ಸಿದ್ದಗಂಗಾ ಸ್ವಾಮೀಜಿ ಹೆಸರಿನಲ್ಲಿ ನಕಲಿ ಭಿತ್ತಿಪತ್ರ ಹರಿಬಿಟ್ಟ ದುಷ್ಕರ್ಮಿಗಳು
ವಿಜಯಪುರ, ಡಿಸೆಂಬರ್ 09 : ನಗರದಲ್ಲಿ ಡಿಸೆಂಬರ್ 10 ರಂದು ನಡೆಯಲಿರುವ ಲಿಂಗಾಯತ ಪ್ರತ್ಯೇಕತೆ ಜಾಗೃತಿ ಸಮಾವೇಶಕ್ಕೆ ತಡೆಯೊಡ್ಡಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ.
ಅಷ್ಟೇ ಅಲ್ಲದೆ ಸಿದ್ದಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರನ್ನು ದುರ್ಬಳಕೆ ಮಾಡಿದ್ದಾರೆ. ಸ್ವಾಮೀಜಿಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಒಂದೇ, ಪ್ರತ್ಯೇಕ ಲಿಂಗಾಯತ ಧರ್ಮ ಸಮಾವೇಶ ಬಹಿಷ್ಕರಿಸಿ ಎಂಬ ತಪ್ಪು ಸಂದೇಶವಿರುವ ಭಿತ್ತಿಪತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಭಿತ್ತಿಪತ್ರದಲ್ಲಿ ಸಮಸ್ತ ವೀರಶೈವ ಲಿಂಗಾಯತ ಪ್ರಕಟಣೆ ನಗರ, ಪಟ್ಟಣದಲ್ಲಿ ವಾಸಿಸುವ ವಿದ್ಯಾವಂತರು ವೀರಶೈವ ಪದ ಮತ್ತು ಹಳ್ಳಿಗಳಲ್ಲಿ ವಾಸಿಸುವವರು ಲಿಂಗಾಯತ ಪದ ಬಳಸುತ್ತಾರೆ. ಇವುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಎರಡೂ ಒಂದೇ, ವೀರಶೈವ ಲಿಂಗಾಯತಕ್ಕೆ ಅರ್ಥ ಕಲ್ಪಿಸುವ ಬೇರೆ ಬೇರೆ ಶಬ್ದಗಳಿಲ್ಲ. ವೀರಶೈವ ಲಿಂಗಾಯತ ಸಮಾಜವನ್ನು ಇಬ್ಭಾಗ ಮಾಡುವ ಹುನ್ನಾರ ಸರಿಯಲ್ಲ ಎಂಬ ಸಂದೇಶವಿರುವ ಭಿತ್ತಿಪತ್ರ ವಾಟ್ಸ್ ಆಪ್, ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದೆ.












Click it and Unblock the Notifications