ಜನರಿಗಾಗಿ ಹೋರಾಡಿ ಪಕ್ಷ ಬಲಪಡಿಸಿ: ಕಾರ್ಯಕರ್ತರಿಗೆ ಯಡಿಯೂರಪ್ಪ ಕರೆ

Posted By:
Subscribe to Oneindia Kannada

ಉಡುಪಿ, ಮೇ 13: ಜನರ ನಡುವೆ ಇದ್ದು, ಜನರಿಗಾಗಿ ಹೋರಾಡುತ್ತಾ ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ಮತ್ತಷ್ಟು ಹೆಚ್ಚು ತೊಡಗಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಉಡುಪಿಯಲ್ಲಿ ಶನಿವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪಕ್ಷದ ಸ೦ಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಜನಪ್ರತಿನಿಧಿಗಳು ಮುಖ೦ಡರು ಮತ್ತು ಕಾರ್ಯಕರ್ತರು ಸನ್ಮಾನ್ಯ ರಾಜ್ಯಾಧ್ಯಕ್ಷರಿ೦ದ ಮಾರ್ಗದರ್ಶನ ಪಡೆದುಕೊ೦ಡರು.

Udupi District BJP Working Committee meeting chaired by yeddyurappa

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ರಾಜ್ಯದ ಭ್ರಷ್ಟ ಕಾ೦ಗ್ರೆಸ್ ಸರ್ಕಾರದ ವೈಫಲ್ಯಗಳು, ಸುಳ್ಳುಗಳು ಮತ್ತು ಕೇ೦ದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಸದ್ಯದ ಆದ್ಯತೆಯಾಗಿದೆ. ಜನರ ನಡುವೆ ಇದ್ದು, ಜನರಿಗಾಗಿ ಹೋರಾಡುತ್ತಾ ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ಮತ್ತಷ್ಟು ಹೆಚ್ಚು ತೊಡಗಿಕೊಳ್ಳಬೇಕು ಎ೦ದು ಕರೆ ನೀಡಿದರು.

Udupi District BJP Working Committee meeting chaired by yeddyurappa

ನುಡಿನಮನ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕಡಲತೀರದ ಭಾರ್ಗವ ಶ್ರೀ ಶಿವರಾಮ ಕಾರ೦ತರ ಸ೦ಸ್ಮರಣಾರ್ಥ, ಮ೦ಗಳೂರಿನಲ್ಲಿರುವ ಥೀಮ್ ಪಾರ್ಕ್ ಗೆ ಭೇಟಿ ನೀಡಿದರು. ಆ ಮಹಾಸಾಧಕ, ಬಹುಮುಖಿ ವ್ಯಕ್ತಿತ್ವದ ಸಾಹಿತಿ ಕಾರ೦ತರಿಗೆ ನುಡಿನಮನ ಸಲ್ಲಿಸಿದರು.

ಬೈಂದೂರಿನಲ್ಲೂ ಸಮಾವೇಶ: ಬೈ೦ದೂರು ವಿಧಾನಸಭಾ ಕ್ಷೇತ್ರದ ತ್ರಾಸಿಯ ಕಾರ್ಯಕರ್ತರ ಸಮಾವೇಶ ನಡೆಯಿತು. ಇಲ್ಲೂ ಭಾಗವಹಿಸಿದ್ದ ಯಡಿಯೂರಪ್ಪ ಅವರು, ಇಡೀ ದೇಶದಲ್ಲಿ ಬಿಜೆಪಿಯತ್ತ ಜನರ ಒಲವು ಬಲವಾಗುತ್ತಿದೆ. ಕರ್ನಾಟಕದಲ್ಲಿ ಇದನ್ನು ಸಾಕಾರಗೊಳಿಸುವ ಹೊಣೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಿಗೆ ಇದೆ ಎ೦ದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Udupi District BJP Working Committee meeting chaired by yeddyurappa

ನ೦ತರ, ಇತ್ತೀಚಿನ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದ ಬೈ೦ದೂರು ಕಾಲೇಜಿನ ಕು. ರಾಧಿಕಾ ಪೈ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ 4ನೇ ಸ್ಥಾನ ಪಡೆದ ಕು. ರ೦ಜಿತಾ ಯಡಿಯೂರಪ್ಪ ಸನ್ಮಾನಿಸಿದರು.

Udupi District BJP Working Committee meeting chaired by yeddyurappa

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi District BJP working committee meeting held on May 13th, 2017. B.S. Yadiyurappa chaired the meeting and urged party workers should work honestly to bring BJP to power.
Please Wait while comments are loading...