ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವುದು ಬಿಜೆಪಿಗೆ ಇಷ್ಟವಿಲ್ಲ: ರಾಮಲಿಂಗಾರೆಡ್ಡಿ

ವಿಜಯಪುರ, ನವೆಂಬರ್ 13: "ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ಸಂಚು ರೂಪಿಸಿದ್ದು, ಆದ್ದರಿಂದ ವಿಧಾನ ಸಭಾ ಚುನಾವಣೆ ರಾಜ್ಯದಲ್ಲಿ ಯಾವಾಗ ಬೇಕಾದರೂ ನಡೆಸಬಹುದು, ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಸಂದರ್ಭದಲ್ಲಿ ಸಿದ್ಧರಾಗಿರಬೇಕೆಂದು" ರೆಡ್ಡಿ ಕರೆ ಕೊಟ್ಟರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಲು ಕೇಂದ್ರ ನಾಯಕರು ಬಯಸಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು. ಮಂಗಳವಾರ ವಿಜಯಪುರದ ಡಿಸಿಸಿ ಹೊಸ ಅಧ್ಯಕ್ಷರ ಸ್ಥಾಪನಾ ಸಮಾರಂಭ ಮತ್ತು ಕೇಂದ್ರ ಆರ್ಥಿಕ ನೀತಿಗಳ ವಿರುದ್ಧದ ಜಾಗೃತಿ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು.

ಏತನ್ಮಧ್ಯೆ, "ಬಿಜೆಪಿ ಪಕ್ಷಾಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಅದಕ್ಕೆ ನೈತಿಕತೆ ಇಲ್ಲ. ಸಚಿವ ಸ್ಥಾನದ ಭರವಸೆ ನೀಡಿದ್ದ ೧೫ ಅನರ್ಹ ಶಾಸಕರ ಭವಿಷ್ಯವೇನು" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿಗೆ ತಿವಿದರು.

Bharateeya Janata Party wants to unseat BS Yediyurappa: Ramalinga Reddy

ಬಿಜೆಪಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲು ಹೆಚ್ಚಿನ ಹಣ ಖರ್ಚು ಮಾಡುವಲ್ಲಿ ಮತ್ತು ಶಾಸಕರನ್ನು ಖರೀದಿಸುವಲ್ಲಿ ನಿರತವಾಗಿದೆ. ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಗುಡುಗಿದರು. ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿಗಳನ್ನು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಆಯ್ಕೆ ಮಾಡಲಾಗುವುದು ಎಂದರು.

ಯಾವಾಗ ಬೇಕಾದರೂ ರಾಜ್ಯದಲ್ಲಿ ಚುನಾವಣೆ
"ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, ಬಿಜೆಪಿಯಲ್ಲಿ ಒಳಜಗಳ ಪ್ರಾರಂಭವಾಗಿದೆ. ಆದ್ದರಿಂದ ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದೆಂದು" ರಾಮಲಿಂಗಾರೆಡ್ಡಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+