ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಕಟನೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಿಂದ ಯಲ್ಲಮ್ಮದೇವಿ ಭಕ್ತರಿಗೆ ಸಿಹಿ ಸುದ್ದಿ, ಇಲ್ಲಿದೆ ವಿವರ

By Madhusudhan K.r
|
Google Oneindia Kannada News

ಡಿಸೆಂಬರ್‌, 18: ಅಥಣಿ ತಾಲೂಕಿನ ಕೊಕಟನೂರಿನಲ್ಲಿ ಡಿಸೆಂಬರ್ 18ರಿಂದ ಶ್ರೀ ಯಲ್ಲಮ್ಮದೇವಿ ಜಾತ್ರೆ ಆರಂಭವಾಗಿದೆ. ಡಿಸೆಂಬರ್ 24ರವರೆಗೂ ಶ್ರೀ ಯಲ್ಲಮ್ಮದೇವಿ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಯಲ್ಲಮ್ಮ ದೇವಿಯ ಜಾತ್ರೆಗೆ ಭಕ್ತರು ಆಗಮಿಸುತ್ತಲೇ ಇರುತ್ತಾರೆ. ಯಲ್ಲಮ್ಮನ ಆಶೀರ್ವಾದ ಪಡೆಯಲು ದೂರದ ಊರುಗಳಿಂದ ಭಕ್ತರು ಬರುತ್ತದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ವಿಶೇಷ ಬಸ್ ಸೌಕರ್ಯ ವ್ಯವಸ್ಥೆ ಕಲ್ಪಿಸಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ಹಲವಾರು ತಾಲೂಕುಗಳಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಲ್ಯಾಣ ಕರ್ನಾಟಕ ಸಾರಿಗೆಯಿಂದ ಸಿಹಿಸುದ್ದಿ

ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನ ಬಾಗೇವಾಡಿ ಘಟಕದ ಕೇಂದ್ರ ಬಸ್ ನಿಲ್ದಾಣಗಳಿಂದ ಕೊಕಟನೂರಿಗೆ ಬಸ್ ಕಾರ್ಯಾಚರಣೆ ನಡೆಸಲಿದೆ. ವಿಜಯಪುರ ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿಯೂ ಕೂಡ ಕೊಕಟನೂರು ಯಲ್ಲಮ್ಮದೇವಿಯ ಸಹಸ್ರಾರು ಭಕ್ತರಿದ್ದಾರೆ. ಜಾತ್ರೆಯ ಉತ್ಸವವನ್ನು ಕಣ್ತುಂಬಿಕೊಳ್ಳಲು ಯಲ್ಲಮ್ಮ ದೇವಿಯ ಭಕ್ತರು ನಾನಾ ಜಿಲ್ಲೆಗಳಿಂದಲೂ ಆಗಮಿಸುತ್ತಾರೆ. ಜಾತ್ರೆಗೆ ಆಗಮಿಸಲು ಬಸ್‌ಗಳ ಕೊರತೆ ಎದ್ದು ಕಾಣುತ್ತಿತ್ತು. ಆದ್ದರಿಂದ ಜಾತ್ರೆಗೆ ಆಗಮಿಸಲು ಭಕ್ತರು ಹೆಚ್ಚಾಗಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದರು. ಭಕ್ತರ ಪರದಾಟವನ್ನು ತಪ್ಪಿಸುವ ಉದ್ದೇಶದಿಂದ ಮತ್ತು ಭಕ್ತರ ಸುರಕ್ಷತೆ ದೃಷ್ಟಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಕೂಡ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ಸರ್ಕಾರಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಉತ್ತಮ ಸಾರಿಗೆ ಸೌಲಭ್ಯದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದೆ.

kokatanuru-special-bus-facility-for-yallammadevi-devotees-till-december-24th-here-see-details

KSRTC e bus; ಶೀಘ್ರದಲ್ಲೇ ಬೆಂಗಳೂರಿನಿಂದ ಆರು ಮಾರ್ಗಗಳಲ್ಲಿ ಸಂಚಾರ, ನಿರ್ವಾಹಕರ ವೆಚ್ಚದ ವಿವರKSRTC e bus; ಶೀಘ್ರದಲ್ಲೇ ಬೆಂಗಳೂರಿನಿಂದ ಆರು ಮಾರ್ಗಗಳಲ್ಲಿ ಸಂಚಾರ, ನಿರ್ವಾಹಕರ ವೆಚ್ಚದ ವಿವರ

ಧಾರ್ಮಿಕ ಸ್ಥಳಗಳಿಗೆ ಬಸ್‌ ಸೌಲಭ್ಯ

ಹಾಗೆಯೇ ಕೆಎಸ್‌ಆರ್‌ಟಿಸಿಯು ಡಿಸೆಂಬರ್ ಅಂತ್ಯದಲ್ಲಿ ವಿವಿಧ ಧಾರ್ಮಿಕ ಸ್ಥಳಗಳಿಗೆ ಬಸ್‌ಗಳನ್ನು ಬಿಡಲು ನಿರ್ಧರಿಸಿದೆ. ಬಸ್ ಸಂಚಾರದ ಸ್ಥಳ, ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಕೆಎಸ್ಆರ್‌ಟಿಸಿಯ ದಾವಣಗೆರೆ ವಿಭಾಗ ಈ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ದಾವಣಗೆರೆಯಿಂದ ಡಿಸೆಂಬರ್ 23ರಿಂದ ಧಾರ್ಮಿಕ ಸ್ಥಳಗಳಿಗೆ ಪ್ರತಿನಿತ್ಯ ವೇಗದೂತ ಸಾರಿಗೆ ಸೌಕರ್ಯವನ್ನು ಆರಂಭಿಸುತ್ತಿದೆ. ಪ್ರಯಾಣಿಕರು, ಭಕ್ತರ ಅನುಕೂಲಕ್ಕಾಗಿ ಪ್ರತಿನಿತ್ಯ ವೇಗದೂತ ಸಾರಿಗೆ ಸೌಕರ್ಯವನ್ನು ಆರಂಭಿಸಲಾಗಿದೆ. ಜನರು ಈ ಬಸ್‌ಗಳ ಉಪಯೋಗ ಪಡೆದುಕೊಳ್ಳಬೇಕು ಎನ್ನುವ ಮಾಹಿತಿಯನ್ನು ನೀಡಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರದ ಮಾರ್ಗಗಳು

ಪ್ರತಿದಿನ ಸಂಜೆ 6.55ಕ್ಕೆ ದಾವಣಗೆರೆಯಿಂದ ಹೊರಟು ಹರಿಹರ-ಶಿವಮೊಗ್ಗ-ಚಿಕ್ಕಮಗಳೂರು-ಧರ್ಮಸ್ಥಳ ಮಾರ್ಗವಾಗಿ ಬೆಳಗ್ಗೆ 4.30ಕ್ಕೆ ಕುಕ್ಕೆ ಸುಬ್ರಮಣ್ಯಕ್ಕೆ ವೇಗದೂತ ಬಸ್ ತಲುಪಲಿದೆ. ಬೆಳಗ್ಗೆ 11.30ಕ್ಕೆ ಕುಕ್ಕೆ ಸುಬ್ರಮಣ್ಯದಿಂದ ಹೊರಡುವ ಬಸ್ ಧರ್ಮಸ್ಥಳ-ಚಿಕ್ಕಮಗಳೂರು- ಶಿವಮೊಗ್ಗ-ಹರಿಹರ ಮಾರ್ಗವಾಗಿ ಸಂಜೆ 6.55 ಕ್ಕೆ ದಾವಣಗೆರೆಗೆ ತಲುಪಲಿದೆ. ಆಸಕ್ತ ಪ್ರಯಾಣಿಕರು ಆನ್‌ಲೈನ್‌ನ್ ಮೂಲಕವೂ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

kokatanuru-special-bus-facility-for-yallammadevi-devotees-till-december-24th-here-see-details

ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗ ದಸರಾ ಮತ್ತು ದೀಪಾವಳಿ ಸಮಯದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದು ಯಶಸ್ವಿಯಾದ ನಂತರ ಈಗ ವರ್ಷಾಂತ್ಯದಲ್ಲಿಯೂ ಪ್ಯಾಕೇಜ್ ಆರಂಭಿಸಲು ನಿರ್ಧಾರ ಮಾಡಿದೆ. ಗೋವಾ ಮತ್ತು ಕೇರಳಕ್ಕೆ ಕೆಎಸ್ಆರ್‌ಟಿಸಿ ಬಸ್‌ಗಳು ಈ ಪ್ಯಾಕೇಜ್‌ನಡಿ ಸಂಚಾರ ನಡೆಸಲಿವೆ. ಕ್ರಿಸ್‌ಮಸ್‌ ರಜೆ ಪ್ರಯುಕ್ತ ಎರಡು ದಿನಗಳ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ. ಇದರಲ್ಲಿ ವಾಸ್ತವ್ಯ, ಆಹಾರ ವ್ಯವಸ್ಥೆಗಳು ಸಹ ಸೇರಿವೆ. ಶುಕ್ರವಾರ ರಾತ್ರಿ ಹೊರಡುವ ಬಸ್‌ಗಳು ಶನಿವಾರ ಉತ್ತರ ಗೋವಾ, ಭಾನುವಾರ ದಕ್ಷಿಣ ಗೋವಾಗೆ ಸಂಚಾರ ನಡೆಸಿ ಮಂಗಳೂರಿಗೆ ವಾಪಸ್ ಆಗಲಿವೆ. ಡಿಸೆಂಬರ್ 20ರಂದು ಕೆಎಸ್ಆರ್‌ಟಿಸಿ ಈ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ ಎನ್ನುವ ಮಾಹಿತಿ ಹೊರಬಿದ್ದಿದೆ.

English summary
Special bus facility for Yallammadevi devotees till December 24th by Kalyana karnataka road transport corporation (KKRTC), know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X