ಗೋಪೂಜೆ ಸಲ್ಲಿಸಿ ಮತ ಹಾಕಿದ ಬಿಜೆಪಿ ಅಭ್ಯರ್ಥಿ ಯತ್ನಾಳ್
ವಿಜಯಪುರ, ಮೇ 12: ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಅವರು ಮತದಾನಕ್ಕೆ ತೆರಳುವ ಮುನ್ನ ಗೋಪೂಜೆ ಸಲ್ಲಿಸಿದರು.
ಬೆಳಿಗ್ಗೆ ಮತಚಲಾವಣೆಗಾಗಿ ತಮ್ಮ ಕ್ಷೇತ್ರದ ಬೂತ್‌ನತ್ತ ಹೊರಟ ಯತ್ನಾಳ ಅವರು ಮೊದಲು ಹಸುವೊಂದಕ್ಕೆ ಪೂಜೆ ಸಲ್ಲಿಸಿದರು. ಗೋವಿಗೆ ಆರತಿ ಎತ್ತಿ, ಬಾಳೆಹಣ್ಣು ತಿನ್ನಿಸಿ ನಮಿಸಿದರು. ಬಳಿಕ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
ಆಪರೇಷನ್ ಕಮಲವನ್ನು ಕಟುವಾಗಿ ಟೀಕಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿ ಆರು ವರ್ಷ ಪಕ್ಷದಿಂದ ಉಚ್ಚಾಟಿಸಿತ್ತು. ಬಳಿಕ ಅವರು ಜೆಡಿಎಸ್ ಸೇರಿಕೊಂಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ವಿಜಯಪುರ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಕ್ಬುಲ್ ಎಸ್ ಭಗವಾನ್ ಅವರ ಎದುರು ಸೋಲು ಅನುಭವಿಸಿದ್ದರು.

ಪ್ರತ್ಯೇಕ ಲಿಂಗಾಯತರ ಧರ್ಮದ ಹೋರಾಟ ಆರಂಭವಾದ ಬಳಿಕ ಈ ಭಾಗದಲ್ಲಿ ಪ್ರಮುಖ ಲಿಂಗಾಯತನ ನಾಯಕತ್ವದ ಕೊರತೆ ಎದುರಿಸಿದ್ದ ಬಿಜೆಪಿಗೆ ಯತ್ನಾಳ ಅವರ ಸೇರ್ಪಡೆ ಅಗತ್ಯವಾಗಿತ್ತು. ಯತ್ನಾಳ ಅವರೂ ಮರಳಿ ಬಿಜೆಪಿಗೆ ಬರಲು ಆಸಕ್ತಿ ತೋರಿದ್ದರು.












Click it and Unblock the Notifications