Get Updates
Get notified of breaking news, exclusive insights, and must-see stories!

ಸ್ಯಾಂಡಲ್ ವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆದ ತೃತೀಯ ಲಿಂಗಿ

ಉಡುಪಿ, ಜೂನ್.20: ತೃತೀಯ ಲಿಂಗಿಗಳು ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದಲ್ಲಿ ನೋಡುವ ಭಾವನೆಯೇ ಬೇರೆ. ಆದರಿಲ್ಲಿ ತೃತೀಯ ಲಿಂಗಿ ಸ್ಯಾಂಡಲ್ ವುಡ್‌ನಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಅವಕಾಶ ಪಡೆದಿದ್ದಾರೆ.

ಈ ಮೂಲಕ ತೃತೀಯ ಲಿಂಗಿಗಳೂ ಹೀರೊಯಿನ್ ಆಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೌದು, ಈ ತೃತೀಯ ಲಿಂಗಿಯ ಹೆಸರು ಕಾಜೋಲ್. ಮೂಲತಃ ಮಂಡ್ಯದವಳಾದ ಕಾಜೋಲ್ ಉಡುಪಿಗೆ ಬಂದು ಹತ್ತು ವರುಷಗಳೇ ಕಳೆದಿವೆ.

ಈಗಾಗಲೇ ರೇಡಿಯೋ ಜಾಕಿ, ರಂಗನಟಿಯಾಗಿ ತನ್ನ ಪ್ರತಿಭೆ ಮೆರೆದಿರುವ ಕಾಜೋಲ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಹಿರೋಯಿನ್ ಆಗಲಿದ್ದಾರೆ. ಮೈಸೂರಿನ ಚಂದನ್ ಗೌಡ ನಿರ್ದೇಶಕ, ನಿರ್ಮಾಪಕರಾಗಿರುವ 'ಲವ್ ಬಾಬ' ಸಿನಿಮಾದಲ್ಲಿ ನಾಯಕಿಯಾಗಿ ಕಾಜೋಲ್ ಅಭಿನಯಿಸಿದ್ದಾರೆ.

Transgender has the opportunity to act as a heroine in Sandalwood

ಮೂರು ಜನ ನಾಯಕ ನಟರನ್ನು ಹೊಂದಿರುವ ಈ ಸಿನಿಮಾದಲ್ಲಿ ಕಾಜೋಲ್ ನಾಯಕಿಯಾಗಿ ನಟಿಸುವ ಅವಕಾಶ ಪಡೆದ ಮೊದಲ ಟ್ರಾನ್ಸ್ ಜೆಂಡರ್ ಎನಿಸಿದ್ದಾರೆ.

ಕಾಜೋಲ್ ತೃತೀಯ ಲಿಂಗಿಯಾಗಿದ್ದರೂ ಈಕೆಯ ಸಾಧನೆ ಮಾತ್ರ ಅನ್ಯರಿಗೆ ಮಾದರಿ. 'ನೋಡುವೆ ನಿನ್ನ' ಎಂಬ ಮೊದಲ ರಂಗಪ್ರದರ್ಶನದಲ್ಲಿ ಮುಖ್ಯಪಾತ್ರ ವಹಿಸಿ ಕಾಜೋಲ್ ಸೈ ಎನಿಸಿಕೊಂಡಿದ್ದರು. ಈ ನಾಟಕ ನೋಡಿಯೇ ನಿರ್ದೇಶಕ ಇವರಿಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ದಾರೆ.

Transgender has the opportunity to act as a heroine in Sandalwood

30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ 2018ರ ಅಂತ್ಯಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಚಿತ್ರದಲ್ಲಿ ನಾಯಕನಟಿಯಾಗಿ ತೃತೀಯ ಲಿಂಗಿ ಅಭಿನಯಿಸುವುದು ಚಿತ್ರದ ಒಂದು ವಿಶೇಷತೆಯಾದ್ರೆ, ಪೂರ್ತಿ ಸಿನಿಮಾ ಮೊಬೈಲ್‌ನಲ್ಲೇ ಚಿತ್ರೀಕರಣವಾಗುತ್ತಿರುವುದು ಇನ್ನೊಂದು ವಿಶೇಷತೆ.

ರಾಜ್ಯದಲ್ಲೇ ಉತ್ತಮ ತಂತ್ರಜ್ಞಾನದ ನೆರವಿನಿಂದ ಮೊಬೈಲ್‌ನಲ್ಲೇ ಚಿತ್ರೀಕರಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಚಿಕ್ಕವಯಸ್ಸಿನಿಂದಲೇ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು ಕಂಡಿದ್ದ ಕಾಜೋಲ್ ಕನಸು ಇದೀಗ ನನಸಾಗಿದೆ. ಮಂಗಳೂರು, ಮೈಸೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಒಟ್ಟಿನಲ್ಲಿ ವಾಣಿಜ್ಯ, ಮನೋರಂಜನೆ, ವಿಶೇಷತೆ ಹೊಂದಿರುವ ಈ ಸಿನಿಮಾಕ್ಕೆ ಪ್ರೇಕ್ಷಕ ಪ್ರಭುವಿನ ರೆಸ್ಪಾನ್ಸ್ ಯಾವ ರೀತಿ ಇರುತ್ತದೆ ಎಂಬುದು ಸಿನಿಮಾ ಬಿಡುಗಡೆ ಬಳಿಕವೇ ಗೊತ್ತಾಗಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+