ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ರಿಕ್ಷಾ ಚಾಲಕನ ಕೊಲೆ
ರಸ್ತೆಯಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಉಂಟಾದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಿಕ್ಷಾ ಚಾಲಕರೊಬ್ಬರನ್ನು ಚೂರಿಯಿಂದ ಇರಿದು ಭಾನುವಾರ ರಾತ್ರಿ ಕೊಲೆ ಮಾಡಲಾಗಿದೆ.
ಉಡುಪಿ, ಜನವರಿ 30: ಕ್ಷುಲ್ಲಕ ಕಾರಣಕ್ಕೆ ರಿಕ್ಷಾ ಚಾಲಕರೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಭಾನುವಾರ ರಾತ್ರಿ ಕರಾವಳಿ ಬೈಪಾಸ್ ಸಮೀಪದ ಶಾರದಾ ಇಂಟರ್ ನ್ಯಾಷನಲ್ ಹೊಟೇಲ್ ಮುಂಭಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಮೃತರನ್ನು ನಿಟ್ಟೂರು ಸಮೀಪ ಕೊಡಂಕೋರಿನ ಹನೀಫ್ ಎಂದು ಗುರುತಿಸಲಾಗಿದೆ. ಕರಾವಳಿ ಬೈಪಾಸ್ ಕಡೆಯಿಂದ ಹನೀಫ್ ತನ್ನ ಮನೆಗೆ ರಿಕ್ಷಾದಲ್ಲಿ ಹೋಗುತ್ತಿರುವಾಗ ರಸ್ತೆ ಮಧ್ಯೆ ಅಪರಿಚಿತ ವ್ಯಕ್ತಿಗಳೊಂದಿಗೆ ಸೈಡ್ ಕೊಡುವ ವಿಚಾರದಲ್ಲಿ ವಾದ ವಿವಾದ ಉಂಟಾಗಿತ್ತೆನ್ನಲಾಗಿದೆ.[ಪುಣೆ ಇನ್ಫೋಸಿಸ್ ಮಹಿಳಾ ಟೆಕ್ಕಿ ಕಗ್ಗೊಲೆ; ವಾಚ್ ಮನ್ ಬಂಧನ]

ಈ ವೇಳೆ ಅಪರಿಚಿತ ವ್ಯಕ್ತಿಗಳು ಹನೀಫ್ ರನ್ನು ಚೂರಿಯಿಂದ ಇರಿದಿದ್ದಾರೆ. ಸ್ಥಳಕ್ಕೆ ಬಂದ ಮತ್ತೊಬ್ಬ ರಿಕ್ಷಾ ಚಾಲಕ ಶಬ್ಬೀರ್ ಎಂಬುವವರಿಗೂ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಗಂಭೀರ ಗಾಯಗೊಂಡ ಹನೀಫ್ ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೊಬ್ಬ ರಿಕ್ಷಾ ಚಾಲಕ ಶಬ್ಬೀರ್ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಮಗುವನ್ನು ಬೆಂಕಿಗೆಸೆದ ಪ್ರಕರಣ: ಮನೆಗೆ ಮರಳಿದ ತಾಯಿ]












Click it and Unblock the Notifications