• search
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾವಿನ ನಂತರವೂ ಅಂಗ ದಾನದ ಮೂಲಕ ಏಳು ಜೀವ ಉಳಿಸಿದ ನಿರ್ಮಲಾ ಭಟ್

By ಉಡುಪಿ ಪ್ರತಿನಿಧಿ
|

ಉಡುಪಿ, ಜೂನ್ 27: ಅಪಘಾತದಲ್ಲಿ ಮೃತಪಟ್ಟ ಮಹಿಳೆಯೊಬ್ಬರು ಏಳು ಜೀವಗಳನ್ನು ಉಳಿಸಿದ್ದಾರೆ. ತಾವು ಮೃತಪಡುವಾಗ ಆಕೆ ಮಾಡಿದ ಸಾಹಸ ಅಂಥದ್ದಾ ಎಂದು ಹುಬ್ಬೇರಿಸುವ ಮುನ್ನ ವರದಿಯನ್ನೇ ಪೂರ್ತಿ ಓದಿಬಿಡಿ. ಆಕೆ ಹೆಸರು ನಿರ್ಮಲಾ ಭಟ್. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು. ಅಪಘಾತದಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.

ಈ ವಿಚಾರವನ್ನು ಮಣಿಪಾಲದ ವೈದ್ಯರು ಘೋಷಣೆ ಮಾಡಿದರು. ಆಗ ನಿರ್ಮಲಾ ಭಟ್ ಅವರ ಕುಟುಂಬ ಕೂಡ ಇತರ ಎಲ್ಲರಂತೆ ದುಃಖದಲ್ಲಿ ಮುಳುಗಿದ್ದು ಸುಳ್ಳಲ್ಲ. ಆದರೆ ನಿರ್ಮಲಾ ಅವರ ಅಂಗದಾನ ಮಾಡುವ ತೀರ್ಮಾನ ಕೈಗೊಂಡರು. ಕುಟುಂಬದವರ ಅನುಮತಿಯನ್ನು ಪಡೆದು, ಇದೀಗ ಅಂಗ ದಾನದ ಮೂಲಕ ಏಳು ಜೀವವನ್ನು ಉಳಿಸಲಾಗಿದೆ.

ಅಂಗಾಂಗ ದಾನ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಿರ್ಮಲಾ ಅವರ ಎರಡು ಹೃದಯ ಕವಾಟ, ಕಣ್ಣು ಗುಡ್ಡೆ (ಕಾರ್ನಿಯಾ), ಮೂತ್ರಪಿಂಡ (ಕಿಡ್ನಿ) ಮತ್ತು ಯಕೃತ್ತು (ಲಿವರ್) ಕಸಿ ಮಾಡಿ, ಮಣಿಪಾಲ ಕಸ್ತೂರಬಾ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ, ಕಣ್ಣು ಗುಡ್ಡೆ ಮತ್ತು ಒಂದು ಮೂತ್ರಪಿಂಡವನ್ನು ಬೆಂಗಳೂರಿನಲ್ಲಿ ಗುರುತಿಸಿದ ರೋಗಿಗಳಿಗೆ ನೀಡಲಾಗಿದೆ.

This is how Nirmala Bhat saved 7 lives after her death by organ donation?

ಯಕೃತ್ತು ಮತ್ತು ಎರಡು ಹೃದಯ ಕವಾಟವನ್ನು ಮಂಗಳೂರಿನ ಗುರುತಿಸಿದ ರೋಗಿಗೆ ಹಾಗೂ ಒಂದು ಮೂತ್ರಪಿಂಡವನ್ನು ಬೆಂಗಳೂರಿಗೆ ಝೀರೋ ಟ್ರಾಫಿಕ್ ಮೂಲಕ ರವಾನೆ ಮಾಡಲಾಯಿತು. ಒಟ್ಟಿನಲ್ಲಿ ನಿರ್ಮಲಾ ಭಟ್ ಅಂಗ ದಾನದ ಮೂಲಕ ಏಳು ಮಂದಿಯಲ್ಲಿ ಜೀವಂತವಿದ್ದಾರೆ. ಮಣಿಪಾಲದ ವೈದ್ಯರು ಎರಡನೇ ಬಾರಿ ಯಶಸ್ವಿಯಾಗಿ ಅಂಗಗಳನ್ನು ರವಾನಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಉಡುಪಿ ಸುದ್ದಿಗಳುView All

English summary
Here is the story of Nirmala Bhat, Karkala, Udupi. This is how she saved 7 lives after her death in an accident. Her family took a decision about organ donation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more