ಮಿಸಿಸಿಪ್ಪಿಯ ರಸ್ತೆಗೆ ಮಣಿಪಾಲದ ವಿದ್ಯಾರ್ಥಿ ಹೆಸರು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಏಪ್ರಿಲ್ 26 : ಮಣಿಪಾಲದ ಕೆಎಂಸಿ 1962ನೇ ಬ್ಯಾಚ್‌ ವಿದ್ಯಾರ್ಥಿ ಡಾ.ಸಂಪತ್ ಶಿವಂಗಿ ಅವರ ಹೆಸರನ್ನು ಅಮೆರಿಕದ ಮಿಸಿಸಿಪ್ಪಿಯ ಮಾರ್ಗವೊಂದಕ್ಕೆ ಇಡಲಾಗಿದೆ. ಅವರು ಸಲ್ಲಿಸಿರುವ ಸಮುದಾಯ ಸೇವೆಯನ್ನು ಪರಿಗಣಿಸಿ 'ಡಾ.ಸಂಪತ್ ಶಿವಂಗಿ ಲೇನ್' ಎಂದು ರಸ್ತೆಗೆ ನಾಮಕರಣ ಮಾಡಲಾಗಿದೆ.

ಡಾ.ಶಿವಂಗಿ ಅವರು ಈ ಕುರಿತು ಮಣಿಪಾಲ ವಿವಿಯ ಕುಲಾಧಿಪತಿ ಡಾ.ರಾಮದಾಸ್ ಅವರಿಗೆ ಮಾಹಿತಿ ನೀಡಿದ್ದರು. ರಾಮದಾಸ್ ಪೈ ಅವರು ಡಾ.ಶಿವಂಗಿ ಅವರಿಗೆ ಶುಭ ಹಾರೈಸಿ ಪತ್ರ ಬರೆದಿದ್ದಾರೆ. 'ಇದು ಮಣಿಪಾಲ ವಿವಿಗೆ ಸಂತಸದ ಕ್ಷಣ. ಅಮೆರಿಕದಲ್ಲಿ ಶಿವಂಗಿಯವರು ಮಾಡಿದ ಕೆಲಸಗಳು ಮಣಿಪಾಲಕ್ಕೆ ಹೆಮ್ಮೆ ತಂದಿವೆ' ಎಂದು ಪೈ ಅವರು ಹೇಳಿದ್ದಾರೆ.[ವಿಶ್ವದ ಅತಿ ದೊಡ್ಡ ಸೆಲ್ಫಿ ಸ್ಟಿಕ್ ಮಣಿಪಾಲದಲ್ಲಿದೆ]

sampat shivangi

ಡಾ.ಸಂಪತ್ ಶಿವಂಗಿ ಅವರು ಮಿಸಿಸಿಪ್ಪಿಯ ಮಾನಸಿಕ ಆರೋಗ್ಯ ಇಲಾಖಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 2014ರ ಜೂನ್‌ನಲ್ಲಿ ಅವರು ಆಡಳಿತ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ರಾಜ್ಯಪಾಲ ಫಿಲ್ ಬ್ರ್ಯಾಂಟ್ ಅವರು ಎರಡನೇ ಅವಧಿಗೂ ಶಿವಂಗಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

2005-2008ರ ತನಕ ಡಾ.ಸಂಪತ್ ಶಿವಂಗಿ ಅವರು ಅಮೆರಿಕಾದ ಆರೋಗ್ಯ ಮತ್ತು ಮಾನವ ಸೇವೆಗಳ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಶಿವಂಗಿ ಅವರು ಇಂಡಿಯಾ ಅಸೋಸಿಯೇಷನ್ ಆಫ್ ಮಿಸಿಸಿಪ್ಪಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A street in the US state of Mississippi has been named after an Indian-American in recognition of his service to the community. Dr Sampat Shivangi Lane was formally named in recognition of Dr Sampat Shivangi. Dr Sampat Shivangi student of Kasturba Medical College KMC Manipal 1962 batch.
Please Wait while comments are loading...