• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿ; 1.81 ಲಕ್ಷಕ್ಕೆ ಮಾರಾಟವಾದ ಒಂದೇ ಮೀನು!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 23; ಕಡಲು ಕೋಟ್ಯಾಂತರ ಜಲಚರಗಳ ಸಂಪತ್ತು. ಸಮುದ್ರದಲ್ಲಿ ಸಾವಿರಾರು ಬಗೆಯ ಮತ್ಸ್ಯ ಸಂತತಿ ಇದೆ. ಸಣ್ಣಪುಟ್ಟ ಮೀನುಗಳಿಂದ ಹಿಡಿದು ಗಜಗಾತ್ರದ ಮೀನುಗಳೂ ಇವೆ. ಈ ಮತ್ಸ್ಯ ಗಳ ಬೇಟೆಗೆ ಸಾವಿರಾರು ಜನ ಮೀನುಗಾರರು ಕಡಲಿನತ್ತ ಮುಖ ಮಾಡುತ್ತಾರೆ.

ರಾಜ್ಯದ ಕರಾವಳಿ ತೀರವಾದ ಉಡುಪಿಯಿಂದ ಹೊರಟ ಮೀನುಗಾರರಿಗೆ ಬಂಪರ್ ಹೊಡೆದಿದೆ. ಉಡುಪಿಯ ಮಲ್ಪೆ ಬಂದರಿನಿಂದ ಹೊರಟ ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದೆ. ಮೀನುಗಾರರಿಗೆ ಸಾಕ್ಷ್ಯಾತ್ ಮತ್ಸ್ಯ ಕನ್ಯೆಯೇ ಒಲಿದಿದ್ದು, ಮೀನುಗಾರರು ಹಿಡಿದ ಆ ಒಂದು ಮೀನು ಒಂದು ಲಕ್ಷದ ಎಂಭತ್ತು ಸಾವಿರಕ್ಕೆ ಮಾರಾಟವಾಗಿದೆ.

 ಓಯ್! ಮಂಗಳೂರಿನಲ್ಲಿ ಮೀನು ತುಂಬಾ ಅಗ್ಗ ಮಾರ್ರೆ! ಓಯ್! ಮಂಗಳೂರಿನಲ್ಲಿ ಮೀನು ತುಂಬಾ ಅಗ್ಗ ಮಾರ್ರೆ!

ಮಲ್ಪೆ ಕಡಲ ಕಿನಾರೆಯಿಂದ ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಶಾನ್ ರಾಜ್ ತೊಟ್ಟಂ ಎಂಬುವವರ ಬಲರಾಮ್ ಎಂಬ ಹೆಸರಿನ ಬೋಟ್‌ಗೆ ಅದೃಷ್ಟ ಲಕ್ಷ್ಮಿಯೇ ಖುಲಾಯಿಸಿದ್ದಾಳೆ. ಮೀನುಗಾರರು ಬೀಸಿದ ಬಲೆಗೆ 18 ಕೆಜಿ ತೂಕದ ಅಪರೂಪದ ಗೋಳಿ ಅನ್ನುವ ಮೀನು ಲಭ್ಯವಾಗಿದ್ದು, ಈ ಮೀನು ಬರೋಬ್ಬರಿ ಒಂದು ಲಕ್ಷದ ಎಂಭತ್ತೊಂದು ಸಾವಿರದ ಇನ್ನೂರು ರೂಪಾಯಿಗೆ ಮಾರಟವಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಈ ಮೀನು ಹರಾಜು ಪ್ರಕ್ರಿಯೆ ನಡೆದಿದ್ದು, ನೂರಾರು ಮಂದಿಯ ಕುತೂಹಲಕ್ಕೆ ಸಾಕ್ಷಿಯಾಗಿದೆ.

ಕಾರವಾರ: ಬರೋಬ್ಬರಿ 19 ಕೆ.ಜಿ ತೂಕದ ಕುರುಡೆ ಮೀನು ಏಂಡಿ ಬಲೆಗೆ!ಕಾರವಾರ: ಬರೋಬ್ಬರಿ 19 ಕೆ.ಜಿ ತೂಕದ ಕುರುಡೆ ಮೀನು ಏಂಡಿ ಬಲೆಗೆ!

ಪ್ರತಿ ಕೆಜಿಯೊಂದಕ್ಕೆ 9060 ರೂಪಾಯಿಯಂತೇ ಗೋಳಿ ಮೀನು ಮಾರಾಟವಾಗಿದೆ. ಈ ಗೋಳಿ ಅಪರೂಪದ ಮೀನಾಗಿದ್ದು, ಅತೀ ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಮಧುಮೇಹ, ಅಸ್ತಮಾದಂತಹ ಖಾಯಿಲೆಗಳ ಔಷಧಿಗೆ ಈ ಮೀನನ್ನು ಬಳಸಲಾಗುತ್ತದೆ. ಈ ಮೀನು ಕಲ್ಲು ಬಂಡೆಗಳ ಅಡಿಯಲ್ಲಿ ವಾಸವಾಗಿರುತ್ತದೆ. ಆದರೆ ಮೀನುಗಾರರ ಬಲೆಗೆ ಬೀಳೋದು ಬಲು ಅಪರೂಪವಾಗಿದೆ.

ಹಸಿವು ನೀಗಿಸಿಕೊಳ್ಳಲು ಕೊಳಚೆ ನೀರಲ್ಲಿ ಮೀನು ಹಿಡಿಯುವ ಸ್ಥಿತಿ! ಹಸಿವು ನೀಗಿಸಿಕೊಳ್ಳಲು ಕೊಳಚೆ ನೀರಲ್ಲಿ ಮೀನು ಹಿಡಿಯುವ ಸ್ಥಿತಿ!

ಮಲ್ಪೆ ಬಂದರಿನಿಂದ ಹರಾಜಿನಲ್ಲಿ ತೆಗೆದುಕೊಡು ಈ ಮೀನನ್ನು ಮುಂಬೈ ಮೀನುಗಾರಿಕಾ ಬಂದರಿನಲ್ಲಿ ಮಾರಾಟ ಮಾಡಲಾಗುತ್ತದೆಯಂತೇ. ಮುಂಬೈ ಯಲ್ಲಿ ಈ ಮೀನಿನದ ದರ ಪ್ರತೀ ಕೆಜಿಗೆ ಹದಿನೈದು ಸಾವಿರದಿಂದ ಹದಿನೆಂಟು ಸಾವಿರದವರೆಗೂ ಮಾರಾಟವಾಗಲಿದೆ. ಮುಂಬೈನಿಂದ ನೇರ ಔಷಧ ಕಂಪೆನಿಗಳೇ ಈ ಮೀನನ್ನು ಖರೀದಿ ಮಾಡಲಿದೆ.

ಉಡುಪಿಯ ಮಲ್ಪೆಯಲ್ಲಿ ಈ ರೀತಿಯ ಮೀನು ದೊರಕಿರೋದು ಇದೇ ಮೊದಲ ಬಾರಿಯಾಗಿದೆ. ಈ ಹಿಂದೆ ಗೋಳಿ ಜಾತಿಯ ಸಣ್ಣ ಮೀನುಗಳು ಬಲೆಗೆ ಲಭ್ಯವಾಗಿದ್ದು, ಪ್ರಥಮ ಬಾರಿಗೆ ಭಾರೀ ತೂಕದ ಮೀನು ಲಭ್ಯವಾಗಿದ್ದಾಗಿದೆ ಮತ್ತು ಇಡೀ ಮಲ್ಪೆ ಬಂದರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಮೀನು ಒಂದು ಲಕ್ಷದ ಎಂಭತ್ತೊಂದು ಸಾವಿರ ರೂಪಾಯಿಗೆ ಮಾರಾಟವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೀನುಗಾರ ವಾಸು, ಈ ರೀತಿಯ ಮೀನನ್ನು ನಾವು ಒದೇ ಮೊದಲ ಬಾರಿಗೆ ನೋಡಿದ್ದೇವೆ. ಈ ಮೀನಿನ ಹರಾಜು ಪ್ರಕ್ರಿಯೆ ಕೂಡಾ ತುಂಬಾ ಕುತೂಹಲ ವಾಗಿತ್ತು. ಮೀನುಗಾರಿಕಾ ವೃತ್ತಿಯನ್ನು ನಡೆಸಿ ಸರಿಸುಮಾರು ಎಂಟು ವರ್ಷಗಳಾಗುತ್ತಾ ಬಂದಿದೆ. ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಗೋಳಿ ಮೀನು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರೋದು ಕಂಡಿದ್ದೇನೆ ಅಂತಾ ಖುಷಿ ವ್ಯಕ್ತಪಡಿಸಿದ್ದಾರೆ.

English summary
In Udupi fisherman sold fish for Rs 1.81 lakh. Fish sold in Malpe fish market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X