ಉತ್ತರ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲವಿದೆ: ಎಎಸ್ ಪಾಟೀಲ
ವಿಜಯಪುರ, ಡಿಸೆಂಬರ್ 26: ಮಹಾದಾಯಿ ಹೋರಾಟಗಾರರು ಬುಧವಾರ ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ವಿಜಯಪುರದ ಮುದ್ದೇ ಬಿಹಾಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುದ್ದೇ ಬೊಹಾಳ ತಾಲೂಕು, ದೇವಹಿಪ್ಪರಗಿ, ತಾಳಿಕೋಟೆ ಮತಕ್ಷೇತ್ರದಲ್ಲಿ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯಗೆ ಮಾನ, ಮರ್ಯಾದೆ ಇದ್ದರೆ ರಾಜಕೀಯ ಬಿಟ್ಟು ಕೂಡಲೆ ಮಹದಾಯಿ ಸಮಸ್ಯೆ ಬಗೆಹರಿಸಲಿ.

ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಗೋವಾದಲ್ಲಿ ಇಬ್ಬರು ಎಂಪಿ ಇದ್ದು ಇಷ್ಟೆಲ್ಲ ಮಾಡುತ್ತಿದ್ದಾರೆ. ನಮ್ಮಲ್ಲಿ 18 ಜನ ಎಂಪಿ ಇದ್ದರೂ ಮಹಾದಾಯಿ ಸಮಸ್ಯೆ ಬಗೆಹರಿಸಲು ಆಗದಿರುವುದು ನಾಚಿಗೇಡು ಎಂದು ಹೇಳಿದರು.
ಮಹದಾಯಿ ವಿವಾದ ಇತ್ಯರ್ಥಗೊಳಿಸಲು ವಿಫಲವಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಡಿ.27ರಂದು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಮಲಪ್ರಭಾ, ಮಹಾದಾಯಿ, ಕಳಸಾ-ಬಂಡೂರಿ, ರೈತ ಹೋರಾಟ ಸಮಿತಿ ಬಂದ್ ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದೆ. ಡಿ.27ರ ಬುಧವಾರ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ.












Click it and Unblock the Notifications