ಇಫ್ತಾರ್ ವಿವಾದ, ಪೇಜಾವರ ಶ್ರೀ ಬೆಂಬಲಕ್ಕೆ ಧಾವಿಸಿದ ಸೂಲಿಬೆಲೆ
ಉಡುಪಿ, ಜೂನ್ 28: ಪೇಜಾವರ ಶ್ರೀಗಳು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ದೂರದೃಷ್ಟಿತ್ವ ಇರುತ್ತದೆ. ಎಂದು ಇಫ್ತಾರ್ ಕೂಟ ಆಯೋಜನೆಯ ವಿವಾದ ಹಿನ್ನಲೆಯಲ್ಲಿ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಇಂದು ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಚಕ್ರವರ್ತಿ ಸೂಲಿಬೆಲೆ ಅವರ ಜತೆ ಚರ್ಚೆ ನಡೆಸಿದರು. ಪೇಜಾವರ ಶ್ರೀಗಳ ಅನೇಕ ವರ್ಷಗಳ ಹಿಂದುತ್ವದ ಹೋರಾಟ ಮತ್ತು ಹಿಂದುತ್ವದ ಸುಧಾರಣೆಯ ಹೋರಾಟದ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಪೇಜಾವರ ಶ್ರೀಗಳು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ದೂರದೃಷ್ಟಿತ್ವ ಇರುತ್ತದೆ ಎಂದು ಹೇಳಿದ್ದಾರೆ.

"ಈ ಕಾರಣದಿಂದ ನಾವು ಯಾವತ್ತು ಅವರ ಜೊತೆಗೆ ಇದ್ದೇವೆ ಎಂದು ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಪ್ರಧಾನಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಕಲ್ಪನೆಯಲ್ಲಿ ಇವರು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಮುಸಲ್ಮಾನರು ಕೂಡ ಈ ಕಲ್ಪನೆಯನ್ನು ತೀವ್ರವಾಗಿ ಸ್ವೀಕರಿಸಿ ಮುಂದೆ ಬರಬೇಕು," ಎಂದು ಅವರು ಕರೆ ನೀಡಿದ್ದಾರೆ.
"ನಾವು ಹುಟ್ಟುವುದಕ್ಕೂ ಮೊದಲೇ ಶ್ರೀಗಳು ಹಿಂದೂ ಸಮಾಜದ ಏಳಿಗೆಗೋಸ್ಕರ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.
ಈ ಹಿಂದೆಯೂ ಮಠದಲ್ಲಿ ಸೌಹಾರ್ದದ ಕೆಲಸ ನಡೆದಿತ್ತು. ಪ್ರತಿಭಟನೆ ಮಾಡುವವರು ತಮ್ಮ ಪ್ರತಿಭಟನೆ ಯ ಒಲವು ಬಿಟ್ಟು ಸ್ವಾಮೀಜಿಗಳಿಗೆ ಬೆಂಬಲ ನೀಡುವಂತೆ ವಿನಂತಿಸುತ್ತಿದ್ದೇನೆ," ಎಂದು ಹೇಳಿದರು.












Click it and Unblock the Notifications