ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

The Kashmir Files ಸಿನಿಮಾ ನೋಡಿದ ಪೇಜಾವರ ಶ್ರೀ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 21; ದೇಶದಲ್ಲಿ ಸಂಚಲನ ಮೂಡಿಸಿರುವ 'ಕಾಶ್ಮೀರಿ ಫೈಲ್ಸ್' ಚಿತ್ರಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸಿನಿಮಾ ಕೇವಲ ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲ ಗಣ್ಯರು ಮತ್ತು ಸಂತರನ್ನು ಕೂಡಾ ಆಕರ್ಷಿಸಿದೆ.

ಸಿನಿಮಾ ಥಿಯೇಟರ್‌ಗೆ ಯಾವತ್ತೂ ಕಾಲಿರಿಸಿದ ಮಠಾಧೀಶರನ್ನು ಕೂಡ ಈ ಸಿನಿಮಾ ಥಿಯೇಟರ್‌ನತ್ತ ಸೆಳೆಯುತ್ತಿದೆ. ಉಡುಪಿ ಪೇಜಾವರ ‌ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀಗಳು 'ಕಾಶ್ಮೀರ ಫೈಲ್ಸ್' ಸಿನಿಮಾ ವೀಕ್ಷಿಸಿದರು.

ದಾಳಿ ಭಯದಿಂದ ರಾಜ್ಯ ತೊರೆಯುತ್ತಿರುವ ಕಾಶ್ಮೀರಿ ಪಂಡಿತರುದಾಳಿ ಭಯದಿಂದ ರಾಜ್ಯ ತೊರೆಯುತ್ತಿರುವ ಕಾಶ್ಮೀರಿ ಪಂಡಿತರು

ಸಿನಿಮಾ ವೀಕ್ಷಣೆ ಬಳಿಕ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು, "ಚಿತ್ರವನ್ನು ನೋಡಿ ಬಂದಿದ್ದೇವೆ. ಇತಿಹಾಸದ ಪುಟದಲ್ಲಿ ಮೆರೆಯಾದ ಸತ್ಯವನ್ನು ಈ ಚಿತ್ರ ಸ್ಫುಟವಾಗಿ ಕಣ್ಣ ಮುಂದೆ ತೆರೆದಿಟ್ಟಿದೆ. ಈ ಚಲನಚಿತ್ರ ಸತ್ಯವನ್ನು ಎತ್ತಿ ಹಿಡಿದಿದೆ" ಎಂದರು.

ವಿಶೇಷ ಲೇಖನ: ಕಾಶ್ಮೀರಿ ಕುಶಲಕರ್ಮಿಗಳ ಹೋರಾಟವಿಶೇಷ ಲೇಖನ: ಕಾಶ್ಮೀರಿ ಕುಶಲಕರ್ಮಿಗಳ ಹೋರಾಟ

Vishwaprasanna Tirtha Swamiji Watched Kashmir Files

"ನಮ್ಮ ಸಮಾಜ ನಮ್ಮ ಭಾರತೀಯತೆಯನ್ನು, ನೆಲದ ಸನಾತನ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಾದರೆ, ನಾಳೆಯ ದಿನವೂ ನಾವು ಉತ್ತಮ ದಿನಗಳನ್ನು ಕಾಣಬೇಕು ಅಂತಾ ಇದ್ದರೆ ನಮ್ಮ ತನವನ್ನು ಉಳಿಸಬೇಕೆಂದು ಎಚ್ಚರಿಕೆಯನ್ನು ನೀಡಿದೆ" ಎಂದು ಹೇಳಿದರು.

 'ನಾನು ಕಾಶ್ಮೀರಿ ಪಂಡಿತ, ಮನೆಯಲ್ಲಿದಂತಹ ಭಾವ': ವೈಷ್ಣೋ ದೇವಿ ದೇಗುಲ ಭೇಟಿ ಬಳಿಕ ರಾಹುಲ್‌ 'ನಾನು ಕಾಶ್ಮೀರಿ ಪಂಡಿತ, ಮನೆಯಲ್ಲಿದಂತಹ ಭಾವ': ವೈಷ್ಣೋ ದೇವಿ ದೇಗುಲ ಭೇಟಿ ಬಳಿಕ ರಾಹುಲ್‌

"ಬಾಕಿ ಆಕ್ರಮಣ ಒಂದೆಡೆಯಾದರೆ, ನಮ್ಮ ಮಕ್ಕಳಿಗೆ ತಪ್ಪು ತಿಳುವಳಿಕೆಯ ಮೂಲಕ ನಮ್ಮ ಮಕ್ಕಳನ್ನೇ ನಮ್ಮ ಸಮಾಜದ ವಿರುದ್ದ ಎತ್ತಿ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ನಮ್ಮ ಮುಂದಿನ ಯುವ ಜನಾಂಗವನ್ನು ಯಾವ ದಾರಿಯಲ್ಲಿ ಕರೆದುಕೊಂಡು ಹೋಗಬೇಕು ಯಾವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು? ಎಂಬುವುದನ್ನು ಈ ಚಲನಚಿತ್ರದಲ್ಲಿ ಕಟ್ಟಿಕೊಡಲಾಗಿದೆ" ಎಂದರು.

"ಈ ಚಲನಚಿತ್ರದಲ್ಲಿ ಕೇವಲ ಕಥೆಯನ್ನು ನೋಡದೆ ವಸ್ತು ಸ್ಥಿತಿಯನ್ನು ಗಮನಿಸಬೇಕು. ಇದೊಂದು ದೊಡ್ಡ ಎಚ್ಚರಿಕೆಯನ್ನು ನೀಡಿದೆ. ಸಮಾಜವನ್ನು ಸದಾ ಕಾಲ ಜಾಗೃತವಾಗುವಂತೆ ಈ ಚಲನ ಚಿತ್ರ ಎಚ್ಚರಿಸಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನೂ ತಿಳಿಯಾಗಬೇಕಾಗಿದೆ. ಕಾಶ್ಮೀರ ಪಂಡಿತರು ತಮ್ಮ ತಮ್ಮ ಸ್ವಸ್ಥಾನಗಳಿಗೆ ಹಿಂದುರುಗಬೇಕಾಗಿದೆ. ಕಾಶ್ಮೀರದಲ್ಲಿ ಮತ್ತೆ ಮರಳಿ ಆ ವೈಭವವನ್ನು ಕಾಣಬೇಕು. ಈ ಚಿತ್ರ ಎಲ್ಲಾ ಭಾಷೆಗಳಲ್ಲಿ‌ ಬಂದರೆ ಇನ್ನೂ ಉತ್ತಮವಾಗುತ್ತದೆ. ಆಕಾಲದ ಪತ್ರಿಕೆಗಳೂ ಇನ್ನು ಇವೆ. ಆ ಪತ್ರಿಕೆಗಳು ಈಗ ನಿಜ ನುಡಿದರೆ ಇನ್ನೂ ಸತ್ಯದ ಅನಾವರಣ ಆಗುತ್ತದೆ" ಎಂದು ಶ್ರೀಗಳು ತಿಳಿಸಿದರು.

"ಸಿನಿಮಾ ನೋಡಿ ತುಂಬಾ ದುಃಖವಾಗಿದೆ. ಔರಂಗಜೇಬ್, ಬಾಬರ್, ಘಜ್ನಿ, ಗೋರಿಯ ಕಾಲದಲ್ಲಿ ಹಿಂಸೆ ಕೇಳಿದ್ದೆವು. ಆದರೆ ಕಾಶ್ಮೀರದಲ್ಲೂ ನಿನ್ನೆ ಮೊನ್ನೆ ದಿನದವರೆಗೆ ಈ ಭಯಾನಕ ಕ್ರೌರ್ಯ ನಡೆದಿರುವುದು ಅರಿಗಿಸಿಕೊಳ್ಳಲಾಗುತ್ತಿಲ್ಲ. ಈ‌ ಸಿನಿಮಾದಲ್ಲಿ ಕೇವಲ ಕಥೆಯನ್ನು ನೋಡದೆ ವಸ್ತುಸ್ಥಿತಿಯನ್ನು ಗಮನಿಸಬೇಕು. ಈ ಸಿನಿಮಾ ಸಮಾಜಕ್ಕೆ‌ ದೊಡ್ಡ ಎಚ್ಚರಿಕೆ ಕೊಟ್ಟಿದೆ. ಸಮಾಜ ಸದಾಕಾಲ‌ ಜಾಗೃತರಾಗಿರುವಂತೆ ಎಚ್ಚರಿಸಿದೆ. ಈ‌ ಸಿನಿಮಾ ‌ಕಾಲ್ಪನಿಕ ಎನ್ನುವವರು ಆ ಕಾಲದ ಪತ್ರಿಕೆಗಳನ್ನು ಮತ್ತೆ ನೋಡಿದಲ್ಲಿ ಸತ್ಯ ಅರಿವಾಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಈ ಪರಿಸ್ಥಿತಿ ಕರ್ನಾಟಕ, ಕೇರಳ‌ ಹೀಗೆ ಪಕ್ಕದ ರಾಜ್ಯದ್ದೂ ಆಗಬಹುದು. ಹಾಗಾಗದಂತೆ ನಾವೆಲ್ಲ ಎಚ್ಚರ ವಹಿಸಬೇಕು" ಎಂದು ಪೇಜಾವರ ಶ್ರೀಗಳು ಕರೆ ನೀಡಿದರು.

Recommended Video

ಇಂಡಿಯನ್ ಆರ್ಮಿ ಗೆ ಸೇರ್ಬೇಕು ಅಂತ ಈ ಯುವಕ ಎಷ್ಟೆಲ್ಲಾ ಕಷ್ಟಪಡ್ತಿದ್ದಾನೆ ನೋಡಿ | Oneindia Kannada

English summary
Udupi Pejawar mutt Vishwaprasanna Tirtha swamiji watched Kashmir Files film.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X