ಉಡುಪಿಯಲ್ಲಿ ಇಂದಿನಿಂದ ಸಾಂಪ್ರದಾಯಿಕ ಮೀನುಗಾರಿಕೆ ಶುರು; ಸಮುದ್ರರಾಜನಿಗೆ ಪೂಜೆ
ಉಡುಪಿ, ಜೂನ್ 22: ಹೊಸ ಋತುವಿನ ಮೀನುಗಾರಿಕೆಗೆ ತೆರಳುವ ಮುನ್ನ ಸಮುದ್ರ ರಾಜನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಇಂದು ಉಡುಪಿಯ ಮಲ್ಪೆಯಲ್ಲಿ ಮೀನುಗಾರರು ಬಲರಾಮ ದೇವರಿಗೆ ಪೂಜೆ ಸಲ್ಲಿಸಿ, ಸಮುದ್ರಕ್ಕೆ ಕ್ಷೀರ ಅರ್ಪಿಸಿ ಮೀನುಗಾರಿಕೆ ಪ್ರಾರಂಭಿಸಿದರು.
Recommended Video
Karnataka Lockdown? ಲಾಕ್ ಡೌನ್ ಎದುರಿಸಲು ಕರ್ನಾಟಕ ರಾಜ್ಯ ಎಲ್ಲಾ ರೀತಿಯಲ್ಲೂ ರೆಡಿ | Oneindia Kannada
ಮಳೆಗಾಲ ಬಂತೆಂದರೆ ಇಲ್ಲಿ ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ. ಮಳೆಗಾಲದ ಎರಡು ತಿಂಗಳು ಮೀನುಗಾರಿಕೆಗೆ ನಿಷೇಧದ ಅವಧಿ. ಜೂನ್ ನಲ್ಲಿ ಸ್ಥಗಿತಗೊಳ್ಳುವ ಮೀನುಗಾರಿಕೆ ಆಗಸ್ಟ್ ತಿಂಗಳಲ್ಲಿ ಪ್ರಾರಂಭಗೊಳ್ಳಬೇಕು. ಈ ಅವಧಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಅಂದರೆ ನಾಡದೋಣಿ ಮೀನುಗಾರಿಕೆ ನಡೆಸುವುದು ಪದ್ಧತಿ.

ಅದರಂತೆ ಇಂದು ಸಮುದ್ರರಾಜನಾದ ಬಲರಾಮನಿಗೆ ಪೂಜೆ ಸಲ್ಲಿಸಿ ಮೀನುಗಾರರು ಅಧಿಕೃತವಾಗಿ ನಾಡದೋಣಿ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಇಳಿದಿದ್ದಾರೆ. ಪ್ರಾಕೃತಿಕ ವಿಕೋಪಗಳಿಂದ ಮುಕ್ತಿ ಸಿಗುವಂತಾಗಲು ಮತ್ತು ವಿಪುಲ ಮೀನುಗಾರಿಕೆ ಆಗುವಂತಾಗಲು ಮೀನುಗಾರರು ಪ್ರಾರ್ಥನೆ ನಡೆಸಿದರು.












Click it and Unblock the Notifications