ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣಾ ನದಿ ನೀರು ಹಂಚಿಕೆ; ಸುಪ್ರೀಂ ಮೊರೆ ಹೋದ ಕರ್ನಾಟಕ

|
Google Oneindia Kannada News

ವಿಜಯಪುರ, ನವೆಂಬರ್ 09; ಕರ್ನಾಟಕ ಸರ್ಕಾರ ಕೃಷ್ಣಾ ನದಿಯ 75 ಟಿಎಂಸಿ ಅಡಿ ನೀರನ್ನು 2022ರ ಜೂನ್‌ನಿಂದ ಬಳಕೆ ಮಾಡಿಕೊಳ್ಳಲು ಸುಪ್ರೀಂಕೋರ್ಟ್ ಅನುಮತಿ ಕೇಳಿದೆ. 5.94 ಲಕ್ಷ ಹೆಕ್ಟೇರ್ ಪ್ರದೇಶದ ನೀರಾವರಿಗಾಗಿ ಈ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ತಾನು ಇದುವರೆಗೂ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕಾಗಿ 13 ಸಾವಿರ ಕೋಟಿಗೂ ಅಧಿಕ ವೆಚ್ಚ ಮಾಡಲಾಗಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿತು.

 ಕೃಷ್ಣಾ ನದಿ ಮಾದರಿಯಲ್ಲೇ ಭೀಮಾ ನದಿ ನೀರು ನಿರ್ವಹಣಾ ಸಮಿತಿ ರಚನೆ: ಶಶಿಕಲಾ ಜೊಲ್ಲೆ ಕೃಷ್ಣಾ ನದಿ ಮಾದರಿಯಲ್ಲೇ ಭೀಮಾ ನದಿ ನೀರು ನಿರ್ವಹಣಾ ಸಮಿತಿ ರಚನೆ: ಶಶಿಕಲಾ ಜೊಲ್ಲೆ

ಯೋಜನೆ ನೀರನ್ನು ಉಪಯೋಗಿಸಿಕೊಳ್ಳಲು ಎಲ್ಲಾ ಮೂಲ ಸೌಕರ್ಯಗಳು ಸಿದ್ಧವಾಗಿವೆ. ರಾಜ್ಯ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲು 75 ಟಿಎಂಸಿ ಅಡಿ ನೀರನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಜೂನ್ 2022ರ ಬಳಿಕ ನೀರು ಬಳಕೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಲಾಯಿತು.

ಕೃಷ್ಣಾ ನದಿ ನೀರಿನ ಮರು ಹಂಚಿಕೆಗೆ ತೆಲಂಗಾಣದಿಂದ ಬೇಡಿಕೆ ಕೃಷ್ಣಾ ನದಿ ನೀರಿನ ಮರು ಹಂಚಿಕೆಗೆ ತೆಲಂಗಾಣದಿಂದ ಬೇಡಿಕೆ

Karnataka Approaches SC To Utilise 75 TMC Feet Krishna River Water

75 ಟಿಎಂಸಿ ಅಡಿ ನೀರನ್ನು ಬಳಕೆ ಮಾಡಿಕೊಂಡು ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕೃಷಿ ಭೂಮಿಗೆ ನೀರು ಹರಿಸಲಾಗುತ್ತದೆ ಎಂದು ಕರ್ನಾಟಕ ಹೇಳಿದೆ. ಪ್ರಸ್ತುತ 75 ಟಿಎಂಸಿ ಅಡಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕೊಯ್ನಾ ಜಲಾನಯನ ಪ್ರದೇಶದಲ್ಲಿ ಲಘು ಭೂಕಂಪ; ಕೃಷ್ಣಾ ನದಿ ತೀರದಲ್ಲಿ ಆತಂಕಕೊಯ್ನಾ ಜಲಾನಯನ ಪ್ರದೇಶದಲ್ಲಿ ಲಘು ಭೂಕಂಪ; ಕೃಷ್ಣಾ ನದಿ ತೀರದಲ್ಲಿ ಆತಂಕ

ಕೃಷ್ಣಾ ನದಿ ಪಾತ್ರದ ರೈತರು ಸರ್ಕಾರದ ಮೇಲೆ ಜಮೀನುಗಳಿಗೆ ನೀರು ಹರಿಸಬೇಕು ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಅಫಿಡೆವಿಟ್‌ನಲ್ಲಿ ಹೇಳಿದೆ. ಅರ್ಜಿಯ ಮುಂದಿನ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನವೆಂಬರ್ 29ರಂದು ನಡೆಯಲಿದೆ.

ಕೃಷ್ಣಾ ನದಿ ನೀರು ಹಂಚಿಕೆ; ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ಪೀಠ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಹಿರಿಯ ವಕೀಲರಾದ ಶ್ಯಾಂ ದಿವಾನ್ ಮತ್ತು ಮೋಹನ್ ಕಾತರಕಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯು ನದಿ ಪಾತ್ರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಿಗೆ ಕೃಷ್ಣಾ ನದಿ ನೀರನ್ನು ಹಂಚಿಕೆ ಮಾಡಿ ತೀರ್ಪು ನೀಡಿತ್ತು.

ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ ವಿತರಣೆಗೆ ಲಭ್ಯವಿರುವ ಒಟ್ಟು 2060 ಟಿಎಂಸಿ ವಿಧಾನ 'ಎ' ಯ ಅಡಿಯಲ್ಲಿ ಮೂರು ರಾಜ್ಯಗಳಿಗೆ ನದಿ ನೀರು ಹಂಚಿದೆ ಮಾಡಿದೆ. ಅದರ ಅನ್ವಯ ಮಹಾರಾಷ್ಟ್ರಕ್ಕೆ 560 ಟಿಎಂಸಿ, ಕರ್ನಾಟಕಕ್ಕೆ 700 ಟಿಎಂಸಿ, ಆಂಧ್ರ ಪ್ರದೇಶಕ್ಕೆ 800 ಟಿಎಂಸಿ ಹಂಚಿಕೆಯಾಗಿದೆ.

ಪುನರುತ್ಪಾದನೆ ಸೇರಿದಂತೆ, ಕರ್ನಾಟಕದ ಉಪಯೋಗಕ್ಕೆ ಲಭ್ಯವಿರುವ ಒಟ್ಟು ನೀರು 734 ಟಿಎಂಸಿ. ಇದರಲ್ಲಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ 173 ಟಿಎಂಸಿ ನೀರನ್ನು ಮಂಜೂರು ಮಾಡಲಾಗಿದೆ.

ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಕೃಷ್ಣಾ ನೀರು ಹಂಚಿಕೆ ವಿಧಾನದ ಆದೇಶವನ್ನು ದಿನಾಂಕ 30/12/2010 ರಂದು ಜಾರಿಗೆ ತಂದಿತು. ಹೆಚ್ಚುವರಿ ಹರಿವುಗಳಿಗಾಗಿ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಮಾಡಿದ ನೀರಿನ ಹಂಚಿಕೆಯು ವಿವರ ಹೀಗಿದೆ.

Recommended Video

Cricket ಪ್ರೇಮಿಗಳ ಮನ ಗೆದ್ದ Rishab Pant ! | Oneindia Kannada

ಮಹಾರಾಷ್ಟ್ರ 81 ಟಿಎಂಸಿ, ಕರ್ನಾಟಕ 177 ಟಿಎಂಸಿ, ಆಂಧ್ರ ಪ್ರದೇಶ 190 ಟಿಎಂಸಿ. ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ 177 ಟಿಎಂಸಿಯಲ್ಲಿ 130.90 ಟಿಎಂಸಿಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಪಾಲು ಆಗಿರುತ್ತದೆ.

English summary
Karnataka government moved supreme court to allow it to utilise 75 tmcft of Krishna river water from June 2022. State will irrigate around 5.94 lakh hectares of land by this water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X