ವಿಜಯಪುರ: ಬಿಸಿಎಂ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿ

Posted By:
Subscribe to Oneindia Kannada

ವಿಜಯಪುರ, ನವೆಂಬರ್ 23: ಜಿಲ್ಲೆಯ ಸಿಂದಗಿಯಲ್ಲಿರುವ ಬಿಸಿಎಂ ಹಾಸ್ಟೆಲ್ ನಲ್ಲಿ ಗುರುವಾರ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಿಂದಗಿ ತಾಲೂಕಿನ ಕಡ್ಲೆವಾಡ ಗ್ರಾಮದ ನಿವಾಸಿ ಅಮೃತ್ ಮಾದರ (22) ನೇಣಿಗೆ ಶರಣಾದ ವಿದ್ಯಾರ್ಥಿ. ಈತ ಸಿಂದಗಿ ಎಚ್.ಜಿ. ಕಾಲೇಜಿನಲ್ಲಿ ಪದವಿಯನ್ನು ವ್ಯಾಸಾಂಗ ಮಾಡುತ್ತಿದ್ದು, ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ ಉಳಿದುಕೊಂಡಿದ್ದ.

 22-year-old Student commits suicide by hanging in Sindgi BCM Hostel

ಹಾಸ್ಟೆಲ್ ಸ್ನೇಹಿತರೆಲ್ಲರೂ ಕಾಲೇಜಿಗೆ ಹೋದ ಬಳಿಕ ಯಾರು ಇಲ್ಲದ ವೇಳೇ ಅಮೃತ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಘಟನೆ ನಡೆದ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
22-year-old Student Amrut Madar committed suicide by hanging himself in backward classes boy's hostel Sindgi, Vijayapura district on November 23.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ