Babaleshwar Constituency: ಪ್ರಭಾವಿ ನಾಯಕ ಎಂಬಿ ಪಾಟೀಲ್‌ರಿಗೆ ಪೈಪೋಟಿ ನೀಡುವುದೇ ಬಿಜೆಪಿ? ವರದಿ, ವಿಶ್ಲೇಷಣೆ

ಈ ಬಾರಿ ವಿಜಯಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಇದೆ. ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ ಓದಿ.

ವಿಜಯಪುರ, ಫೆಬ್ರವರಿ 21: ನಾಡಿನ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಬಬಲೇಶ್ವರವೂ ಒಂದು. ಬಬಲೇಶ್ವರವು ವಿಜಯಪುರ ಜಿಲ್ಲೆಯ ವಿಧಾನಸಭೆ ಕ್ಷೇತ್ರವಾಗಿದೆ. ಇದು ಜಿಲ್ಲಾ ಕೇಂದ್ರವಾದ ಬಿಜಾಪುರ ನಗರದಿಂದ 22 ಕಿ.ಮೀ ದೂರದಲ್ಲಿದೆ. ಬಬಲೇಶ್ವರ ಕ್ಷೇತ್ರದ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದೆ.

ಮುಖ್ಯವಾಗಿ ಕಬ್ಬು, ದ್ರಾಕ್ಷಿ, ದಾಳಿಂಬೆ, ಜೋಳ ಮತ್ತು ಜೋಳ, ನಿಂಬೆಹಣ್ಣು, ಈರುಳ್ಳಿ ಮತ್ತು ಅರಿಶಿನವನ್ನು ಇಲ್ಲಿ ಹೆಚ್ಚು ಬೆಳೆಯುತ್ತಾರೆ. ನೀರಿನ ಕಾಲುವೆಗಳು ಮತ್ತು ಬಾವಿಗಳ ಮೂಲಕ ನೀರಾವರಿ ವ್ಯವಸ್ಥೆ ಬಬಲೇಶ್ವರ ಕ್ಷೇತ್ರದಲ್ಲಿ ಉತ್ತಮವಾಗಿದೆ.

ಕ್ಷೇತ್ರವು ಐತಿಹಾಸಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಪಡೆದಿದೆ. ಇಲ್ಲಿ ಹನುಮಾನ್ ದೇವಸ್ಥಾನ, ನಾಡದೇವಿ ದೇವಸ್ಥಾನ, ಮಹಾಲಕ್ಷ್ಮಿ ದೇವಸ್ಥಾನ ಪಾಂಡುರಂಗ ದೇವಸ್ಥಾನ, ಗುರುಪಾದೇಶ್ವರ ಮಠಗಳು ಪ್ರಸಿದ್ದವಾಗಿವೆ. ಬಾದಾಮಿಯ ಚಾಲುಕ್ಯರು ನಿರ್ಮಿಸಿದ ಹನ್ನೆರಡನೆಯ ಶತಮಾನಕ್ಕೆ ಸೇರಿದ ಎರಡು ಶೈವ ದೇವಾಲಯಗಳಿವೆ. ಸಿದ್ದರಾಮೇಶ್ವರ ಮತ್ತು ಅಂಬಲಿಸಿದ್ದೇಶ್ವರ ದೇವಾಲಯಗಳನ್ನು ವಿಜಯಪುರದ ಆದಿಲಶಾಹಿಗಳು ನಿರ್ಮಿಸಿದ್ದಾರೆ.

 ಬಬಲೇಶ್ವರ ಕ್ಷೇತ್ರದ ರಾಜಕೀಯ ಚರಿತ್ರೆ

ಬಬಲೇಶ್ವರ ಕ್ಷೇತ್ರದ ರಾಜಕೀಯ ಚರಿತ್ರೆ

2008ರಲ್ಲಿ ಬಬಲೇಶ್ವರ ಕ್ಷೇತ್ರವು ರೂಪಗೊಂಡಿದೆ. 2008, 2013 ಹಾಗೂ 2018 ರಲ್ಲಿ ಕಾಂಗ್ರೆಸ್‌ನ ನಾಯಕ ಎಂಬಿ ಪಾಟೀಲ್‌ ಅವರು ಜಯಗಳಿಸಿದ್ದಾರೆ. ಈ ಕ್ಷೇತ್ರವು ಮೊದಲು ತಿಕೋಟಾ ಕ್ಷೇತ್ರದಲ್ಲಿ ಬರುತ್ತಿತ್ತು. ತಿಕೋಟಾ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಬಿ.ಎಂ.ಪಾಟೀಲ್‌ ಆಯ್ಕೆಯಾಗಿದ್ದರು. ಬಿಎಂ ಪಾಟೀಲ್‌ ಅವರು ಸಚಿವರೂ ಆಗಿದ್ದರು. ಆ ನಂತರ ಅವರ ಪುತ್ರ ಎಂಬಿ ಪಾಟೀಲರು ನಾಲ್ಕು ಬಾರಿ ತಿಕೋಟ ಕ್ಷೇತ್ರದಿಂದ ಜಯಗಳಿಸಿದ್ದಾರೆ. 2008 ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಆದ ಬಳಿಕವೂ ಎಂಬಿ ಪಾಟೀಲರೇ ಇಲ್ಲಿ ಜಯಗಳಿಸುತ್ತಾ ಬಂದಿದ್ದಾರೆ. ಎಂಬಿ ಪಾಟೀಲರು ಗೃಹ ಮಂತ್ರಿ, ಜಲಸಂಪನ್ಮೂಲ ಸಚಿವರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ. ಬಸವನಬಾಗೇವಾಡಿ ತಾಲ್ಲೂಕಿನ ಕೆಲ ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಸೇರುತ್ತವೆ.

 2018ರಲ್ಲಿ ಎಂಬಿ ಪಾಟೀಲರಿಗೆ ಟಕ್ಕರ್‌ ನೀಡಿದ್ದ ಬಿಜೆಪಿ

2018ರಲ್ಲಿ ಎಂಬಿ ಪಾಟೀಲರಿಗೆ ಟಕ್ಕರ್‌ ನೀಡಿದ್ದ ಬಿಜೆಪಿ

ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ಎಂಬಿ ಪಾಟೀಲ್‌ ಅವರು ಮೂರು ಬಾರಿ ಜಯಗಳಿಸಿದ್ದಾರೆ. ಆದರೆ, ಕಳೆದ ಬಾರಿಯ ಚುನಾವಣೆಯಲ್ಲಿ ಎಂಬಿ ಪಾಟೀಲ್‌ ಅವರಿಗೆ ಬಿಜೆಪಿ ಟಕ್ಕರ್‌ ನೀಡಿತ್ತು. ಮೂರು ಬಾರಿಯೂ ಎಂಬಿ ಪಾಟೀಲ್‌ ವಿರುದ್ಧ ಬಿಜೆಪಿಯ ವಿಜುಗೌಡ ಪಾಟೀಲ್‌ ಅವರು ಸೋಲು ಅನುಭವಿಸಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಎಂಬಿ ಪಾಟೀಲ್‌ ಅವರಿಗೆ 98339 ಮತಗಳು ಬಂದಿತ್ತು. ಅವರ ಎದುರಾಳಿ ಆಗಿದ್ದ, ವಿಜುಗೌಡ ಪಾಟೀಲ್‌ ಅವರು 68624 ಮತಗಳನ್ನು ಗಳಿಸಿದ್ದರು.

 ಎಂಬಿ ಪಾಟೀಲ್‌ ಕಾಂಗ್ರೆಸ್‌ನ ಪ್ರಭಾವಿ ನಾಯಕ

ಎಂಬಿ ಪಾಟೀಲ್‌ ಕಾಂಗ್ರೆಸ್‌ನ ಪ್ರಭಾವಿ ನಾಯಕ

ಎಂಬಿ ಪಾಟೀಲ್‌ ಅವರು ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದಾರೆ. ಅವರು ಪ್ರಸ್ತುತ ರಾಜ್ಯ ಕಾಂಗ್ರೆಸ್‌ನ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದಾರೆ. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಂಬಿ ಪಾಟೀಲ್‌ ಅವರು ಜಲಸಂಪನ್ಮೂಲ ಹಾಗೂ ಗೃಹ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಒಂದು ಬಾರಿ ಲೋಕಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು BLDE ಸಂಘದ ಅಧ್ಯಕ್ಷರು. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಎಂ ಬಿ ಪಾಟೀಲ್ ಪ್ರತಿಷ್ಠಾನದ ಮೂಲಕ ನಿರ್ಗತಿಕ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸುವುದು, ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸಲು ಸಹಾಯ ಮಾಡುವುದು, ವಿಜಯಪುರ ಜಿಲ್ಲೆಯಾದ್ಯಂತ ತೋಟಗಾರಿಕೆ ಅಭಿಯಾನಗಳನ್ನು ಆಯೋಜಿಸುವುದು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 ಬಬಲೇಶ್ವರ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳು

ಬಬಲೇಶ್ವರ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳು

ಪ್ರಭಾವಶಾಲಿ ನಾಯಕರಾಗಿ ಬೆಳೆದಿರುವ ಎಂಬಿ ಪಾಟೀಲ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ಈ ಬಾರಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಎಂಬಿ ಪಾಟೀಲ್‌ ವಿರುದ್ಧ ಮೂರು ಬಾರಿ ಸ್ಪರ್ಧಿಸಿ ಸೋತಿರುವ ವಿಜುಗೌಡ ಪಾಟೀಲ್‌ ಅವರಿಗೆ ಈ ಚುನಾವಣೆಯಲ್ಲಿ ಟಿಕೆಟ್‌ ಸಿಗುವುದು ಕಷ್ಟವಾಗಿದೆ. ಬಿಜೆಪಿಯ ಟಿಕೆಟ್‌ಗಾಗಿ ವಿಜಯಪುರದ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಉಮೇಶ ಕೋಳಕೂರ ಯತ್ನ ನಡೆಸಿದ್ದಾರೆ. ಕೋಳಕೂರ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರಿಂದ ಒಪ್ಪಿಗೆ ದೊರೆತಿದೆ ಎಂದು ವರದಿಯಾಗಿದೆ.

ಕ್ಷೇತ್ರದ ಮತದಾರ ವಿವರ (2018ರಲ್ಲಿ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)
ಪುರುಷರು: 1,06,256
ಮಹಿಳೆಯರು - 1,02,647
ಒಟ್ಟು: 2,08,903

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+