• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಡಿಯುವ ನೀರಿನ ಬಿಲ್; ಲಂಚಕ್ಕೆ ಬೇಡಿಕೆಯಿಟ್ಟ ಪಿಡಿಒ ಆಡಿಯೋ ವೈರಲ್

By ಉಡುಪಿ ಪ್ರತಿನಿಧಿ
|

ಉಡುಪಿ, ಡಿಸೆಂಬರ್ 5: ಕುಡಿಯುವ ನೀರಿನ ಬಿಲ್ ಪಾಸ್ ಮಾಡಲು ಒಂದು ಲಕ್ಷದ 20 ಸಾವಿರ ರೂಪಾಯಿ ಲಂಚಕ್ಕೆ ಪಿಡಿಒ ಬೇಡಿಕೆಯಿಟ್ಟಿದ್ದಾರೆಂಬ ಆಡಿಯೋ ಉಡುಪಿಯಲ್ಲಿ ವೈರಲ್ ಆಗಿದೆ.

ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಬೆಂಬಲಿಗನಿಂದ ಹಣ ಹಂಚಿಕೆ: ವಿಡಿಯೋ ವೈರಲ್ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಬೆಂಬಲಿಗನಿಂದ ಹಣ ಹಂಚಿಕೆ: ವಿಡಿಯೋ ವೈರಲ್

ಕಳೆದ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ಬರ ಬಂದಿತ್ತು. ಕುಂದಾಪುರದ ಯಡಮೊಗೆ ಗ್ರಾಮಕ್ಕೂ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಆದೇಶ ಮಾಡಿತ್ತು. ಇದರ ಪ್ರಕಾರ ಟೆಂಡರ್ ಆಗಿದೆ, ನೀರು ಪೂರೈಕೆಯೂ ಆಗಿದೆ. ಆಗ ಪಿಡಿಓ ಆಗಿದ್ದ ಸುಮಾ ಟ್ಯಾಂಕರ್ ನೀರು ಟೆಂಡರ್ ದಾರನ ಬಳಿ ಕಮಿಷನ್ ಕುದುರಿಸಿದ್ದಾರೆ.

ಸುಮಾ ಟೆಂಡರ್ ಪಡೆದವನ ಜೊತೆ ಮಾತನಾಡಿದ ಆಡಿಯೋ ಈಗ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬೇಸಿಗೆಯಲ್ಲಿ ನೀರು ಪೂರೈಸಿದ ಬಿಲ್ 5 ಲಕ್ಷದ 68 ಸಾವಿರ ಆಗಿತ್ತು. ಅದನ್ನು ಪಾಸ್ ಮಾಡಿಸಲು ಪಿಡಿಓ ಗೆ 1 ಲಕ್ಷ 20 ಸಾವಿರ ಲಂಚ ಕೊಡಬೇಕು ಎಂದು ಸುಮಾ ಆಡಿಯೋ ಕ್ಲಿಪ್ ನಲ್ಲಿ ಒತ್ತಾಯ ಮಾಡಿದ್ದಾರೆ. ಅದನ್ನು ಕೊಡಲೇಬೇಕು ಎಂದು ಟೆಂಡರ್ ದಾರನ ಬಳಿ ಆಡಿಯೋದಲ್ಲಿ ಚೌಕಾಶಿ ನಡೆದಿದೆ. ಸದ್ಯ ಸಿದ್ದಾಪುರ ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಮಾ ಮೇಲೆ ಕುಂದಾಪುರ ತಹಶೀಲ್ದಾರ್, ಜಿಲ್ಲಾ ಪಂಚಾಯತ್ ಸಿಇಒ, ಡಿಸಿಗೆ ಸಾರ್ವಜನಿಕರು ದೂರು ನೀಡಿದ್ದಾರೆ.

English summary
The audio of a PDO demanding a bribe of one lakh twenty thousand to pass a drinking water bill is viral in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X