ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ದೂರು

Posted By: ವಿಜಯಪುರ ಪ್ರತಿನಿಧಿ
Subscribe to Oneindia Kannada

ವಿಜಯಪುರ, ಡಿಸೆಂಬರ್ 19 : ಅಕ್ರಮ ಕಟ್ಟಡ ಕಟ್ಟುವವರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ವಿಜಯಪುರ ನಿವಾಸಿ ದೂರು ದಾಖಲಿಸಿದ್ದಾರೆ.

ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಪಾಲಿಕೆ ಪ್ರಥಮ ದರ್ಜೆ ಸಹಾಯಕ ದತ್ತಾತ್ರೇಯ, ಪುರಾತತ್ವ ಇಲಾಖೆ ಅಧಿಕಾರಿಗಳಾದ ಮೌನೇಶ ಕುರುವತ್ತಿ ಹಾಗೂ ರಾಕೇಶ ವಿರುದ್ಧ ವಿಜಯಪುರ ನಿವಾಸಿ ಶಮಶುದ್ದಿನ್ ಸೈಯದ್ ಅವರು ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Illegal buildings: complaint field against officials

ವಿಜಯಪುರ 3 ನೇ ವಾರ್ಡ್ ನಲ್ಲಿ ಸುಲೋಚನ ದರಬಾರ, ವಿಕಾಸ ದರಬಾರ ಹಾಗೂ ವಿಲಾಸ ದರಬಾರ ಅವರಿಂದ ಅಕ್ರಮ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಲ್ಲಿನ ಸ್ಮಾರಕವಾದ ಕಮ್ಮರಕಿ ಗುಂಬಜ್ ವ್ಯಪ್ತಿಯಲ್ಲಿ ಅನುಮತಿ ಪಡೆಯದೆ ಬೃಹತ್ ಕಟ್ಟಡ ನಿರ್ಮಿಸುತ್ತಿದ್ದಾರೆ.

ಐತಿಹಾಸಿಕ ಸ್ಮಾರಕಗಳಿರುವ ನಿಷೇಧಿತ ಪ್ರದೇಶದಲ್ಲಿ ಅವುಗಳಿಗೆ ಧಕ್ಕೆಯುಂಟು ಮಾಡಿ ಅತಿಕ್ರಮಣ ಕಟ್ಟಡ ನಿರ್ಮಾಣ ನಿರ್ಮಾಣ ಮಾಡಿದ್ದಾರೆ. ಅತಿಕ್ರಮಣ ಮಾಡುತ್ತಿರುವುದು ಗೊತ್ತಿದ್ದರೂ ಕ್ರಮ ಕೈಗೊಳ್ಳದೆ ಆರೋಪಿಗಳಿಗೆ ಸಹಕರಿಸಿದ ಆಯುಕ್ತ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಅಧಿಕಾರಿಗಳು ಹಾಗೂ ಅತಿಕ್ರಮಣ ಕಟ್ಟಡದ ಮಾಲಿಕರ ವಿರುದ್ಧ ಸರ್ಕಾರಕ್ಕೆ ವಂಚನೆ ಹಾಗೂ.ಸ್ಮಾರಕಕ್ಕೆ ಧಕ್ಕೆ ಮಾಡಿದ ಹಿನ್ನೆಲೆ ಐಪಿಸಿ ಸೆಕ್ಷನ್ 420, 409, 434, 447, 149, 217 ಅಡಿಯಲ್ಲಿ ದೂರು ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Citizen of Vijayapura district filed complaint against Vijayapura muncipal corporation officials who allegedly failed to take action against illegal buildings in the city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ