ಚುನಾವಣಾ ಪ್ರಚಾರ ಸಿಡಿಯಲ್ಲಿ ಎಡವಟ್ಟು ಮಾಡಿಕೊಂಡ ಉಡುಪಿ ಜಿಲ್ಲಾಡಳಿತ

Posted By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಏಪ್ರಿಲ್ 8: ಮತದಾನ ಜಾಗೃತಿಗಾಗಿ ಉಡುಪಿ ಜಿಲ್ಲಾಡಳಿತ ಸಿಡಿ ಬಿಡುಗಡೆ ಮಾಡಿ ಎಡವಟ್ಟು ಮಾಡಿಕೊಂಡಿದೆ. ಶನಿವಾರ ಸಾಯಂಕಾಲವಷ್ಟೇ ಉಡುಪಿಯ ಮಣಿಪಾಲದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿಯ ಯಕ್ಷಗಾನದ ಹಾಡುಗಳುಳ್ಳ ಸಿಡಿ ಬಿಡುಗಡೆಗೊಳಿಸಿತ್ತು.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನೇತೃತ್ವದಲ್ಲೇ ಸಿಡಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಮಾಧ್ಯಮ ವರದಿಗಾರರಿಗೆ ಹಂಚಿದ ಸಿಡಿಯೊಂದರಲ್ಲಿ ಗೇಮ್ಸ್ ಪತ್ತೆಯಾಗಿದ್ದು, ಜಿಲ್ಲಾಡಳಿತದ ಎಡವಟ್ಟನ್ನು ತೆರೆದಿಟ್ಟಿದೆ.

ಮಾಧ್ಯಮ ವರದಿಗಾರರಿಗೆ ಹಂಚಿದ ಸಿಡಿಯೊಂದರಲ್ಲಿ ಯೂರಿಸ್ ರಿವೆಂಜ್ ಅನ್ನೋ ಗೇಮ್ ಇದ್ದು, ಯಾವುದೇ ಪ್ರಚಾರ ಸಾಮಗ್ರಿ ಹೊಂದದೇ ಇರುವುದು ಪತ್ತೆಯಾಗಿದೆ. ಚುನಾವಣಾ ಪ್ರಚಾರಕ್ಕೆ ಜಿಲ್ಲಾಡಳಿತ ಮಾಡಿಕೊಂಡಿರುವ ಎಡವಟ್ಟು ಜನರಲ್ಲಿ ನಗೆಪಾಟಲಿಗೀಡಾಗಿದೆ.

Udupi district administration has stumbled in election campaign CD

ಹಲವು ವಿಚಾರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜಿಲ್ಲಾಡಳಿತ ಈ ವಿಚಾರದಲ್ಲಿ ಅದ್ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ. ಸದ್ಯ ಇದು ಜಿಲ್ಲಾಡಳಿತ ಚುನಾವಣಾ ವಿಚಾರದಲ್ಲಿ ಅದ್ಯಾವ ಪರಿ ಗಂಭೀರತೆ ತಾಳಿದೆ ಅನ್ನೋದನ್ನು ತೆರೆದಿಟ್ಟಂತಾಗಿದೆ.

ಅಲ್ಲದೇ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸೋ ಜಿಲ್ಲಾಧಿಕಾರಿ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ. ಸದ್ಯ ಮಾಧ್ಯಮಗಳಿಗೆ ಹಂಚಿದ ಒಂದು ಸಿಡಿಯಲ್ಲಿ ಈ ಎಡವಟ್ಟು ಕಾಣಸಿಕ್ಕಿದ್ದು, ಇಂತಹ ಇನ್ನೆಷ್ಟು ಸಿಡಿಗಳು ಇವೆ ಅನ್ನೋ ಕುತೂಹಲವು ಸೃಷ್ಟಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi District Administration has stumbled in its CD released for voting awareness. The district Administration, district sweeping committee in Udupi, released a CD containing songs of voting awareness in Manipal, on Saturday evening.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ