ಉಡುಪಿ ದೋಣಿ ದುರಂತ: ಓರ್ವ ಮೀನುಗಾರನ ಶವ ಪತ್ತೆ
ಉಡುಪಿ, ಆಗಸ್ಟ್ 17: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿಯಲ್ಲಿ ಭಾನುವಾರ ನಾಡದೋಣಿಯೊಂದು ಬ್ರೇಕ್ ವಾಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಮುದ್ರಪಾಲಾಗಿದ್ದರು.
Recommended Video
Sri Ramulu, ಸಚಿವರ ಆರೋಗ್ಯದಲ್ಲಿ ಚೇತರಿಕೆ | Oneindia Kannada
ದೋಣಿ ಅವಘಡದಲ್ಲಿ ಸುಮುದ್ರಪಾಲಾದವರನ್ನು ಹುಡುಕಲು ಇಂದು ಬೆಳಿಗ್ಗಿನಿಂದಲೇ ಶೋಧಕಾರ್ಯ ಮುಂದುವರೆದಿದ್ದು, ಮೀನುಗಾರ ನಾಗರಾಜ್ ಖಾರ್ವಿ ಎಂಬುವವರ ಮೃತದೇಹ ಪತ್ತೆಯಾಗಿದೆ.
ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ನಾಲ್ವರು ಮೀನುಗಾರರು ಸಮುದ್ರಪಾಲಾಗಿದ್ದರೆ, ಎಂಟು ಮೀನುಗಾರರನ್ನು ರಕ್ಷಿಸಲಾಗಿತ್ತು. ಇದೀಗ ಮಂಜುನಾಥ್ ಖಾರ್ವಿ, ಲಕ್ಷ್ಮಣ್ ಖಾರ್ವಿ ಮತ್ತು ಶೇಖರ್ ಖಾರ್ವಿ ಎಂಬುವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಇದೇ ವೇಳೆ ಸಮುದ್ರಪಾಲಾದ ಮೀನುಗಾರರಿಗೆ ಪರಿಹಾರ ನೀಡಬೇಕು ಎಂದು ಮೀನುಗಾರ ಮುಖಂಡರು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ. ಮೀನುಗಾರ ಮುಖಂಡರ ಮನವಿಗೆ ಸ್ಪಂದಿಸಿರುವ ಸಚಿವರು, ಶೀಘ್ರ ಮೀನುಗಾರರ ಮನೆಗಳಿಗೆ ಭೇಟಿ ನೀಡುವ ಭರವಸೆ ನೀಡಿದ್ದಾರೆ.












Click it and Unblock the Notifications