ಉಡುಪಿ : ಖಾಸಗಿ ಬಸ್ಸುಗಳಿಗೆ ಬರಲಿದೆ ಕಲರ್ ಕೋಡಿಂಗ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಸೆಪ್ಟೆಂಬರ್ 10 : ಉಡುಪಿ ಜಿಲ್ಲೆಯಲ್ಲಿ ಇನ್ನು ಮುಂದೆ ಖಾಸಗಿ ಬಸ್‌ಗಳು ಹೊಸದಾಗಿ ಪರವಾನಗಿ ಪಡೆದು ಸಂಚರಿಸಬೇಕಿದ್ದರೆ ಕಲರ್ ಕೋಡಿಂಗ್ ಕಡ್ಡಾಯ. ಖಾಸಗಿ ಬಸ್‌ಗಳಿಗೆ ಕಲರ್ ಕೋಡಿಂಗ್ ಅಳವಡಿಸುವುದನ್ನು 2016 ರ ಜೂ.4 ರಂದು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಉಡುಪಿಯಲ್ಲಿ 2, 3 ನಿಮಿಷಕ್ಕೊಂದು ಸಿಟಿ, ಸರ್ವೀಸ್, ಎಕ್ಸ್‌ಪ್ರೆಸ್ ಬಸ್ಸುಗಳು ಓಡಾಡುತ್ತಿವೆ. ಇದರಿಂದಾಗಿ ನಗರದ ವಾಹನ ಸಂಚಾರ ದಟ್ಟಣೆ ವಿಪರೀತವಾಗಿದೆ. ಉದಾರೀಕರಣ ನೀತಿಯಿಂದಾಗಿ ಪರ್ಮಿಟ್ ಯಾರು ಕೇಳಿದರೂ ನಿರಾಕರಿಸುವಂತಿಲ್ಲ.[ಶಿವಮೊಗ್ಗದಲ್ಲಿ ಸರ್ಕಾರಿ ನಗರ ಸಾರಿಗೆ ಸಂಚಾರ ಆರಂಭ]

bus

ಬಸ್ಸುಗಳು ಹೆಚ್ಚಾದರೂ ರಸ್ತೆಗಳು ಮಾತ್ರ ಹಾಗೇ ಇವೆ. ಕೆಲವೆಡೆ ಒತ್ತುವರಿಯಿಂದ ರಸ್ತೆಯ ಅಗಲ ಕಿರಿದಾಗಿದ್ದೂ ಇದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ನಿತ್ಯ ನಿರಂತರ ರಗಳೆ, ಕಿರಿಕಿರಿ ತಲೆನೋವಾಗಿ ಪೊಲೀಸರು ಮಾತ್ರವಲ್ಲದೆ ಸಾರ್ವಜನಿಕರನ್ನು ಬಾಧಿಸುತ್ತಿದೆ.[ಜೆ ನರ್ಮ್: ಮಂಗಳೂರು, ಉಡುಪಿಗೆ 65 ಅತ್ಯಾಧುನಿಕ ಬಸ್]

ಖಾಸಗಿ ಬಸ್ಸುಗಳು ನಿಗದಿತ ರೂಟ್ ಬಿಟ್ಟು ಬೇರೆ-ಬೇರೆ ಮಾರ್ಗದಲ್ಲಿ ಸಂಚರಿಸುವ, ಯಾವುದೇ ಅನುಮತಿ ಇಲ್ಲದೆ ರೂಟ್ ತಪ್ಪಿಸಿ ಮದುವೆ ದಿಬ್ಬಣಗಳಿಗೆ ತೆರಳುವ ಪ್ರವೃತ್ತಿ ತಡೆಯುವುದೂ ಅನಿವಾರ್ಯವಾಗಿದೆ. ಆದ್ದರಿಂದ, ಕಲರ್ ಕೋಡಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.[ಹೊಸ 241 ಟಾಟಾ ಬಸ್ ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ]

ಬಸ್ ಹೊರ ಭಾಗದ ಎಡ, ಬಲ ಬದಿಯ ಮಧ್ಯದಲ್ಲಿ 5 ಇಂಚು ಗಾತ್ರದಲ್ಲಿ ಒಂದು ಸುತ್ತು ಹಳದಿ ಬಣ್ಣ ಅಳವಡಿಸಿ ದೃಢೀಕರಣವನ್ನು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪಡೆದ ಬಳಿಕವಷ್ಟೇ ಪರ್ಮಿಟ್ ನೀಡಲಾಗುತ್ತದೆ. ಈಗಾಗಲೇ ಸಂಚರಿಸುತ್ತಿರುವ ಬಸ್‌ಗಳ ಹೊರತು 2016 ರ ಜೂ. 10 ರಿಂದ ರಾಜ್ಯ ಸರಕಾರ ಹೊಸ ಪರ್ಮಿಟ್ ನೀಡುವುದಕ್ಕೂ ನಿಯಂತ್ರಣ ಹೇರಿದೆ.

ಈಗ ಜಾರಿಯಾಗಿರುವ ಅಧಿಸೂಚನೆ ಪ್ರಕಾರ ಕುಂದಾಪುರ ಕಡೆಯಿಂದ ಹೊಸ ಪರವಾನಗಿ ಪಡೆದು ಬರುವ ಬಸ್‌ಗಳಿಗೆ ಕಲ್ಯಾಣಪುರ ಸಂತೆಕಟ್ಟೆ ಕೊನೆಯ ನಿಲುಗಡೆ (ಉಡುಪಿಗೆ ಬರುವಂತಿಲ್ಲ). ಮಂಗಳೂರು ಕಡೆಯಿಂದ ಬರುವ ಬಸ್‌ಗಳು ಉದ್ಯಾವರ ಬಲಾಯಿಪಾದೆಯಿಂದ ಹಿಂತಿರುಗಬೇಕು. ಮಲ್ಪೆ ಕಡೆಯಿಂದ ಬರುವ ಬಸ್‌ಗಳು ಆದಿ ಉಡುಪಿ ತನಕ ಮಾತ್ರ ಬರಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Traffic congestion in the Udupi is likely to be cleared soon. The Regional Transport Authority announced zonal colour code for buses as all buses cannot enter the city.
Please Wait while comments are loading...