ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ಮನೆ ಮನೆಗೆ ಲಸಿಕೆ, ಏರಿಕೆಯಾಯಿತು ಲಸಿಕೆ ಪಡೆಯುವವರ ಸಂಖ್ಯೆ

|
Google Oneindia Kannada News

ಉಡುಪಿ, ಡಿಸೆಂಬರ್ 05; ಉಡುಪಿ ಜಿಲ್ಲಾಡಳಿತ ಕೋವಿಡ್ ಲಸಿಕೆ ನೀಡಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಜಿಲ್ಲೆಯು ಶೀಘ್ರದಲ್ಲಿ ಲಸಿಕಾಕರಣದಲ್ಲಿ ಶೇ 100ರಷ್ಟು ಗುರಿ ತಲುಪಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

ಕೋವಿಡ್‌ನಿಂದ ಗರಿಷ್ಠ ಸುರಕ್ಷತೆ ಪಡೆಯಲು ಎರಡು ಡೋಸ್ ಲಸಿಕೆಯನ್ನು ಪಡೆಯುವುದು ಅಗತ್ಯವಾಗಿದೆ. ಈಗಾಗಲೇ ಮೊದಲನೇ ಡೋಸ್ ಪಡೆದ ಕೆಲವರು ತಮ್ಮಲ್ಲಿ ರೋಗ ನಿರೋಧಕ ಶಕ್ತಿ ಅಧಿಕಗೊಂಡಿದ್ದು, ಕೋವಿಡ್ ಸೋಂಕು ತಗುಲಿದರೂ ನಮಗೆ ಯಾವುದೇ ಅಪಾಯವಿಲ್ಲ 2 ಡೋಸ್ ಪಡೆಯಬೇಕಾಗಿಲ್ಲ ಎಂಬ ಭಾವನೆ ಹೊಂದಿದ್ದಾರೆ.

ಭಾರತದ ಶೇ 50ರಷ್ಟು ಜನರು ಸಂಪೂರ್ಣ ಲಸಿಕೆ ಪಡೆದಿದ್ದಾರೆಭಾರತದ ಶೇ 50ರಷ್ಟು ಜನರು ಸಂಪೂರ್ಣ ಲಸಿಕೆ ಪಡೆದಿದ್ದಾರೆ

ಮೊದಲ ಡೋಸ್ ಪಡೆದು ಅವಧಿ ಮೀರಿದ್ದರೂ ಲಸಿಕಾ ಕೇಂದ್ರಗಳಿಗೆ ಎರಡನೇ ಡೋಸ್ ಪಡೆಯಲು ಬರುತ್ತಿರಲಿಲ್ಲ. ಉಡುಪಿ ಜಿಲ್ಲಾಡಳಿತ 'ಮನೆ ಮನೆಗೆ ಲಸಿಕಾ ಮಿತ್ರ' ಎಂಬ ಕಾರ್ಯಕ್ರಮ ಆರಂಭಿಸಿ, ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಿ, ಅವರ ಮನವೊಲಿಸಿ ಲಸಿಕೆ ನೀಡುತ್ತಿರುವುದರಿಂದ ಒಂದು ವಾರದಿಂದ ಜಿಲ್ಲೆಯಲ್ಲಿ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

15 ವರ್ಷದ ಮಕ್ಕಳಿಗೆ ತಪ್ಪಾಗಿ ಕೋವಿಡ್ 19 ಲಸಿಕೆ, ಆಸ್ಪತ್ರೆಗೆ ದಾಖಲು15 ವರ್ಷದ ಮಕ್ಕಳಿಗೆ ತಪ್ಪಾಗಿ ಕೋವಿಡ್ 19 ಲಸಿಕೆ, ಆಸ್ಪತ್ರೆಗೆ ದಾಖಲು

Udupi Special Vaccination Drive Get Good Response

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ಪಡೆಯದ ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ, ಲಸಿಕಾ ಮಿತ್ರರು ಕಾರ್ಯಕ್ರಮವನ್ನು ನವೆಂಬರ್ 22 ರಿಂದ 30ರವರಗೆ ಜಿಲ್ಲೆಯ ಪ್ರತಿ ಮನೆಗಳನ್ನು ಜಿಲ್ಲೆಯ ಮತದಾರರ ಪಟ್ಟಿಯೊಂದಿಗೆ ಭೇಟಿ ನೀಡುವ ಮೂಲಕ, ಲಸಿಕೆ ಪಡೆದಿರುವ ಮತ್ತು ಪಡೆಯದಿರುವವರ ಬಗ್ಗೆ ಪರಿಶೀಲನೆ ನಡೆಸಲಾಗಿದೆ.

ಕೋವಿಡ್ ಸೋಂಕಿತರ ಶವ 15 ತಿಂಗಳ ಬಳಿಕ ಪತ್ತೆ; ತನಿಖೆಗೆ ಸಮಿತಿಕೋವಿಡ್ ಸೋಂಕಿತರ ಶವ 15 ತಿಂಗಳ ಬಳಿಕ ಪತ್ತೆ; ತನಿಖೆಗೆ ಸಮಿತಿ

ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯ 158 ಗ್ರಾಮ ಪಂಚಾಯತಿಗಳ 1111 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಟ್ಟು 1011885 ಮಂದಿ 18 ವರ್ಷ ಮೇಲ್ಪಟ್ಟವರಿದ್ದು, ಹೊರ ಜಿಲ್ಲೆ/ ರಾಜ್ಯ/ ದೇಶದಲ್ಲಿ 96377 ಮಂದಿ ಇದ್ದಾರೆ. ಮೃತಪಟ್ಟವರು ಮತ್ತು ಜಿಲ್ಲೆಯಿಂದ ಹೊರಗಿರುವವರನ್ನು ಹೊರತುಪಡಿಸಿದರೆ ಒಟ್ಟು ಪ್ರಸ್ತುತ 897728 ಮಂದಿ ಪ್ರಥಮ ಡೋಸ್ ಪಡೆಯುವ ಅರ್ಹ ನಾಗರೀಕರಿದ್ದು, ಇದರಲ್ಲಿ 870423 ಮಂದಿ ಈಗಾಗಲೇ ಪ್ರಥಮ ಡೋಸ್ , 738220 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದು, 27305 ಮಂದಿ ಪ್ರಥಮ ಡೋಸ್ ಮತ್ತು 132203 ಮಂದಿ ಎರಡನೇ ಡೋಸ್ ಪಡೆಯಲು ಬಾಕಿ ಇದ್ದಾರೆ.

Udupi Special Vaccination Drive Get Good Response

ಜಿಲ್ಲೆಯಲ್ಲಿ ನವೆಂಬರ್ 26ಕ್ಕೆ 1020 ಮಂದಿ ಪ್ರಥಮ ಡೋಸ್,11201 ಮಂದಿ ಎರಡನೇ ಡೋಸ್. 27ಕ್ಕೆ 978 ಮಂದಿ ಪ್ರಥಮ ಡೋಸ್, 8077 ಮಂದಿ ಎರಡನೇ ಡೋಸ್, 28ಕ್ಕೆ 512 ಮಂದಿ ಪ್ರಥಮ ಡೋಸ್, 3668 ಮಂದಿ ಎರಡನೇ ಡೋಸ್,29 ಕ್ಕೆ 1825 ಮಂದಿ ಪ್ರಥಮ ಡೋಸ್, 12898 ಎರಡನೇ ಡೋಸ್, 30ಕ್ಕೆ 1650 ಮಂದಿ ಪ್ರಥಮ ಡೋಸ್, 10216 ಎರಡನೇ ಡೋಸ್, ಡಿಸೆಂಬರ್ 1 ಕ್ಕೆ ಮಂದಿ 2503 ಪ್ರಥಮ ಡೋಸ್, 13973 ಎರಡನೇ ಡೋಸ್, ಡಿ. 2ಕ್ಕೆ 1471 ಮಂದಿ ಪ್ರಥಮ ಡೋಸ್, 6878 ಮಂದಿ ಎರಡನೇ ಡೋಸ್, ಡಿ. 3ಕ್ಕೆ 1681 ಮಂದಿ ಪ್ರಥಮ ಡೋಸ್, 8408 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ಒಂದೇ ವಾರದಲ್ಲಿ ಜಿಲ್ಲೆಯ ಪ್ರಥಮ ಡೋಸ್ ಲಸಿಕೆ ಪ್ರಮಾಣ ಶೇ 93ರಿಂದ ಶೇ 94.02 ಗೆ ಏರಿಕೆಯಾಗಿದ್ದು ಈ ಅವಧಿಯಲ್ಲಿ 11620 ಮಂದಿ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯುವವರ ಪ್ರಮಾಣ ಶೇ 67ನಿಂದ ಶೇ 72ಕ್ಕೆ ಏರಿಕೆಯಾಗಿದ್ದು, 64118 ಮಂದಿ ಲಸಿಕೆ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಪ್ರಥಮ ಡೋಸ್ ಲಸಿಕೆ ಪಡೆದು ಹೊರ ಜಿಲ್ಲೆ/ ರಾಜ್ಯಗಳಿಗೆ ತೆರಳಿರುವ ನಾಗರೀಕರು ತಾವು ಇರುವಲ್ಲಿಯೇ 2ನೇ ಡೋಸ್ ಲಸಿಕೆ ಪಡೆಯಬೇಕು, ಇದುವರೆಗೂ ಪ್ರಥಮ ಡೋಸ್ ಪಡೆಯಲು ಬಾಕಿ ಇರುವ ಹಾಗೂ ಎರಡನೇ ಡೋಸ್ ಪಡೆಯಲು ಅರ್ಹರಿರುವ ಸಾರ್ವಜನಿಕರು ಆದ್ಯತೆಯ ಮೇಲೆ ಲಸಿಕೆ ಪಡೆದರೆ ಉಡುಪಿ ಜಿಲ್ಲೆಯ ಲಸಿಕಾಕರಣದಲ್ಲಿ ಶೇ 100ರಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ.

ಉಡುಪಿ ಜಿಲ್ಲೆಯಲ್ಲಿ 18ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ 2 ಡೋಸ್ ಕೋವಿಡ್ ಲಸಿಕೆ ನೀಡಿ ಅವರನ್ನು ಕೋವಿಡ್‌ನಿಂದ ರಕ್ಷಿಸುವುದು ಹಾಗೂ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ, ಮತದಾರರ ಪಟ್ಟಿಯ ಮೂಲಕ ಮನೆ ಮನೆ ಭೇಟಿ ನೀಡಿ ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಲಾಗಿದೆ. ಇದುವರೆಗೂ ಲಸಿಕೆ ಪಡೆಯದವರ ಮನವೊಲಿಸಿ ಲಸಿಕೆಯ ಮಹತ್ವ ತಿಳಿಸಿ ಲಸಿಕೆ ನೀಡಲಾಗುತ್ತಿದೆ.

"ಎಲ್ಲಾ ಸಮುದಾಯಗಳ ಮುಖಂಡರು, ಸಂಘ ಸಂಸ್ಥೆಗಳೂ ಹಾಗೂ ಸಾರ್ವಜನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಕೂಲಿ ಕಾರ್ಮಿಕರು ಲಸಿಕೆ ಪಡೆಯಲು ಅನುಕೂಲವಾಗುವಂತೆ ಭಾನುವಾರದಂದು ವಿಶೇಷ ಲಸಿಕಾ ಶಿಬಿರ ಆಯೋಜಿಸಲಾಗುತ್ತಿದೆ" ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

Recommended Video

ಗೋಧಿ ಹಾಗೂ ಜೀವರಕ್ಷಕ ಔಷಧ ಸಾಗಿಸಲು ಪಾಕ್ ಅನುಮತಿ | Oneindia Kannada

ಬರಹ ಕೃಪೆ; ಉಡುಪಿ ವಾರ್ತಾ ಭವನ

English summary
Special Covid vaccination drive from Udupi district administration. Get good response, district will achieve 100 percent vaccine coverage soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X