KSRTC Electric Bus: ಗೊಮ್ಮಟನಗರಿ ಬಿಜಾಪುರ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ದೊಡ್ಡ ಗಿಫ್ಟ್
KRCTC Electric Bus: ಈಗಾಗಲೇ ರಾಜ್ಯದಲ್ಲಿ ಎಲೆಕ್ಟ್ರಿಕ್ ಮಾದರಿಯ ಸಾರಿಗೆ ಬಸ್‌ಗಳು ಸಂಚಾರ ಮಾಡುತ್ತಿವೆ. ಆದರೆ, ಕೆಲವೊಂದು ಜಿಲ್ಲೆಗಳಿಗೆ ಮಾತ್ರ ಇವುಗಳ ಸೇವೆ ಇವೆ. ಇದೀಗ ಗೊಮ್ಮಟ ನಗರಿ ಅಂತಲೇ ಹೆಸರುವಾಸಿ ಆಗಿರುವ ವಿಜಯಪುರ ವಿಭಾಗಕ್ಕೆ ಎಲೆಕ್ಟ್ರಿಕ್ ಬಸ್‌ಗಳು ಮಂಜೂರು ಆಗಿವೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
ಕಾಲ ಬದಲಾದಂತೆ ಜನ ಚೇಂಜ್ ಕೇಳ್ತಾರೆ. ಅದರಂತೆಯೇ ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದ್ದ, ಗ್ರಾಹಕರ ಇಷ್ಟಕ್ಕೆ ತಕ್ಕಂತೆ ಹೊಸ ಹೊಸ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇದರಲ್ಲೂ ಇದೀಗ ಎಲೆಕ್ಟ್ರಿಕ್ ವಾಹನಗಳು ಸಗ ಸದ್ದು ಮಾಡುತ್ತಿದ್ದು, ಈ ಮಾದರಿಯ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಸಹ ಇವೆ.

ಆದರೆ, ಕೆಲವೊಂದು ಜಿಲ್ಲೆಗಳಿಗೆ ಮಾತ್ರ ಎಲೆಕ್ಟ್ರಿಕ್ ಬಸ್‌ಗಳ ಸೇವೆ ಇದೆ. ಇದೀಹ ವಿಜಯಪುರಕ್ಕೂ ಈ ಮಾದರಿಯ ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಇ-ಬಸ್‌ನಡಿ ಕಲ್ಯಾಣ ಕರ್ನಾಟಕದ ವಿಜಯಪುರ ವಿಭಾಗಕ್ಕೆ 50 ಎಲೆಕ್ಟ್ರಿಕ್ ಬಸ್‌ಗಳು ಮಂಜೂರು ಆಗಿವೆ.
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಅಳವಡಿಕೆ ಹೆಚ್ಚಳ ಮಾಡುವುದು ಮತ್ತು ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಪರಿಸರ ಮಾಲಿನ್ಯ ತಗ್ಗಿಸುವುದು, ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂ ಇ-ಡ್ರೈವ್ ಯೋಜನೆ ಜಾರಿಗೊಳಿಸಿದೆ.
ಎಲ್ಲೆಲ್ಲಿ ಸಂಚಾರ?: ಈ ಎಲೆಕ್ಟ್ರಿಕ್ ಬಸ್‌ಗಳು ನಗರ ಪ್ರದೇಶದಲ್ಲಿ ಮಾತ್ರ ಸಂಚಾರ ಮಾಡಲಿವೆ. ಕೇಂದ್ರ ಬಸ್ ನಿಲ್ದಾಣ, ಗೋಲಗುಮ್ಮಟ, ತೊರವಿ, ಜಿಲ್ಲಾಸ್ಪತ್ರೆ, ವಿಮಾನ ನಿಲ್ದಾಣ ಸೇರಿ ಪ್ರಮುಖ ರಸ್ತೆಗಳಲ್ಲಿ ಮಾತ್ರ ಸಂಚಾರ ಮಾಡಲಿವೆ. ಆದರೆ, ನಗರದ ಸಣ್ಣಪುಟ್ಟ ರಸ್ತೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಿಗೆ ಈ ಬಸ್‌ಗಳ ಎಂಟ್ರಿ ಇರುವುದಿಲ್ಲ ಎಂದು ತಿಳಿದುಬಂದಿದೆ.
ಕೇಂದ್ರ ಸರಕಾರವೇ ಟೆಂಡರ್ ಪ್ರಕ್ರಿಯೆ ಮಾಡಲಿದ್ದು, ಟೆಂಡರ್‌ನಲ್ಲಿ ಬಸ್‌ಗಳ ಸೇವೆ ನೀಡುವುದು, ಡ್ರೈವರ್ ನೀಡುವ ಒಪ್ಪಂದವೂ ಇರಲಿದೆ. ಈಗಾಗಲೇ ನಗರದಲ್ಲಿ ಇರುವ ಡಿಪೋದಲ್ಲಿಯೇ ಎಲೆಕ್ಟ್ರಿಕ್ ಬಸ್‌ಗಳಿಗೆ ಬೇಕಾದ ಡಿಪೋ ನಿರ್ಮಾಣ ಮಾಡಲಾಗುತ್ತದೆ. ಗುತ್ತಿಗೆ ಪಡೆಯುವ ಕಂಪನಿಯೇ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪನೆ ಮಾಡಲಿದೆ. ಜೊತೆಗೆ ಬಸ್‌ಗಳಿಗೆ ಚಾಲಕನನ್ನು ನೀಡಲಿದ್ದು, ಕೆಕೆಆರ್‌ಟಿಸಿ ಕಂಡಕ್ಟರ್‌ಗಳನ್ನು ನೀಡಲಿದೆ.
ಪ್ರತಿ ಕಿಲೋ ಮೀಟರ್‌ಗೆ ತಗಲುವ ವೆಚ್ಚ ಹಾಗೂ ಗಳಿಕೆಯನ್ನು ಆಧರಿಸಿ ಕೇಂದ್ರ ಸರ್ಕಾರ ಪ್ರತಿ ಬಸ್‌ಗೆ ಸಹಾಯಧನ ಒದಗಿಸಲಿದೆ. ಬಸ್ ಸಂಚಾರದಿಂದ ಬರುವ ಹಣವನ್ನು ಕೆಕೆಆರ್‌ಟಿಸಿಯೇ ಪಡೆದು ಪ್ರತಿ ಕಿಲೋ ಮೀಟರ್‌ಗೆ ಇಂತಿಷ್ಟು ಎಂದು ಬಾಡಿಗೆ ರೂಪದಲ್ಲಿ ಕೇಂದ್ರ ಸರಕಾರಕ್ಕೆ ನೀಡಲಿದೆ ಎಂದು ತಿಳಿಸಿದ್ದಾರೆ ಅಂತಾ ವರದಿಯಾಗಿದೆ. ಹೀಗೆ ಕೇಂದ್ರ ಸರ್ಕಾರ ರಾಜ್ಯದ ಗೊಮ್ಮಟ ನಗರಿ ವಿಜಯಪುರಕ್ಕೆ ಎಲೆಕ್ಟ್ರಿಕ್ ಬಸ್ ಮುಂಜೂರು ಮಾಡುವ ಮೂಲಕ ಜಿಲ್ಲೆಯ ಸಾರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿ ಮಾಡಲು ಹೊರಟಿದೆ ಅಂದ್ರೆ ತಪ್ಪಾಗಲಾರದು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಎಲೆಕ್ಟ್ರಿಟ್ ಬಸ್‌ಗಳು ಸಂಚಾರ ಮಾಡುತ್ತಿದ್ದು, ಇವುಗಳು ತಡೆರಹಿತ ಆಗಿವೆ. ಒಂದು ಜಿಲ್ಲೆಯಿಂದ ಹೊರಟರೆ, ನೇರವಾಗಿ ಪ್ರಮುಖ ಭಾಗಗಳಲ್ಲಿ ನಿಲುಗಡೆ ಮಾಡಲಿವೆ. ಎಲ್ಲಿ ಬೇಕೆಂದರಲ್ಲಿ ನಿಲುಗಡೆ ಇರುವುದಿಲ್ಲ.












Click it and Unblock the Notifications