋಷ ಅವರ ಮೋಗದಲ್ಲಿ ಮನೆ ಮಾಡಿತ್ತು.

'ಸರ್ಜಿಕಲ್ ಸ್ಟ್ರೈಕ್ ನಿಜ, ಆದರೆ 56 ಇಂಚಿನ ಎದೆ ಇದರ ಲಾಭ ಪಡೆಯಬಾರದು!' 'ಸರ್ಜಿಕಲ್ ಸ್ಟ್ರೈಕ್ ನಿಜ, ಆದರೆ 56 ಇಂಚಿನ ಎದೆ ಇದರ ಲಾಭ ಪಡೆಯಬಾರದು!'

ಇನ್ನೊಂದು ವಿಚಿತ್ರ ವಿಷಯವೆಂದರೆ, ಪಾಕಿಸ್ತಾನದ ಮೇಲೆ ದಾಳಿಯಾದ ವಿಷಯ ಸ್ವಂತ ಪಾಕಿಸ್ತಾನಕ್ಕೆ ತಿಳಿದಿರಲಿಲ್ಲ. ಭಾರತೀಯರ ವಾರ್ತಾ ವಾಹಿನಿಗಳಲ್ಲಿ ನೋಡಿ ತಿಳಿದುಕೊಂಡು ದಿಗ್ಭ್ರಾಂತರಾಗಿದ್ದರು. ನಮ್ಮ ದೇಶದ ಜನ ನಿದ್ದೆಯಿಂದ ಎದ್ದಾಗ ಈ ಸುದ್ದಿಕೇಳಿ ಹಾಲು ಕುಡಿದಷ್ಟು ಸಂತೋಷಪಟ್ಟರು. ಸೈನ್ಯಕ್ಕೆ ಭಾರತೀಯರಿಂದ ಅಭಿನಂದನೆಯ ಮಾಹಾಪೂರವೇ ಹರಿದು ಬರುತ್ತಿತ್ತು. ಶತ್ರು ರಾಷ್ಟ್ರವನ್ನು ಬಗ್ಗು ಬಡಿದರೆಂಬ ಸುದ್ದಿ ದೇಶದಲ್ಲಿಯೇ ಸಂತಸದ ವಾತಾವರಣ ನಿರ್ಮಾಣ ಮಾಡಿತ್ತು.

English summary
Lecturer from Vijayapura Amit Kumar Biradar has remembered Surgical Strike and saluted the soldiers who were involved in killed the terrorists in their own den in PoK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X