ಉಡುಪಿ: ಯೋಧರಿಗೆ ಮಾಸ್ಕ್ ಹೊಲಿದು ಕೊಟ್ಟ ಪುಟಾಣಿ ಕೊರೊನಾ ವಾರಿಯರ್
ಉಡುಪಿ, ಸೆಪ್ಟೆಂಬರ್ 30: ಕೊರೊನಾ ಸಂಕಷ್ಟದ ಕಾಲದಲ್ಲಿ ರಜೆಯಿಲ್ಲದೆ ದುಡಿಯುತ್ತಿರುವ ಭಾರತೀಯ ಸೇನೆಗೆ ಉಡುಪಿಯ ವಿದ್ಯಾರ್ಥಿನಿಯೊಬ್ಬಳು ಮಾಸ್ಕ್ ಹೊಲಿದು ಕೊಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾಳೆ.
ಉಡುಪಿ ಜಿಲ್ಲೆಯ ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ತರಗತಿ ಓದುತ್ತಿರುವ ಇಶಿತಾ ಆಚಾರ್ ಗೆ ದೇಶದ ಯೋಧರ ಬಗ್ಗೆ ಅಪರಿಮಿತ ಪ್ರೀತಿ, ಗೌರವ ಇದೆ.
ಕೊರೊನಾ ಲಾಕ್ ಡೌನ್ ಸಮಯದಲ್ಲಿ ಹಲವು ವಿದ್ಯಾರ್ಥಿಗಳಿಗೆ ಮಾಸ್ಕ್ ಹೊಲಿದು ಕೊಟ್ಟು ಸುದ್ದಿಯಾಗಿದ್ದ ಈಕೆ, ದೇಶದ ಗಡಿ ಕಾಯುವ ಯೋಧರಿಗೆ 300 ಮಾಸ್ಕ್ ಹೊಲಿದು ಕೊಡುವ ಮೂಲಕ ಮತ್ತೊಮ್ಮೆ ದೇಶಪ್ರೇಮ ಮೆರೆದಿದ್ದಾಳೆ.

ವಿದ್ಯಾರ್ಥಿಗಳಿಗೆ ಮಾಸ್ಕ್ ಹೊಲಿದು ಕೊಟ್ಟ ಬಳಿಕ ಸ್ಪೂರ್ತಿಗೊಂಡ ಈಕೆ, ಮತ್ತಷ್ಟು ಮಾಸ್ಕ್ ತಯಾರಿಸಿದ್ದಳು. ಹೊಲಿದ ಮಾಸ್ಕನ್ನು ಆರ್ಹರಿಗೆ ನೀಡಬೇಕು ಅಂತ ಯೋಚನೆ ಬಂದಾಗ, ಮೊದಲು ನೆನಪಾಗಿದ್ದೇ ಯೋಧರು.
Recommended Video
ಚಳಿಗಾಲದಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಕೊರೊನಾ ಸೋಂಕು | Oneindia Kannada

ದೇಶ ಕಾಯಲು ಸಾಧ್ಯ ಆಗದೇ ಇದ್ದರು ವೀರ ಯೋಧರ ಅಳಿಲು ಸೇವೆ ಮಾಡಬೇಕು ಅಂತ ಯೋಧರಿಗೆ ಮಾಸ್ಕ್ ನೀಡಲು ತೀರ್ಮಾನಿಸಿದೆ ಎನ್ನುತ್ತಾಳೆ ಈ ಪುಟಾಣಿ ಇಶಿತಾ ಆಚಾರ್. ಪುಟಾಣಿಯ ಈ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಪತ್ರ ಬಂದಿದ್ದು, ಅದರಲ್ಲಿ ಸಚಿವರು ತಮ್ಮ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.












Click it and Unblock the Notifications