ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ ಉಡುಪಿ ಐಎಎಸ್ ಅಧಿಕಾರಿ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್‌, 25: ಕಸ ಸಂಗ್ರಹಕಾರರು ಅಂದರೆ ಸಮಾಜದಲ್ಲಿ ಕೀಳರಿಮೆ ಜಾಸ್ತಿ. ಅದರಲ್ಲೂ ನಾವೇ ಸೃಷ್ಟಿಸಿದ ಕಸ, ತ್ಯಾಜ್ಯ ತುಂಬಿದ ವಾಹನ ರಸ್ತೆಯಲ್ಲಿ ಹೋಗುತ್ತಿದ್ದರೆ ಮೂಗು ಮುಚ್ಚಿ ಹೋಗುವವರೇ ಸಂಖ್ಯೆಯ ಅಧಿಕವಾಗಿದೆ. ಕಸ ಎತ್ತುವ ಸ್ವಚ್ಛತೆಯ ಸೈನಿಕರ ಬಗ್ಗೆ ಜನರಿಗಿದ್ದ ಕೀಳರಿಮೆಯನ್ನು ಹೋಗಲಾಡಿಸಲು ಉಡುಪಿಯ ಐಎಎಸ್‌ ಪ್ರಸನ್ನ ಎನ್ನುವವರು ಮುಂದಾಗಿದ್ದಾರೆ. ದಿನವಿಡೀ ತ್ಯಾಜ್ಯ ವಿಲೇವಾರಿ ಸಿಬ್ಬಂದಿ ಜೊತೆಗಿದ್ದು, ಅವರ ಜೊತೆ ಮನೆಮನೆಗೆ ಹೋಗಿ ಕಸ ಸಂಗ್ರಹಿಸಿ, ಕಸ ತುಂಬಿದ ವಾಹನವನ್ನೂ ಚಲಾಯಿಸಿ ಗಮನ ಸೆಳೆದರು. ಈ ಮೂಲಕ ಅಧಿಕಾರಿ ವರ್ಗಕ್ಕೆ ಮಾದರಿ ಆಗಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐಎಎಸ್ ಅಧಿಕಾರಿ ಪ್ರಸನ್ನ ಅವರು ಬಡಗುಬೆಟ್ಟು ಗ್ರಾಮ ಪಂಚಾಯತ್‌ನ ತ್ಯಾಜ್ಯ ವಿಲೇವಾರಿಯ ಕಾರ್ಮಿಕರ ಜೊತೆಗಿದ್ದು, ಅವರಿಗೆ ಆತ್ಮಸ್ಥೈರ್ಯ ತುಂಬುತ್ತಾ, ಇತರೆ ಅಧಿಕಾರಿಗಳಿಗೆ ಮಾದರಿ ಆಗಿದ್ದಾರೆ. ಬಡಗುಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಸರಿಯಾಗಿ ಆಗುತ್ತಿಲ್ಲ. ಜನ ಕಸವನ್ನು ಗ್ರಾಮ ಪಂಚಾಯತ್‌ನ ಸ್ವಚ್ಛತಾ ವಾಹನಕ್ಕೆ ಹಾಕದೇ ರಸ್ತೆಯಲ್ಲಿ ಬಿಸಾಡುತ್ತಿರುವ ಎನ್ನುವ ಆರೋಪಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಪಸನ್ನ ತಾವೇ ಸ್ವತಃ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಪ್ರತಿಯೊಂದು ಮನೆಗೆ ತೆರಳಿ ಪ್ರಸನ್ನ ಅವರು ಪರಿಶೀಲನೆ ಮಾಡಿದ್ದಾರೆ. ಐಎಎಸ್ ಅಧಿಕಾರಿಯಾದರೂ ಯಾವುದೇ ಅಹಂಕಾರವಿಲ್ಲದೆ ಜನರಿಗೆ ಸ್ವಚ್ಛತೆಯ ಪಾಠವನ್ನು ಮಾಡಿದ್ದಾರೆ. ಐಎಎಸ್ ಅಧಿಕಾರಿಯ ಈ ಉತ್ತಮ ನಡೆ ಜನ ಮೆಚ್ಚುಗೆ ಪಡೆದಿದೆ.

ಉಡುಪಿ; ರಂಗೋಲಿಯಲ್ಲಿ ಅರಳಿದ ನರೇಂದ್ರ ಮೋದಿ!ಉಡುಪಿ; ರಂಗೋಲಿಯಲ್ಲಿ ಅರಳಿದ ನರೇಂದ್ರ ಮೋದಿ!

ಜನರ ಬೇಡಿಕೆಗಳನ್ನು ಸಂಗ್ರಹಿಸಿದ ಪ್ರಸನ್ನ

ಬಡಗುಬೆಟ್ಟು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ ಚರ್ಚೆ ಮಾಡಿದ ಅವರು, ಜನರ ಬೇಡಿಕೆಗಳನ್ನು ಸಂಗ್ರಹ ಮಾಡಿದ್ದಾರೆ. ಶೀಘ್ರದಲ್ಲಿಯೇ ಬದಲಾವಣೆ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಅಲ್ಲದೇ ಸ್ವತಃ ಮನೆ ಮನೆಗಳಿಂದ‌ ಕಸ ಸಂಗ್ರಹಿಸಿ ಸ್ವಚ್ಚತಾ ವಾಹನಕ್ಕೆ ತುಂಬಿಸಿದ್ದಾರೆ. ಕೆಲವು ಮನೆಗಳ ಪರಿಸರವನ್ನು ಪರಿಶೀಲಿಸಿ ಸ್ವಚ್ಛತೆಯ ಪಾಠವನ್ನು ಮಾಡಿದ್ದಾರೆ. ಟೆಂಪೋ ಚಾಲಕನಾಗಿಯೂ ಪಸನ್ನ ಅವರು ಕಸ ಸಂಗ್ರಹ ಮಾಡಿದ್ದಾರೆ. ಬಡುಗುಬೆಟ್ಟು ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿದ ಅವರು ಸ್ವಚ್ಛತಾ ವಾಹನಕ್ಕೆ ಕಸವನ್ನು ಯಾಕೆ ಹಾಕುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮನೆಯವರು ಪ್ಲಾಸ್ಟಿಕ್ ಅನ್ನು ಸುಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದು, ಮನೆಯವರಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ. ಮನೆಯ ಪರಿಸರದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿಸಿಡಲಾದ ತ್ಯಾಜ್ಯವನ್ನು ಕಂಡು, ಈ ತ್ಯಾಜ್ಯವನ್ನು ನೀವು ರಸ್ತೆಯಲ್ಲಿ ಎಸೆಯುತ್ತೀರಿ. ಅದರ ಬದಲು ಮನೆ ಬಾಗಿಲಿಗೆ ಬರುವ ಕಸದ ವಾಹನಕ್ಕೆ ಹಾಕಿ, ನಮ್ಮ‌ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.

Udupi IAS officer does door to door garbage collection !

ನಿವಾಸಿಗಳಿಗೆ ಐಎಎಸ್ ಅಧಿಕಾರಿ ಹೇಳಿದ್ದೇನು?

ಮತ್ತೊಂದು ಮನೆಗೆ ಭೇಟಿ ನೀಡಿದಾಗ, ಸ್ವಚ್ಛತಾ ವಾಹನಕ್ಕೆ ತಿಂಗಳಿಗೆ 95ರೂಪಾಯಿ ನೀಡಲು ಕಷ್ಟ ಆಗುತ್ತದೆ. ಅದಕ್ಕಾಗಿ ಪ್ಲಾಸ್ಟಿಕ್ ಅನ್ನು ಒಲೆಗೆ ಹಾಕಿ ಹಾಕಿ ಸುಡುತ್ತೇವೆ ಎಂದು ಕಾರಣ ನೀಡಿದ್ದಾರೆ. ಇದನ್ನು ಕೇಳಿ ಆಶ್ಚರ್ಯಕ್ಕೊಳಗಾದ ಪ್ರಸನ್ನ ಅವರು, ಕಸದ ವಾಹನಕ್ಕೆ ಹಣ ಕೋಡುವುದನ್ನು ನಷ್ಟ ಎಂದು ಭಾವಿಸಬೇಡಿ. ನೀವು ಕೊಡುವ ಹಣದಿಂದ ಸಿಬ್ಬಂದಿಯ ಮನೆಯವರು ಊಟ ಮಾಡುತ್ತಾರೆ. ಜಿಲ್ಲಾಡಳಿತಕ್ಕೆ ಕಸ ವಿಲೇವಾರಿಗೆ ಸಹಕಾರ ನೀಡಿ ಎಂದು ವಿನಂತಿಸಿಕೊಂಡಿದ್ದಾರೆ. ಬಳಿಕ ಅಧಿಕಾರಿಗಳ ಜೊತೆ ಹಲವು ಭಾಗಗಳಿಗೆ ತೆರಳಿ ಮುಂದೆ ಮಾಡಬೇಕಾದ ಕ್ರಮದ ಬಗ್ಗೆ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಐಎಎಸ್ ಅಧಿಕಾರಿಯ ಕಾರ್ಯಕ್ಷಮತೆ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ.

English summary
Udupi IAS officer Prasanna visited rural houses and collected garbage from them as a part of awareness. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X