ಕೋಟ ಡಬಲ್ ಮರ್ಡರ್ ಪ್ರಕರಣ:ಎಲ್ಲಾ ಆರೋಪಿಗಳ ಬಂಧನ
ಉಡುಪಿ, ಫೆಬ್ರವರಿ 15:ಉಡುಪಿಯನ್ನೇ ಬೆಚ್ಚಿ ಬೀಳಿಸಿದ್ದ ಕೋಟ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೋಟದಲ್ಲಿ ನಡೆದಿದ್ದ ಭರತ್ ಮತ್ತು ಯತೀಶ್ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಡಬಲ್ ಮರ್ಡರ್ ಪ್ರಕರಣದಲ್ಲಿ ನೇರ ಭಾಗಿಯಾಗಿರುವ ಆರೋಪಿಗಳಾದ ಚಂದ್ರಶೇಖರ ರೆಡ್ಡಿ ಹಾಗೂ ಮಲ್ಪೆ ತೊಟ್ಟಂ ನಿವಾಸಿ ರತೀಶ್ ಕರ್ಕೆರಾ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ಬಂಧನದ ಮೂಲಕ ಒಟ್ಟು ಆರೋಪಿಗಳ ಸಂಖ್ಯೆ 15ಕ್ಕೇರಿದೆ.
ಉಡುಪಿಯ ಕೋಟದಲ್ಲಿ ಜನವರಿ.26ರ ತಡರಾತ್ರಿ ಭರತ್ ಮತ್ತು ಯತೀಶ್ ಅವರನ್ನು ಭೂವಿವಾದಕ್ಕೆ ಸಂಬಧಿಸಿದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಜಿ.ಪಂ.ಸದಸ್ಯ ಹಾಗೂ ಇಬ್ಬರು ಪೊಲೀಸ್ ಸಂಬಂಧಿಗಳನ್ನು ಕೋಟ ಪೊಲೀಸರು ಬಂಧಿಸಿದ್ದರು.

ಇತ್ತೀಚೆಗೆ ಭರತ್ ಮತ್ತು ಯತೀಶ್ ಕೊಲೆ ವಿಚಾರದಲ್ಲಿ ಮನೆಯವರು ಮತ್ತು ಊರಿನವರು ಆರೋಪಿಗಳಿಗೆ ತಕ್ಕ ಶಾಸ್ತಿಯಾಗುವಂತೆ ದೇವರಿಗೆ ಮೊರೆ ಹೋಗಿದ್ದರು.
ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನಕ್ಕೆ ಮೃತರ ಕುಟುಂಬಿಕರು, ಊರ ನಾಗರಿಕರಿಂದ ದೇವಿಗೆ ಹುಯಿಲು ಕೊಟ್ಟಿದ್ದರು. ಊರ ಮಕ್ಕಳಿಗಾದ ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ಕೋರಿಕೊಂಡಿದ್ದರು.











Click it and Unblock the Notifications