• search
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಗ್ಲಿಷ್ ಭಾಷೆಯಿಂದ ಉಳಿದುಕೊಂಡ ಕನ್ನಡ ಸರಕಾರಿ ಶಾಲೆಯಿದು!

|

ಉಡುಪಿ, ಆಗಸ್ಟ್ 9: ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ ಪರಿಚಯಿಸಿದ ಕಾರಣಕ್ಕೆ ಒಂದು ಸರಕಾರಿ ಶಾಲೆ ಮುಚ್ಚುವುದರಿಂದ ತಪ್ಪಿದ ವರದಿ ಇದು. ವಿಷಯ ಏನಪ್ಪಾ ಅಂದರೆ, ಉಡುಪಿ ಜಿಲ್ಲೆಯ ಬೈಂದೂರಿನ ಬಾಡಾ ಹಿರಿಯ ಪ್ರಾಥಮಿಕ ಶಾಲೆಯು ಇನ್ನೇನು ಮುಚ್ಚಬೇಕು ಎಂಬ ಸ್ಥಿತಿ ತಲುಪಿತ್ತು. ಅದಕ್ಕೆ ಕಾರಣವಾಗಿ ಇದ್ದಿದ್ದು ವಿದ್ಯಾರ್ಥಿಗಳ ಸಂಖ್ಯೆಯ ಕೊರತೆ.

ಆದರೆ, ಇಲ್ಲಿ ಯಾವಾಗ ಇಂಗ್ಲಿಷ್ ಅನ್ನು ಒಂದು ಬೋಧನಾ ವಿಷಯವಾಗಿ ಪರಿಚಯಿಸಲಾಯಿತೋ ಆಗಿಂದ ಪರಿಸ್ಥಿತಿ ಬದಲಾಯಿತು. ಕಳೆದ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಎರಡಕ್ಕೆ ಕುಸಿದು ಹೋಗಿತ್ತು. ಅದೇ ಈಗ 62 ತಲುಪಿದೆ. ಇಲ್ಲಿರುವುದು ಕನ್ನಡ ಮಾಧ್ಯಮ ಶಾಲೆ. 95 ವರ್ಷದಷ್ಟು ಹಳೆಯದು. ಈ ಶಾಲೆಯ ಆಟದ ಮೈದಾನ ಬಹಳ ಪ್ರಸಿದ್ಧಿ ಪಡೆದಿದೆ.

ಶಾಲಾ ಮಕ್ಕಳು ತಿಂಗಳಲ್ಲಿ 2 ದಿನ ಸ್ಕೂಲ್‌ ಬ್ಯಾಗ್‌ ಹೊರಬೇಕಾಗಿಲ್ಲ

ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುವ ಮುನ್ನ ಇಲ್ಲಿಂದಲೇ ಕಲಿತು, ವಿದ್ಯಾವಂತರಾಗಿ ವಿಜ್ಞಾನಿಗಳು, ಕ್ರೀಡಾಳುಗಳು, ವೈದ್ಯರು ಹಾಗೂ ಎಂಜಿನಿಯರ್ ಗಳಾದ ಸಾಕಷ್ಟು ಮಂದಿ ಇದ್ದಾರೆ. ಒಂದು ಕಾಲದಲ್ಲಿ ಈ ಶಾಲೆಯಲ್ಲಿ ಎಂಟುನೂರು ವಿದ್ಯಾರ್ಥಿಗಳು ಇದ್ದರು. ಆದರೆ ಯಾವಾಗ ಇಂಗ್ಲಿಷ್ ಮೀಡಿಯಂ ಶಾಲೆಗಳು ಹೆಚ್ಚಾದವೋ ಅಲ್ಲಿಂದ ಆಚೆಗೆ ಪರಿಸ್ಥಿತಿ ಬದಲಾಯಿತು.

This is how English subject and old students saved this government school

ಈ ಶಾಲೆಯಲ್ಲೇ ಓದಿದ ವಿದ್ಯಾರ್ಥಿಗಳು ಒಂದು ಸಂಘ ಮಾಡಿಕೊಂಡು, ಈ ಶಾಲೆಯನ್ನು ಉಳಿಸುವ ಪ್ರಯತ್ನ ಮಾಡಿದರು. ಅದರ ಭಾಗವಾಗಿ ಇಂಗ್ಲಿಷ್ ವ್ಯಾಕರಣ ಮತ್ತು ಸಾಮಾನ್ಯಜ್ಞಾನ ಹೇಳಿಕೊಡುವ ನಿರ್ಧಾರವಾಯಿತು. ಆ ಹಳೇ ವಿದ್ಯಾರ್ಥಿಗಳ ಸಂಘದ ಮೂಲಕವೇ ಇಬ್ಬರು ಶಿಕ್ಷಕರನ್ನು ಕೂಡ ಪರಿಚಯಿಸಲಾಯಿತು. ಅದೇ ವರ್ಷ ಇಪ್ಪತ್ನಾಲ್ಕು ವಿದ್ಯಾರ್ಥಿಗಳು ಸೇರಿದರು ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್.

ಈ ಶಾಲೆಯ ಚೇತರಿಕೆಗೆ ಹಳೆ ವಿದ್ಯಾರ್ಥಿಗಳ ಕೊಡುಗೆ ಕೂಡ ತುಂಬ ದೊಡ್ಡದಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವುದಕ್ಕೆ ಟೆಂಪೋ ವ್ಯವಸ್ಥೆ ಮಾಡಲಾಗಿದೆ. ಅದರ ಚಾಲಕರಿಗೆ ಸಂಘದಿಂದಲೇ ವೇತನ ಕೊಡಲಾಗುತ್ತಿದೆ. ವಾರದಲ್ಲಿ ಮೂರು ದಿನ ವಿದ್ಯಾರ್ಥಿಗಳಿಗೆ ಯೋಗ ತರಗತಿಗಳು ಇರುತ್ತವೆ. ಕಳೆದ ವರ್ಷ ಸರಕಾರದಿಂದ ಸಮವಸ್ತ್ರ ಬರುವುದು ತಡವಾದಾಗ ಈ ಸಂಘದಿಂದಲೇ ಹಣ ಒಗ್ಗೂಡಿಸಿ, ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ನೀಡಲಾಗಿದೆ.

ವಿದ್ಯಾರ್ಥಿಗಳಿಗಾಗಿ ವಾಟರ್ ಪ್ಯೂರಿಫೈಯರ್, ಆಟದ ವಸ್ತುಗಳು ಕೂಡ ವ್ಯವಸ್ಥೆ ಮಾಡಿರುವ ಬಗ್ಗೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಿ.ಕೆ.ಜಯನಂದ ಇವೆಲ್ಲ ತಮ್ಮ ಕರ್ತವ್ಯ ಎಂಬಂತೆ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಉಡುಪಿ ಸುದ್ದಿಗಳುView All

English summary
Udupi district Byndoor taluk Bada government higher primary school almost in the stage of shut down. But after introducing English as a subject and old students efforts again increase the number of students. Here is the story of success.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more